ಇಂದು ಇಷ್ಟೆಲ್ಲ ವಾದ ವಿವಾದ ನಡೆಯುತ್ತಿರುವಾಗ ಅಂದು ಪವಿತ್ರ-ಸುಚೇಂದ್ರ ರವರು ಒಂದಾಗಿದ್ದು ಹೇಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಕನ್ನಡ ಹಾಗೂ ತೆಲುಗು ಸುದ್ದಿವಾಹಿನಿಗಳಲ್ಲಿ ಹಲವಾರು ಸಮಯಗಳಿಂದ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವಿಚಾರವೆಂದರೆ ಅದು ಪವಿತ್ರ ಲೋಕೇಶ್ ಹಾಗೂ ನರೇಶ್ ರವರ ವಿಚಾರ. ನರೇಶ್ ರವರ ಮೂರನೇ ಹೆಂಡತಿ ರಮ್ಯಾ ರಘುಪತಿ ಹೇಳುವಂತೆ ನರೇಶ್ ರವರು ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಿದ್ದಾರೆ ಅಥವಾ ಆಗಲು ಹೊರಟಿದ್ದಾರೆ ಎನ್ನುವುದಾಗಿ. ಕೆಲವೊಂದು ಸುದ್ದಿಗಳು ಈಗಾಗಲೇ ಇವರಿಬ್ಬರು ಜೊತೆಯಾಗಿದ್ದಾರೆ ಎಂಬುದಾಗಿ ಹೇಳಿದ್ದರೆ.
ಆದರೆ ಇದಕ್ಕೆ ಪವಿತ್ರಾಲೋಕೇಶ್ ಹಾಗೂ ನಟ ನರೇಶ ರವರು ನೀಡುವ ಉತ್ತರ ಏನೆಂದರೆ ಇಬ್ಬರೂ ಕೂಡ ಉತ್ತಮ ಸ್ನೇಹಿತರೆ ಹೊರತು ಅದರ ಮುಂದೆ ಬೇರೆ ಯಾವುದೇ ಸಂಬಂಧ ನಮ್ಮಿಬ್ಬರ ನಡುವೆ ಇಲ್ಲ ಎಂಬುದಾಗಿ. ಒಂದು ಸಂದರ್ಭದಲ್ಲಿ ಪ್ರತಿಯೊಂದು ಸುದ್ದಿವಾಹಿನಿಗಳಲ್ಲಿ ಇದೊಂದು ಕಾಮನ್ ಸುದ್ದಿಯಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೊಂಚ ಮಟ್ಟಿಗೆ ತಗ್ಗಿದೆ ಎಂದು ಹೇಳಬಹುದಾಗಿದೆ. ಸದ್ಯದ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರ ಲೋಕೇಶ್ ಅವರು ತಮ್ಮ ಪತಿ ಆಗಿರುವ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ರವರ ಕುರಿತಂತೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಇಬ್ಬರು ಕೂಡ ಸೀರಿಯಲ್ ಚಿತ್ರೀಕರಣದ ಸಂದರ್ಭದಲ್ಲಿ ಪರಿಚಿತರಾಗಿ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಂದು ಇಬ್ಬರ ನಡುವೆ ಸ್ನೇಹ ಇತ್ತು ಅಥವಾ ಪ್ರೀತಿ ಇತ್ತು ಎಂದು ಏನು ಬೇಕಾದರೂ ಹೇಳಬಹುದು. ನನಗೆ ಅವರು ತುಂಬಾ ಗೌರವ ನೀಡುತ್ತಾರೆ. ನನ್ನ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ನಿರ್ಧಾರಗಳಲ್ಲಿ ನನ್ನ ಜೊತೆಯಾಗಿ ನನ್ನ ಅತ್ಯಂತ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಅವರನ್ನು ನನ್ನ ಜೀವನದಲ್ಲಿ ಪಡೆದಿರುವುದಕ್ಕೆ ನಾನು ಅದೃಷ್ಟವಂತೆ ಅವರಲ್ಲಿ ಒಂದು ತಪ್ಪನ್ನು ಕೂಡ ಹುಡುಕಲು ನನಗೆ ಸಾಧ್ಯವಿಲ್ಲ ಎಂಬುದಾಗಿ ಸುಚೇಂದ್ರಪ್ರಸಾದ್ ಹೇಳಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಸಂಬಂಧ ಯಾವ ಮಟ್ಟಕ್ಕೆ ತಾಜಾತನದಿಂದ ಇದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಬಹುದು.