ಮದುವೆ ಉಚಿತ: ಆದರೆ ಬರುವ 25 ಕೋಟಿ ಕಳೆದುಕೊಂಡ ನಯನತಾರ ವಿಜ್ಞೇಶ್: ಅದೊಂದು ತಪ್ಪಿನಿಂದ ಡೀಲ್ ಕ್ಯಾನ್ಸಲ್: ವಿಜ್ಞೇಶ್ ಮಾಡಿದ್ದೇನು ಗೊತ್ತೇ?

28

ನಮಸ್ಕಾರ ಸ್ನೇಹಿತರೇ ಇದೇ ಜೂನ್ 9ರಂದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರಾ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಮಹಾಬಲಿಪುರಂ ನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇಬ್ಬರು ಕೂಡ ಹಲವಾರು ವರ್ಷಗಳಿಂದ ಜೊತೆಯಾಗಿ ಇದ್ದರು ಕೊನೆಗೂ ಕೂಡ ಈಗ ಮದುವೆಯಾಗಿದ್ದಾರೆ. ಇಬ್ಬರ ಮದುವೆಗೆ ರಜನಿಕಾಂತ್ ಶಾರುಖ್ ಖಾನ್ ಮಣಿರತ್ನಂ ಎಆರ್ ರೆಹಮಾನ್ ಆಟ್ಲೀ ವಿಜಯ್ ಸೇತುಪತಿ ಸೇರಿದಂತೆ ಹಲವಾರು ಸ್ಟಾರ್ ಸೆಲೆಬ್ರಿಟಿಗಳ ದಂಡೇ ಬಂದಿದೆ. ಇನ್ನು ನೀವು ಕೇಳಿರಬಹುದು ಇವರಿಬ್ಬರ ಮದುವೆಯ ಪ್ರಸಾರದ ಹಕ್ಕನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿತ್ತು. ಇವರಿಬ್ಬರ ಮದುವೆಯ ಚಿತ್ರೀಕರಣದ ಜವಾಬ್ದಾರಿಯನ್ನು ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. ಎಲ್ಲವೂ ಸಾಂಗವಾಗಿ ನೆರೆದಿತ್ತು ಆದರೆ ನೆಟ್ಲಕ್ಸ್ ಸಂಸ್ಥೆ ಈಗ 25 ಕೋಟಿ ರೂಪಾಯಿಯ ಪ್ರಸಾರದ ಡೀಲ್ ನಿಂದ ಹಿಂದೆ ಸರಿದಿದೆ ಎಂಬುದಾಗಿ ಕೇಳಿಬರುತ್ತಿದೆ. ಈ ದೊಡ್ಡ ಅವಾಂತರದ ಹಿಂದೆ ತಪ್ಪು ಇರೋದು ವಿಘ್ನೇಶ್ ಶಿವನ್ ರವರದ್ದು ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ಯಾಕೆಂದರೆ ಮದುವೆಯ ಎಲ್ಲಾ ಖರ್ಚುಗಳು ಸೇರಿದಂತೆ ಚಿತ್ರೀಕರಣದ ಜವಾಬ್ದಾರಿಯನ್ನು ಕೂಡಾ ಪೂರ್ತಿಯಾಗಿ ನೆಟ್ಫ್ಲಿಕ್ಸ್ ವಹಿಸಿಕೊಂಡಿತ್ತು ದಂಪತಿಗಳು ಒಂದೇ ಒಂದು ರೂಪಾಯಿಯನ್ನು ಖರ್ಚು ಮಾಡಿರಲಿಲ್ಲ. ಆದರೆ ಈಗ ಪ್ರಸಾರ ಆರಂಭವಾಗುವ ಮುನ್ನ ಮದುವೆಯಾಗಿರುವ ಒಂದು ತಿಂಗಳ ಹಿನ್ನಲೆಯಲ್ಲಿ ಮದುವೆ ಕೆಲವೊಂದು ಫೋಟೋಗಳನ್ನು ವಿಘ್ನೇಶ್ ಶಿವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಸಾರಕ್ಕೂ ಮುನ್ನವೇ ಹೀಗೆ ಹಂಚಿಕೊಂಡಿರುವುದರಿಂದ ನೆಟ್ಫ್ಲಿಕ್ಸ್ ಸಂಸ್ಥೆ ಪ್ರಸಾರದ ಹಕ್ಕಿನಿಂದ ಡೀಲ್ ಅನ್ನು ಕ್ಯಾನ್ಸಲ್ ಮಾಡಿ ಹಿಂದೆ ಸರಿದಿದೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಮುಂದಿನ ದಿನಗಳಲ್ಲಿ ಅಧಿಕೃತ ಪ್ರಕಟಣೆ ಗಾಗಿ ಕಾದುನೋಡಬೇಕಾಗಿದೆ.