ಲಲಿತ್ ಮೋದಿ ರವರನ್ನು ದುಡ್ಡಿಗಾಗಿ ಮದುವೆಯಾಗಿದ್ದಾರೆ ಎನ್ನುತ್ತಿರುವ ಜನರೇ ಅದರ ಅಗತ್ಯ ಸುಶ್ಮಿತಾ ರವರಿಗೆ ಇಲ್ಲ ಯಾಕೆ ಗೊತ್ತೇ?

7

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ರವರ ವಿಚಾರ. ಹಲವಾರು ವರ್ಷಗಳಿಂದ ಸುಶ್ಮಿತಾ ಸೇನ್ ಅವರು ಮದುವೆ ಆದರೆ ಒಬ್ಬಂಟಿಯಾಗಿ ಉಳಿದಿದ್ದರು. ಹಲವಾರು ನಟರೊಂದಿಗೆ ಇವರ ಹೆಸರು ಕೇಳಿ ಬಂದಿದ್ದರೂ ಕೂಡ ಅದು ಯಾವುದು ನಿಜವಾಗಿರಲಿಲ್ಲ ಕೇವಲ ಗಾಳಿಸುದ್ದಿ ಆಗಿತ್ತು. ಆದರೆ ಈಗ ಅಧಿಕೃತವಾಗಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ರವರ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಲಲಿತ್ ಮೋದಿ ರವರು ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಅನ್ನು ಪ್ರಾರಂಭಿಸುವ ಮೂಲಕ ಐಪಿಎಲ್ ನಿಂದ ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿ ಆದಾಯ ಹರಿದು ಬರುವಂತೆ ಮಾಡಿರುವ ಮಹಾ ಪುಣ್ಯಾತ್ಮ ಆಗಿದ್ದಾರೆ ಹೀಗಾಗಿ ಅವರ ಬಳಿಯೂ ಕೂಡ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಇದೆ. ಅವರದೇ ಆದಂತಹ ದೊಡ್ಡಮಟ್ಟದ ಉದ್ಯಮ ಕೂಡ ಇದೆ. ಇನ್ನು ಇತ್ತೀಚಿನ ಫೋಟೋಗಳಲ್ಲಿ ಅವರನ್ನು ನೋಡಿದರೆ ಅವರಿಗೆ ಅತ್ಯಂತ ಹೆಚ್ಚು ವಯಸ್ಸಾದಂತೆ ಕಂಡುಬರುತ್ತದೆ. ಹೀಗಾಗಿ ಸುಶ್ಮಿತಾ ಸೇನ್ ಲಲಿತ್ ಮೋದಿ ಅವರ ಜೊತೆಗೆ ದುಡ್ಡಿಗಾಗಿ ಡೇಟಿಂಗ್ ಮಾಡುತ್ತಿದ್ದಾರೆ ಮದುವೆಯಾಗಲು ಸಿದ್ದರಾಗಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದರು.

ಅಂತವರಿಗೆ ಒಂದು ಇಲ್ಲೊಂದು ವಿಶೇಷವಾದ ಸುದ್ದಿ ಇದೆ. ಅದೇನೆಂದರೆ ದುಡ್ಡಿನ ವಿಚಾರದಲ್ಲಿ ಸುಶ್ಮಿತಾ ಸೇನ್ ಕೂಡ ಕಡಿಮೆಯೇನಿಲ್ಲ. ನಟನೆಯಿಂದ ದೂರ ಇದ್ದರೂ ಕೂಡ ಸುಶ್ಮಿತಾ ಸೇನ್ ಪ್ರತಿ ತಿಂಗಳು 60 ಲಕ್ಷ ರೂಪಾಯಿಗೂ ಅಧಿಕ ಗಳಿಕೆ ಮಾಡುತ್ತಾರೆ ಅಂದರೆ ವರ್ಷಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಕೆ ಸಿಗುತ್ತದೆ. ಅಂದರೆ ಒಟ್ಟಾರೆಯಾಗಿ 74 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸುಶ್ಮಿತಾ ಸೇನ್ ಅವರ ಬಳಿಯಿದೆ. ಲಲಿತ್ ಮೋದಿ ಅವರ ಆದಾಯದಿಂದ ಕಡಿಮೆ ಇದ್ದರೂ ಕೂಡ ಐಷಾರಾಮಿ ಜೀವನದಲ್ಲಿ ಸುಶ್ಮಿತಾ ಸೇನ್ ಯಾರಿಗೇನು ಕಡಿಮೆಯಿಲ್ಲ ಎಂದು ಹೇಳಬಹುದು.