ಮತ್ತೊಂದು ಹೊಸ ಹೆಜ್ಜೆ ಇಡಲು ಸಿದ್ದವಾದ ಮೇಘನಾ ರಾಜ್: ಕರುನಾಡ ಸಹೋದರಿಗೆ ಶುಭಾಶಯಗಳ ಮಹಾಪೂರ

61

ನಮಸ್ಕಾರ ಸ್ನೇಹಿತರೆ ಚಿರುಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾರಾಜ್ ರವರು ಎಲ್ಲವನ್ನು ಕಳೆದುಕೊಂಡಂತೆ ಒಂಟಿಯಾಗಿದ್ದರು. ನಂತರ, ಜೂನಿಯರ್ ಚಿರು ಸರ್ಜಾ ರವರ ಜನನದ ನಂತರ ಆತನಿಗಾಗಿ ಏನಾದರೂ ಜೀವನದಲ್ಲಿ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಮತ್ತೆ ಮನೋರಂಜನಾ ಕ್ಷೇತ್ರದತ್ತ ಮುಖ ಮಾಡುತ್ತಾರೆ.

ಇದರ ಪ್ರತಿಫಲವಾಗಿ ರಾಯನ್ ರಾಜ್ ಸರ್ಜಾ ನಾಮಕರಣದ ನಂತರ ಮೊದಲ ಬಾರಿಗೆ ಮೇಘನಾರಾಜ್ ರವರು ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ತೀರ್ಪುಗಾರರಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದ್ದು ಮೇಘನರಾಜ್ ರವರು ಸದ್ಯದ ಮಟ್ಟಿಗೆ ಹೇಳುವುದಾದರೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಸಿನಿಮಾಗಳಿಗೆ ನಟಿಸಲು ಮೇಘನಾ ರಾಜ್ ಸಹಿ ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮೇಘನಾ ರಾಜ್ ರವರು ದೊಡ್ಡ ಪರದೆಯ ಮೇಲೆ ಕೊನೆ ಬಾರಿಗೆ ಕಾಣಿಸಿಕೊಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಸಿನಿಮಾದಲ್ಲಿ ಹಾಗೂ ಸೆಲ್ಫಿ ಮಮ್ಮಿ ಮತ್ತು ಗೂಗಲ್ ಡ್ಯಾಡಿ ಸಿನಿಮಾಗಳಲ್ಲಿ.

ಈಗ ಇತ್ತೀಚಿಗಷ್ಟೇ ತಮ್ಮ ಸೋಶಿಯಲ್ ಮೀಡಿಯಂ ಹ್ಯಾಂಡಲ್ ಗಳ ಮೂಲಕ ತಮ್ಮ ಹೊಸ ಚಿತ್ರದ ಘೋಷಣೆಯನ್ನು ಮಾಡಿದ್ದು ಎಲ್ಲರೂ ಕೂಡ ಮೇಘನ ರಾಜ್ ರವರಿಗೆ ಶುಭಾಶಯವನ್ನು ಕೋರಿದ್ದಾರೆ. ತಮ್ಮ ಹೊಸ ಸಿನಿಮಾದ ಕುರಿತಂತೆ ಮಾತನಾಡುತ್ತಾ ಮೇಘನರಾಜ್ ಜುಲೈ 7 ಈ ಪ್ರಾಜೆಕ್ಟನ್ನು ನಾವು ಕಳೆದ ಅಕ್ಟೋಬರ್ 17ರಂದು ಅನೌನ್ಸ್ ಮಾಡಿದ್ದೆವು. ಸಾಕಷ್ಟು ಚರ್ಚೆ ಮನುಸ್ಕ್ರಿಪ್ಟ್ ನಿರ್ಮಾಣ ಲುಕ್ ಟೆಸ್ಟ್ ನಂತರ ಈಗ ಎಲ್ಲರೂ ಒಟ್ಟಾರೆಯಾಗಿ ಸೇರಿ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದೇವೆ ಈ ಸಿನಿಮಾ ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿದೆ ಎಂಬುದಾಗಿ ಬರೆದುಕೊಂಡಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಮೇಘನಾ ರಾಜ್ ರವರ ಹೊಸ ಸಿನಿಮಾಗೆ ಶುಭಾಶಯಗಳನ್ನು ಕೊಡಬಹುದಾಗಿದೆ.