ನಾನು ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳು ಸಹಾಯ ಮಾಡುತ್ತೇನೆ ಎಂದ ಮಾಜಿ ಕ್ರಿಕೆಟಿಗ.ಯಾರು ಮತ್ತು ಹೇಳಿದ್ದೇನು ಗೊತ್ತೇ?

26

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ವಿರಾಟ್ ಕೊಹ್ಲಿ ಅವರು ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ ನಲ್ಲಿ ಇದ್ದಾರೆ. ಈಗಾಗಲೇ ಅವರು ರಿಕವರಿ ಮಾಡಿಕೊಳ್ಳಲು ಹಲವಾರು ಅವಕಾಶಗಳನ್ನು ನೀಡಿದರೂ ಕೂಡ ಪ್ರತಿಯೊಂದು ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಪ್ರತಿಯೊಬ್ಬ ವಿದೇಶಿ ಬೌಲರ್ ಅನ್ನು ಸಿಂಹ ಸ್ವಪ್ನದಂತೆ ಕಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಇಂದು ಸೋತು ಸುಣ್ಣವಾಗಿದ್ದಾರೆ.

ಈಗಾಗಲೇ ಇಂಗ್ಲೆಂಡ್ ಸರಣಿಯಲ್ಲಿ ಕೂಡ ಅವರಿಗೆ ಅವಕಾಶ ನೀಡಲಾಗಿತ್ತು ಆದರೆ ಯಾವುದೇ ಅತ್ಯುತ್ತಮ ಪ್ರದರ್ಶನವನ್ನು ಅವರು ತೋರ್ಪಡಿಸಲು. ಮುಂದಿನ ದಿನಗಳಲ್ಲಿ ಇದು ಅವರಿಗೆ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಲು ಸಾಧ್ಯವಾಗದೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಹಲವಾರು ಮಾಜಿ ಕ್ರಿಕೆಟಿಗರು ಅವರ ಕುರಿತಂತೆ ಋಣಾತ್ಮಕ ವಿಮರ್ಶೆಗಳನ್ನು ಕೂಡ ಮಾಡಿದ್ದರು ಆದರೆ ಮಾಜಿ ಕ್ರಿಕೆಟಿಗ ಆಗಿರುವ ಸುನಿಲ್ ಗಾವಸ್ಕರ್ ಮಾತ್ರ ವಿರಾಟ್ ಕೊಹ್ಲಿ ಅವರ ಪರವಾಗಿ ಮಾತನಾಡಿದ್ದಾರೆ. ಹೌದು ಈಗಾಗಲೇ ಇಂಗ್ಲೆಂಡ್ ಏಕದಿನ ಸರಣಿಯ ನಂತರ ಜಿಂಬಾಬ್ವೆ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ರವರಿಗೆ ಬರೋಬ್ಬರಿ ಒಂದು ತಿಂಗಳ ವಿಶ್ರಾಂತಿ ದೊರೆಯಲಿದೆ.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ 20 ನಿಮಿಷಗಳು ಸಾಕು ನನಗೆ ಅವರ ಸಮಸ್ಯೆ ಏನು ಎಂದು ತಿಳಿದು ಅದಕ್ಕೆ ಪರಿಹಾರವನ್ನು ಕಂಡು ಹುಡುಕಬಹುದಾಗಿದೆ ಎಂಬುದಾಗಿ ಸುನೀಲ್ ಗಾವಸ್ಕರ್ ಹೇಳಿದ್ದಾರೆ. ಸದ್ಯದ ಮಟ್ಟಿಗೆ ಜಿಂಬಾಬ್ವೆ ಸರಣಿ ವಿರಾಟ್ ಕೊಹ್ಲಿ ಅವರಿಗೆ ಕೊನೆಯ ಅವಕಾಶವಾಗಿ ಪರಿಣಮಿಸಿದ್ದು ಅಲ್ಲಿ ಅವರು ಅತ್ಯುತ್ತಮ ಎನ್ನುವ ಪದ ಕ್ಕಿಂತ ಹೆಚ್ಚಿನ ಉತ್ತಮ ಆಗುವುದರತ್ತ ಗುಣಮಟ್ಟದ ಆಟವನ್ನು ಪ್ರದರ್ಶಿಸಲೇಬೇಕಾಗಿದೆ. ಒಂದು ವೇಳೆ ಈ ಸರಣಿಯಲ್ಲಿ ಕೂಡ ಅವರು ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದರೆ ಏಷ್ಯಾಕಪ್ ಆಗು ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯುವ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂಬುದಾಗಿ ಎಲ್ಲಾ ಕಡೆಗಳಲ್ಲಿ ಮಾತು ಓಡಾಡುತ್ತಿದೆ.