ನಿಮ್ಮ ಮದುವೆಗೂ ಮುನ್ನ, ನಿಮ್ಮ ಸಂಗಾತಿ ಜೊತೆ ಈ ವಿಷಯಗಳನ್ನು ಚರ್ಚೆ ಮಾಡುವುದನ್ನು ಮರೆಯಬೇಡಿ. ಏನೆಲ್ಲಾ ಕೇಳಬೇಕು ಗೊತ್ತೇ?

39

ನಮಸ್ಕಾರ ಸ್ನೇಹಿತರೆ ಮದುವೆಯೆನ್ನುವುದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುವ ಅತ್ಯುನ್ನತ ನಿರ್ಧಾರವಾಗಿದೆ‌. ಯಾಕೆಂದರೆ ಈ ನಿರ್ಧಾರವನ್ನು ನೀವು ಜೀವನಪೂರ್ತಿ ಪಾಲಿಸಬೇಕಾಗುತ್ತದೆ ಹೀಗಾಗಿ ಇದೊಂದು ಪ್ರಮುಖವಾಗಿರುತ್ತದೆ. ಇನ್ನು ಮದುವೆಗೂ ಮುನ್ನ ನಿಮ್ಮ ಸಂಗಾತಿಯೊಂದಿಗೆ ಕೆಲವೊಂದು ವಿಚಾರಗಳನ್ನು ಚರ್ಚಿಸಲೇಬೇಕು. ಹಾಗಿದ್ದರೆ ಅಂತಹ ವಿಚಾರಗಳೇನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮೊದಲು ಕೌಟುಂಬಿಕ ಆಚರಣೆಗಳ ಕುರಿತಂತೆ ಪರಸ್ಪರ ತಿಳಿದುಕೊಳ್ಳಬೇಕು. ಆಯಾಯ ಕುಟುಂಬಕ್ಕೆ ಅದರದೇ ಆದ ನಂಬಿಕೆ ಸಂಪ್ರದಾಯ ಆಚರಣೆಗಳು ಇರುತ್ತದೆ. ಹೀಗಾಗಿ ಮದುವೆಗೂ ಮುನ್ನವೇ ಅದರ ಕುರಿತಂತೆ ಚರ್ಚಿಸಿದರೆ ಇಬ್ಬರ ನಡುವೆ ಪರಸ್ಪರ ಕುಟುಂಬದ ಕುರಿತಂತೆ ಇರುವ ಗೊಂದಲಗಳನ್ನು ತಿಳಿಯಾಗುತ್ತದೆ.

ಹಣ ಹಾಗೂ ಕೆಲಸದ ಬಗ್ಗೆ ಕೂಡ ಮದುವೆಗೂ ಮುನ್ನ ಚರ್ಚಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮದುವೆಯಾದ ನಂತರ ಭವಿಷ್ಯದಲ್ಲಿ ಹಣ ಹಾಗೂ ಕೆಲಸದ ನಿರ್ಧಾರಗಳು ಕೂಡ ಪ್ರಮುಖವಾದ ಕಾರ್ಯವನ್ನು ನಿರ್ವಹಿಸುತ್ತವೆ ಹೀಗಾಗಿ ಇದರ ಕುರಿತಂತೆ ಪರಸ್ಪರ ಯಾವ ಮಟ್ಟದ ನಿರೀಕ್ಷೆಗಳನ್ನು ಹೊಂದಿದ್ದಾರೆ ಅಥವಾ ಹೇಗೆ ಇದನ್ನು ನಿರ್ವಹಿಸಬಹುದು ಎನ್ನುವ ಸ್ಪರ್ಶಿಸಿದರೆ ಮದುವೆ ನಂತರ ಎಲ್ಲಾ ಸಲೀಸಾಗಿ ಇರುತ್ತದೆ.

ಕೊನೆಯದಾಗಿ ಪ್ರಮುಖವಾಗಿ ಕೆಲಸದ ಸಮಯದ ಕುರಿತಂತೆ ನಿಮ್ಮ ಸಂಗಾತಿಯಲ್ಲಿ ಚರ್ಚಿಸುವುದು ಬಹಳ ಪ್ರಮುಖವಾಗಿದೆ. ಯಾಕೆಂದರೆ ಒಂದು ವೇಳೆ ನಿಮ್ಮ ಮದುವೆಯ ನಂತರ ಕೆಲಸದ ಸಮಯ ಬದಲಾದರೆ ಅದಕ್ಕೆ ತಕ್ಕಂತೆ ನಿಮ್ಮ ಸಂಗಾತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಪ್ರಮುಖವಾಗಿರುತ್ತದೆ. ಮದುವೆಗೂ ಮುನ್ನವೇ ಉದ್ಯೋಗದ ಸಮಯದ ಕುರಿತಂತೆ ಕ್ಲಾರಿಟಿ ಯನ್ನು ಹೊಂದಿದ್ದಾರೆ ಮದುವೆ ನಂತರ ಇದರ ಕುರಿತಂತೆ ಯಾವುದೇ ಉದ್ವಿಗ್ನತೆ ದಂಪತಿಗಳ ನಡುವೆ ಬರುವುದಿಲ್ಲ. ಇವಿಷ್ಟು ವಿಚಾರಗಳನ್ನು ಮದುವೆಗೂ ಮುನ್ನ ಇಬ್ಬರು ಚರ್ಚಿಸಬೇಕಾಗುತ್ತದೆ