SBI ಬ್ಯಾಂಕ್ ನ ಬರೋಬ್ಬರಿ 44 ಕೋಟಿ ಗ್ರಾಹಕರಿಗೆ ಮಹತ್ವದ ಘೋಷಣೆ: ಇನ್ನು ಜಾಸ್ತಿಯಾಗುತ್ತೆ ನಿಮ್ಮ ಹಣ. ಏನು ಗೊತ್ತೇ??

31

ನಮಸ್ಕಾರ ಸ್ನೇಹಿತರ ಭಾರತದ ಅತ್ಯಂತ ದೊಡ್ಡ ಬ್ಯಾಂಕ್ ಗಳಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಎಸ್ ಬಿಐ ತನ್ನ 44 ಕೋಟಿ ಗ್ರಾಹಕರಿಗೆ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದೆ ಎಂದರೆ ತಪ್ಪಾಗಲಾರದು. ಆರ್ ಬಿ ಐ ತನ್ನ ರೆಪೋ ದರವನ್ನು ಹೆಚ್ಚಿಸಿದ ನಂತರ ಎಸ್ ಬಿ ಐ ಕೂಡ ತನ್ನ ಎಫ್ ಡಿ ದರವನ್ನು ಹೆಚ್ಚಿಸಿದೆ ಎಂಬುದಾಗಿ ತಿಳಿದುಬಂದಿದೆ.

ಅಂದರೆ ಬ್ಯಾಂಕ್ 2 ಕೋಟಿ ಠೇವಣಿಗಿಂತ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಬಡ್ಡಿದರವನ್ನು ಎರಡು ವರ್ಷಗಳಿಗಿಂತ ಕಡಿಮೆಗೊಳಿಸಿದೆ. ಎಸ್ ಬಿ ಐ ನ ಹೊಸ ಬಡ್ಡಿದರಗಳನ್ನು ನೋಡುವುದಾದರೆ ಏಳರಿಂದ 45ದಿನಗಳ ಸ್ಥಿರ ಠೇವಣಿ ಗೆ ಮೊದಲಿನ ಹಾಗೆ 3.50% ಬಡ್ಡಿದರ ಇರಲಿದೆ. 46 ರಿಂದ 179 ದಿನಗಳವರೆಗೆ ಎಫ್ ಡಿ ಮೇಲೆ ಶೇಕಡ 4 ಬಡ್ಡಿದರ ಮುಂದುವರೆಯಲಿದೆ. 180ರಿಂದ 210 ದಿನಗಳವರೆಗೆ 4.75% ಬಡ್ಡಿದರ. 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ವರೆಗೆ 4.50% ಬಡ್ಡಿದರ ಅನ್ವಯಿಸಲಿದೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ 5.25 ಪ್ರತಿಶತ ಬಡ್ಡಿದರ ಅನ್ವಯಿಸಲಿದೆ.

ಎರಡು ವರ್ಷ ಹಾಗೂ 2 ವರ್ಷಕ್ಕಿಂತ ಹೆಚ್ಚು ಮತ್ತು 3 ವರ್ಷಕ್ಕಿಂತ ಕಡಿಮೆ ಇರುವ ಅವಧಿಗೆ 4.25% ಬಡ್ಡಿದರ ಇರಲಿದೆ. ಮೂರು ವರ್ಷದಿಂದ 10 ವರ್ಷದವರೆಗೆ ಇರುವ ಅವಧಿಗೆ 4.50 ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಇನ್ನು ಮುಂದೆ ದೀರ್ಘಕಾಲದವರೆಗೆ ಫಿಕ್ಸಡ್ ದೇಪೋಸಿಟ್ ಮಾಡುವವರಿಗೆ ಎಸ್ ಬಿ ಐ ಬ್ಯಾಂಕ್ನಿಂದ ಉತ್ತಮ ಬಡ್ಡಿದರದ ಹೆಚ್ಚಳದಿಂದಾಗಿ ಖಂಡಿತವಾಗಿ ಗ್ರಾಹಕರಿಗೆ ಸಂತೋಷ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಡ್ಡಿ ದರ ಹೆಚ್ಚಳದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.