ಟಾಲಿವುಡ್ ನಲ್ಲಿ ಈ ನಟಿಯ ಮದುವೆಯ ಖರ್ಚಿನ ಬಗ್ಗೆ ಬಾರಿ ಚರ್ಚೆ: ಯಾಕೆ ಗೊತ್ತೇ?? ಎಷ್ಟು ಖರ್ಚು ಮಾಡಿ ಮದುವೆಯಾಗಿದ್ದರು ಗೊತ್ತೇ??

106

ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಏನಿಲ್ಲವೆಂದರೂ ಹಣ ಮಾತ್ರ ಬೇಕೇ ಬೇಕು ಎನ್ನುವುದು ಸದ್ಯದ ಪರಿಸ್ಥಿತಿಗೆ ಸರಿ ತೂಗುವಂತಹ ಮಾತು ಎಂದರೆ ತಪ್ಪಾಗಲಾರದು. ಅದರಲ್ಲೂ ಸೆಲೆಬ್ರಿಟಿಗಳ ಜೀವನದಲ್ಲಿ ಇದೊಂದು ಪ್ರಮುಖವಾಗಿ ಬೇಕಾಗಿರುವಂತಹ ವಿಚಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ನಾವು ನಿಮಗೆ ಒಬ್ಬ ನಟಿಯ ಮದುವೆಯ ಖರ್ಚಿನ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದ ಒಂದು ಕಾಲದ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದ ನಟಿ ಇಂದ್ರಜಾ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಇವರು ತಮಿಳು ತೆಲುಗು ಹಿಂದಿ ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಕೆಲವೊಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ 2006 ರಲ್ಲಿ ಮೊಹಮ್ಮದ್ ಅಬ್ಸರ್ ಎನ್ನುವವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅದಾದ ನಂತರ ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರವನ್ನು ಕಾಯ್ದುಕೊಂಡಿದ್ದರು. ಸದ್ಯಕ್ಕೆ ಇತ್ತೀಚಿಗೆ ಮತ್ತೆ ನಟನೆಗೆ ವಾಪಸಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯ ವಾಹಿನಿಯ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಸುದ್ದಿ ಇದೆ.

ಇನ್ನು ನಟಿ ರೋಜಾ ರವರು ಜಬರ್ದಸ್ತ್ ಕಾರ್ಯಕ್ರಮದಿಂದ ಹೊರಬಂದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಇಂದ್ರಜಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮದುವೆ ಕುರಿತಂತೆ ಮಾತನಾಡಿ ನಮ್ಮ ಮದುವೆಗೆ ಕೇವಲ 13 ಜನ ಬಂದಿದ್ದರು ಖರ್ಚಾಗಿದ್ದು ಕೇವಲ 7500 ರೂಪಾಯಿಗಳು ಎಂಬುದಾಗಿ ಹೇಳಿ ಎಲ್ಲರ ಆಶ್ಚರ್ಯಕ್ಕೆ ಕಾರಣರಾಗಿದ್ದರು. ಕೋಟ್ಯಂತರ ರೂಪಾಯಿ ನೀಡಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವವರ ನಡುವೆ ಕೇವಲ ಇಷ್ಟೇ ಹಣದಲ್ಲಿ ಮದುವೆ ಮಾಡಿಕೊಂಡಿರುವ ನೀವು ಗ್ರೇಟ್ ಎಂಬುದಾಗಿ ಎಲ್ಲರೂ ಉದ್ಗರಿಸಿದ್ದಾರೆ.