ಒಂದು ಕಡೆ ಮದುವೆಯಾದ ಖುಷಿಯಲ್ಲಿ ಇದ್ದ ನಯನತಾರ ಹಾಗೂ ವಿಜ್ಞೇಶ್ ರವರಿಗೆ ಶಾಕ್ ನೀಡಿದ ನೆಟ್ ಫ್ಲಿಕ್ಸ್. ಪಾಪ ಇದೀಗ ಏನಾಗಿದೆ ಗೊತ್ತೇ?

10

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ 9ರಂದು ಹಲವಾರು ವರ್ಷಗಳ ಜೊತೆ ಇರುವಿಕೆಯ ನಂತರ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಕೂಡ ಮಹಾಬಲಿಪುರಂ ನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ಮದುವೆಯಾಗಿದ್ದರು. ನಯನತಾರಾ ಹಾಗೂ ವಿಘ್ನೇಶ್ ರವರ ಮದುವೆಗೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಬಾಲಿವುಡ್ ಚಿತ್ರರಂಗದ ಬಾದ್ಷಾ ಶಾರುಖ್ ಖಾನ್ ಎಆರ್ ರೆಹಮಾನ್ ನಿರ್ದೇಶಕ ಮಣಿರತ್ನಂ ಸೂರ್ಯ ಹಾಗೂ ಜ್ಯೋತಿ ದಂಪತಿಗಳು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಬಂದಿದ್ದರು. ಮದುವೆ ಆದ ನಂತರ ಥಾಯ್ಲೆಂಡ್ ಗೆ ಹನಿಮೂನ್ ಗೆ ಕೂಡ ದಂಪತಿಗಳಿಬ್ಬರು ತೆರಳಿರುವ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು ಎಲ್ಲರೂ ಈ ಫೋಟೋಗಳನ್ನು ನೋಡಿ ಮೇಡ್ ಫಾರ್ ಈಚ್ ಅದರ್ ಎಂಬುದಾಗಿ ಕಾಮೆಂಟ್ ಕೊಡಮಾಡುತ್ತದೆ. ಇನ್ನು ಮದುವೆಯ ಕುರಿತಂತೆ ಯಾವುದೇ ಅಧಿಕೃತ ವಿಡಿಯೋಗಳು ಹೊರಬಂದಿಲ್ಲ ಇದಕ್ಕೆ ಕಾರಣ ಏನೆಂಬುದು ಕೂಡ ಈಗಾಗಲೇ ನಿಮಗೆ ತಿಳಿದಿದೆ. ಹೌದು ಇಬ್ಬರ ಮದುವೆಯ ವಿಡಿಯೋ ಹಕ್ಕನ್ನು ನೆಟ್ಫ್ಲಿಕ್ಸ್ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ ಎಂಬುದು ಈಗಾಗಲೇ ತಿಳಿದಿರುವ ವಿಚಾರ.

ಇದನ್ನು ಚಿತ್ರೀಕರಿಸುವ ಜವಾಬ್ದಾರಿಯನ್ನು ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. ಆದರೆ ಈಗ ನಯನತಾರ ದಂಪತಿಗಳಿಗೆ ನೆಟ್ಫ್ಲಿಕ್ಸ್ ಸಂಸ್ಥೆ ದೊಡ್ಡಮಟ್ಟದ ಶಾ’ಕ್ ನೀಡಿದೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಈ ಹಿಂದೆ ನೆಟ್ಫ್ಲಿಕ್ಸ್ ಸಂಸ್ಥೆ ಈ ಮದುವೆಯ ವಿಡಿಯೋವನ್ನು ಪ್ರಸಾರಮಾಡಲು ದೊಡ್ಡಮಟ್ಟದ ಒಪ್ಪಂದವನ್ನು ಮಾಡಿಕೊಂಡಿತು ಆದರೆ ಈಗ ಏಕಾಏಕಿ ಈ ಮದುವೆಯ ಪ್ರಸಾರದ ವಿಡಿಯೋ ಒಪ್ಪಂದವನ್ನು ರದ್ದುಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.