ಬಿಗ್ ಬಾಸ್ ಫಿಕ್ಸ್ ಆದ ಬೆನ್ನಲ್ಲೇ ಮನೆಗೆ ಹೋಗುವವರ ಕುರಿತು ಮಾಹಿತಿ: ಈ ಬಾರಿ ಯಾರಿಗೆಲ್ಲ ಚಾನ್ಸ್ ಇದೆ ಅಂತೇ ಗೊತ್ತೇ?

164

ನಮಸ್ಕಾರ ಸ್ನೇಹಿತರೆ ಪ್ರತಿಬಾರಿಯಂತೆ ಈ ಬಾರಿ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗುವ ಮೊದಲೇ ಬಿಗ್ ಬಾಸ್ ಮನೆಯ ಒಳಗೆ ಯಾರೆಲ್ಲ ಹೋಗಬಹುದು ಎನ್ನುವುದರ ಕುರಿತಂತೆ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಲು ಪ್ರಾರಂಭಿಸಿವೆ. ಹಾಗಿದ್ದರೆ ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲಾ ಕಂಟೆಸ್ಟೆಂಟ್ ಗಳಾಗಿ ಹೋಗುತ್ತಾರೆ ಎಂಬ ಸಂಭಾವ್ಯ ಪಟ್ಟಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಟಿವಿ ಕಾರ್ಯಕ್ರಮಗಳಲ್ಲಿ ಜ್ಯೋತಿಷ್ಯವನ್ನು ಹೇಳುವ ಮೂಲಕ ಪ್ರಸಿದ್ಧಿ ಪಡೆದಿರುವ ಆರ್ಯವರ್ಧನ್ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಎಲ್ಲರ ಮನಗೆದ್ದಿರುವ ಟೆನಿಸ್ ಕೃಷ್ಣ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಇನ್ನು ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಗಾಗಿರುವ ನಟಿ ಪವಿತ್ರ ಲೋಕೇಶ್ ಗೌಡ ಭಾಗವಹಿಸಬಹುದು ಎನ್ನುವ ಸುದ್ದಿ ಕೇಳಿಬರುತ್ತಿದೆ. ನಾಗಿಣಿ 2 ಖ್ಯಾತಿಯ ನಮೃತ ಗೌಡ ಅಮೂಲ್ಯ ಅವರ ಸುದ್ದಿಯನ್ನು ಬಿತ್ತರಿಸಿ ದೊಡ್ಡಮಟ್ಟದಲ್ಲಿ ಫೇಮಸ್ ಆಗಿದ್ದ ನ್ಯೂಸ್ ರಿಪೋರ್ಟರ್ ದಿವ್ಯ ವಸಂತ ಸರಿಗಮಪ ಖ್ಯಾತಿಯ ಹನುಮಂತ ಗಾಯಕ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಟ ನಿರ್ದೇಶಕ ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ರೂರಲ್ ಸ್ಟಾರ್ ಅಂಜನ್ ಎನ್ನುವ ಯುವ ಉದಯೋನ್ಮುಖ ನಟ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲದಲ್ಲಿದ್ದಾರೆ ಎಂಬುದಾಗಿ ಕೂಡ ಸುದ್ದಿ ಇದೆ. ಇವರಲ್ಲಿ ಯಾರೂ ಮನೆಗೆ ಹೋಗುತ್ತಾರೆ ಅಥವಾ ವಾಹಿನಿ ಇನ್ನೂ ಬೇರೆ ಯಾರಾದರೂ ಕಲಾವಿದರಿಗೆ ಗಾಡ ಹಾಕುತ್ತಿದೆಯಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ವಾಹಿನಿ ಅಧಿಕೃತವಾಗಿ ಪ್ರಕಟಿಸಿದ ಮೇಲೆಯೇ ನೋಡಬೇಕಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಪ್ರಕಾರ ಯಾರಿರಬೇಕು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.