ಇದ್ದಕ್ಕಿದ್ದ ಹಾಗೆ ವಿದೇಶಕ್ಕೆ ಹಾರಿದ ದರ್ಶನ್, ಕುಟುಂಬದ ಜೊತೆ ಜೊತೆ ಜಾಲಿ ಟ್ರಿಪ್

17

ನಮಸ್ಕಾರ ಸ್ನೇಹಿತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸದ್ಯ ಪೋಲೆಂಡಿನಲ್ಲಿ ಕ್ರಾಂತಿ ಸಿನಿಮಾದ ಚಿತ್ರೀಕರಣದ ಭಾಗವನ್ನು ಮುಗಿಸಿಕೊಂಡು ಮತ್ತೆ ಭಾರತಕ್ಕೆ ಮರಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ ಈಗ ಮತ್ತೆ ವಿದೇಶಕ್ಕೆ ಹಾರಿದ್ದಾರೆ ಎಂಬುದಾಗಿ ಸುದ್ದಿ ಇದೆ. ಆದರೆ ಅವರು ವಿದೇಶಕ್ಕೆ ಹಾರುವುದು ಸಿನಿಮಾ ಚಿತ್ರೀಕರಣದ ವಿಚಾರಕ್ಕಾಗಿ ಅಲ್ಲ ಹಾಗಿದ್ದರೆ ಏನಕ್ಕಾಗಿ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೆ ದರ್ಶನ್ ರವರು ಸಾಮಾನ್ಯವಾಗಿ ಸುದ್ದಿಯಾಗುವುದು ಅವರ ಸಿನಿಮಾ ಗಳಿಗಾಗಿ. ಸಿನಿಮಾ ಬಿಟ್ಟರೆ ಅವರು ಹೆಚ್ಚಿನ ಸಮಯವನ್ನು ನೀಡುವುದು ತಮ್ಮ ಸ್ನೇಹಿತರಿಗಾಗಿ ಎಂಬುದು ನಮಗೆಲ್ಲ ತಿಳಿದಿದೆ. ಅವರು ತಮ್ಮ ಕುಟುಂಬಕ್ಕೆ ಸಮಯವನ್ನು ನೀಡುವುದು ವಿರಳಾತಿವಿರಳ ಎಂಬುದು ಈಗಾಗಲೇ ಹಲವಾರು ಬಾರಿ ಸುದ್ದಿಯಾಗಿದೆ. ಕೆಲವೊಮ್ಮೆ ತಮ್ಮ ಮಗ ಹಾಗೂ ಪತ್ನಿಯೊಂದಿಗೆ ಜೀಪು ರೈಡಿಂಗ್ ಹೋದಾಗಲೆಲ್ಲ ಫೋಟೋ ಹಾಗೂ ವೀಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಬಾರಿ ತಮ್ಮ ಮಡದಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ ಎಂಬುದಾಗಿ ಫೋಟೋ ಹಾಗೂ ವಿಡಿಯೋಗಳ ಮೂಲಕ ತಿಳಿದು ಬಂದಿದೆ.

ಹೌದು ಗೆಳೆಯರೇ ಕ್ರಾಂತಿ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ಬಿಡುವಿನ ಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿದೇಶಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದಾರೆ. ಇದರ ಪೂರಕವಾಗಿ ವಿಜಯಲಕ್ಷ್ಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಫೋಟೋ ಹಾಕು ವಿಡಿಯೋಗಳು ಈಗಾಗಲೇ ವೈರಲಾಗುತ್ತಿದ್ದು ಇಬ್ಬರು ಕೂಡ ಏರ್ಪೋರ್ಟ್ ಹಾಗೂ ಲಂಡನ್ ನಲ್ಲಿರುವ ವಿಡಿಯೋಗಳು ಕಂಡುಬಂದಿದ್ದು ಅಭಿಮಾನಿಗಳು ಕೂಡ ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ಜಾಲಿ ಮೂಡ್ ನಲ್ಲಿರುವ ಡಿ ಬಾಸ್ ಹಾಗೂ ಕುಟುಂಬ ಲಂಡನ್ ನಲ್ಲಿ ತಮ್ಮ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ. ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಪ್ರತಿಯೊಬ್ಬರು ಕೂಡ ಈಗ ಕಾತರರಾಗಿದ್ದಾರೆ ಎಂದು ಹೇಳಬಹುದಾಗಿದೆ.