ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದರೂ ಕೂಡ ಕೊಹ್ಲಿ ಫಾರ್ಮ್ ಬಗ್ಗೆ ನೇರವಾಗಿ ಮಾತನಾಡಿದ ದಿನೇಶ್. ಹೇಳಿದ್ದೇನು ಗೊತ್ತೇ?

20

ನಮಸ್ಕಾರ ಸ್ನೇಹಿತರ 2019 ರಿಂದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಆಗಿರುವ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಪ್ರಾರಂಭವಾಗಿದ್ದು ಇದುವರೆಗೂ ಕೂಡ ತಮ್ಮ ಅಸಲಿ ಲಯಕ್ಕೆ ಮರಳಲು ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರವನ್ನು ಕಲಿಸುವಂತಹ ಅಂಶವಾಗಿದೆ.

ಯಾಕೆಂದರೆ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಹೀಗೆ ಮುಂದುವರೆದರೆ ಖಂಡಿತವಾಗಿ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಸಂಪೂರ್ಣವಾಗಿ ವಿಫಲವಾಗಲಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ಕೆಲವು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಅವರು ತಮ್ಮ ಫಾರ್ಮ್ ಗೆ ಮರಳಿ ಬರುವ ತನಕ ತಂಡದಿಂದ ಹೊರಗಿಡಿ ಎನ್ನುವುದಾಗಿ ಕೂಡ ಸೂಚನೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರ ಸಾಮರ್ಥ್ಯದ ಕುರಿತಂತೆ ಆರ್ಸಿಬಿ ತಂಡದ ಆಟಗಾರ ಹಾಗೂ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ ರವರು ಮಾತನಾಡಿದರು.

ವಿರಾಟ್ ಕೊಹ್ಲಿ ರವರು ಒಂದು ಕಾಲದಲ್ಲಿ ಅತ್ಯುತ್ತಮ ಯಶಸ್ಸನ್ನು ಆನಂದಿಸಿದ್ದರು ಅವರ ಸಾಮರ್ಥ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ಸರಣಿಯಿಂದ ಅವರು ಹೊರಗುಳಿದ ರಬಹುದು ಆ ವಿರಾಮದಿಂದ ಸಂಪೂರ್ಣ ತಯಾರಿಯನ್ನು ಮಾಡಿಕೊಂಡು ಮತ್ತೊಮ್ಮೆ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ವಿರಾಟ್ ಕೊಹ್ಲಿ ಅವರ ಕುರಿತಂತೆ ದಿನೇಶ್ ಕಾರ್ತಿಕ್ ರವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರ ಈ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.