ತಮ್ಮ ತಮ್ಮ ಮೂಲ ಧರ್ಮವನ್ನು ಬಿಟ್ಟು, ಬೇರೆ ಧರ್ಮಕ್ಕೆ ಮತಾಂತರಗೊಂಡ ದಕ್ಷಿಣ ಭಾರತದ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಲೆಗೆ ಧರ್ಮವಿಲ್ಲ, ಜಾತಿ ಭಾಷೆಯ ಹಂಗಿಲ್ಲ, ಕಲೆಯೇ ಒಂದು ಧರ್ಮ, ಕಲಾವಿದರನ್ನೇ ದೇವರು ಎಂದು ಅಭಿಮಾನಿಗಳು ಭಾವಿಸುತ್ತಾರೆ. ಅದರಲ್ಲೂ ಸಿನಿಮಾ ಹಿರೋಯಿನ್ ಗಳಿಗೆ ಅಭಿಮಾನಿಗಳು ದೇವಸ್ಥಾನವನ್ನೇ ಕಟ್ಟಿಸಲು ಹೊರಟ ಘಟನೆಗಳು ಸಹ ನಡೆದಿವೆ. ನಟಿಯರು ಸಹ ತಮ್ಮ ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡ ಘಟನೆಗಳು ನಡೆದಿವೆ. ಬನ್ನಿ ಮತಾಂತರಗೊಂಡ ದಕ್ಷಿಣ ಭಾರತದ ಟಾಪ್ 5 ನಟಿಯರು ಯಾರು ಎಂಬುದನ್ನು ತಿಳಿಯೋಣ.
ಟಾಪ್ 1 – ನಯನತಾರಾ : ಮಲಯಾಳಂ ಕ್ರಿಶ್ಚಿಯನ್ ಕುಟುಂಬದ ಹಿನ್ನೆಲೆಯಿಂದ ಬಂದ ನಟಿ ನಯನತಾರಾರವರ ಮೂಲ ಹೆಸರು ಡಯಾನಾ ಮರಿಯಮ್ ಕುರಿಯನ್. ಮಲಯಾಳಂ ಸಿನಿಮಾಗಳಿಂದ ವೃತ್ತಿ ಜೀವನ ಆರಂಭಿಸಿದ ನಯನತಾರಾ, ತಮಿಳು, ತೆಲುಗು,ಕನ್ನಡ,ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ನಿರ್ದೇಶಕ ವಿಘ್ನೇಶ್ ರವರನ್ನು ವಿವಾಹವಾಗಿರುವ ಅವರು ಚೆನ್ನೈ ನ ಆರ್ಯ ಸಮಾಜದ ದೇವಸ್ಥಾನದಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
2.ಜ್ಯೋತಿಕಾ – ದಕ್ಷಿಣ ಭಾರತದ ಫೇಮಸ್ ನಟಿಯಾದ ಜ್ಯೋತಿಕಾ ಮೂಲತಃ ಪಂಜಾಬಿ ಮತ್ತು ಮುಸ್ಲಿಂ ಕುಟುಂಬದ ಹಿನ್ನಲೆಯವರು. ಇವರ ಮೂಲ ಹೆಸರು ಸಾಧನಾ. ನಟ ಸೂರ್ಯರನ್ನ ಮದುವೆಯಾಗಿರುವ ಇವರು ಹಿಂದೂ ಧರ್ಮಕ್ಕಾಗಿ ಮತಾಂತರವಾಗಿದ್ದಾರೆ.
3.ನಗ್ಮಾ – ಹಿಂದೂ ಧರ್ಮದ ಖ್ಯಾತ ನಟಿ ನಗ್ಮಾ ಹೆಸರು ನಂದಿತಾ ಮೊರಾರ್ಜಿಯಾಗಿತ್ತು. ಸಿನಿಮಾಕ್ಕೆ ಬಂದು ನಗ್ಮಾ ಆಗಿ ಮಿಂಚಿದ ಇವರು, ಸದ್ಯ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ.

ಟಾಪ್ 4 – ಖುಷ್ಬೂ ಸುಂದರ್ – ದಕ್ಷಿಣ ಭಾರತದ ಫೇಮಸ್ ನಟಿಯಾದ ಖುಷ್ಬೂ ರವರು ಮೂಲತಃ ಮುಸ್ಲಿಂ ಸಮುದಾಯದವರು.ಇವರ ಮೂಲ ಹೆಸರು ನಖತ್ ಖಾನ್ ಎಂದು. ಸಿನಿಮಾಕ್ಕೆ ಬಂದ ನಂತರ ಖುಷ್ಬೂ ಎಂದು ಬದಲಾದ ಇವರು, ಸದ್ಯ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಟಾಪ್ 5 – ಮೋನಿಕಾ – ಟಾಪ್ ನಟಿ ಮೋನಿಕಾ ಸಹ ಮೂಲತಃ ಹಿಂದೂ ಧರ್ಮದವರು. ಇವರು ಸದ್ಯ ಮುಸ್ಲಿಂ ಸಮುದಾಯಕ್ಕೆ ಮತಾಂತರವಾಗಿದ್ದು ಎಂ.ಜಿ ರಹೀಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.