ತಮ್ಮನ್ನು ತಾವು ಕ್ರಿಕೆಟ್ ತಜ್ಞರು ಎಂದು ಕೊಂಡು ಕೊಹ್ಲಿ ರವರ ವಿರುದ್ಧ ಟೀಕೆ ಮಾಡುತ್ತಿರುವರ ಹೇಳಿಕೆ ನೋಡಿ ಕೊಹ್ಲಿ ಕುರಿತು ಪಾಕ್ ನಾಯಕ ಹೇಳಿದ್ದೇನು ಗೊತ್ತೇ??

20

ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಕ್ರಿಕೆಟ್ ಜಗತ್ತಿನಲ್ಲಿ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಎಂದರೆ ಕಿಂಗ್ ಕೊಹ್ಲಿ ಯಾವಾಗ ಮತ್ತೆ ತಮ್ಮ ಅಸಲಿ ಫಾರ್ಮ್ ಗೆ ಮರಳಿ ಬರುತ್ತಾರೆ ಅನ್ನೋದು. ಈ ಕುರಿತಂತೆ ಕೆಲವೊಂದು ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಭಾರತ ತಂಡದಲ್ಲಿ ಇರುವುದರ ಕುರಿತಂತೆ ಟೀಕೆಯನ್ನು ಕೂಡ ಮಾಡಿ ಅವರನ್ನು ತಂಡದಿಂದ ಹೊರ ಹಾಕುವಂತೆ ಕೂಡ ಒತ್ತಾಯಿಸಿದ್ದರು.

ಇದರ ವಿರುದ್ಧವಾಗಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲವು ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿ ಅವರ ಪರವಾಗಿ ನಿಂತಿದ್ದನ್ನು ಕೂಡ ನಾವು ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ವಾಪಸು ಬಂದ ವಿರಾಟ್ ಕೊಹ್ಲಿ ದೊಡ್ಡಮಟ್ಟದ ರನ್ನನ್ನು ಗಳಿಸಬಹುದು ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ ವಿರಾಟ್ ಕೊಹ್ಲಿ ರವರು 3 ಸತತ ಬೌಂಡರಿಗಳನ್ನು ಬಾರಿಸುವ ಮೂಲಕ ದೊಡ್ಡಮಟ್ಟದ ರನ್ ಗಳಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದರು ಆದರೆ ಕೇವಲ 16 ರನ್ನುಗಳಿಗೆ ಔಟ್ ಆಗುತ್ತಾರೆ. ಇದು ಅವರ ಕಳಪೆ ಫಾರ್ಮ್ ವಿಚಾರಕ್ಕೆ ಮತ್ತೊಂದು ಕಳಂಕವಾಗಿ ಸೇರಿಕೊಳ್ಳುತ್ತದೆ. ಇದಾದಮೇಲೆ ಕೂಡ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಆಟಗಾರರು ವಿರಾಟ್ ಕೊಹ್ಲಿ ಅವರ ಪರವಾಗಿ ನಿಂತಿದ್ದರು ಈಗ ಈ ಸರದಿ ಪಾಕಿಸ್ತಾನದ ನಾಯಕ ಆಗಿರುವ ಬಾಬರ್ ಆಜಮ್ ರವರದ್ದು.

ಹೌದು ಎರಡನೇ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರಿಗೆ ಸಪೋರ್ಟ್ ಮಾಡುವಂತಹ, ಧೈರ್ಯದಿಂದಿರಿ ಈ ಸಮಯ ಕೂಡ ಕಳೆದು ಹೋಗುತ್ತದೆ ಎಂಬುದಾಗಿ ಬಾಬರ್ ಅಜಂ ಅವರ ಜೊತೆಗೆ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಬಗ್ಗೆ ಬಾಬರ್ ಆಜಮ್ ಮಾಡಿರುವ ಈ ಪೋಸ್ಟ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.