ಕೃತಿ ಶೆಟ್ಟಿ ಕಂಡ್ರೆ ಎಲ್ಲರಿಗೂ ಲವ್ ಅದು ಗೊತ್ತಿರೋ ಮ್ಯಾಟರ್: ಆದರೆ ಕೃತಿ ಶೆಟ್ಟಿ ಹೃದಯ ಕದ್ದಿರುವ ನಟ ಯಾರು ಗೊತ್ತೇ?

20

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಮೂಲದ ನಟಿಯರಲ್ಲಿ ಕೃತಿ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಕರ್ನಾಟಕ ಮೂಲದವರಾಗಿದ್ದು ಕೃತಿ ಶೆಟ್ಟಿ ಉಪ್ಪೇನ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೊದಲ ಸಿನಿಮಾದಿಂದಲೇ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಕೃತಿ ಶೆಟ್ಟಿ ರವರು ಇನ್ನು ಕೇವಲ 18 ವರ್ಷ ವಯಸ್ಸಿನವರಷ್ಟೇ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ದೊಡ್ಡಮಟ್ಟದ ಕೀರ್ತಿಯನ್ನು ಹೊಂದಿರುವ ಕೃತಿ ಶೆಟ್ಟಿ ಮುಂದಿನ ದಿನಗಳಲ್ಲಿ ಸೌತ್ ಇಂಡಿಯನ್ ಲೇಡಿ ಸೂಪರ್ ಸ್ಟಾರ್ ಎಂಬ ಪಾಠವನ್ನು ಪಡೆದುಕೊಂಡರು ಕೂಡ ಅಚ್ಚರಿಪಡಬೇಕಾಗಿಲ್ಲ. ಈಗಾಗಲೇ ನಾನಿ ರಾಮ್ ಪೊತಿನೇನಿ ಸೇರಿದಂತೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ರಾಮ್ ಪೋತಿನೇನಿ ನಟನೆಯ ವಾರಿಯರ್ ಸಿನಿಮಾದ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕೃತಿ ಶೆಟ್ಟಿ ಅವರು ತಮ್ಮ ನೆಚ್ಚಿನ ಸೆಲೆಬ್ರಿಟಿ ಕೃಷ್ ಯಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಹೌದು ಗೆಳೆಯರೇ ಅವರ ನೆಚ್ಚಿನ ಸೆಲೆಬ್ರಿಟಿ ಕ್ರಷ್ ಇನ್ಯಾರು ಅಲ್ಲ ತಮಿಳು ನಟ ಶಿವಕಾರ್ತಿಕೇಯನ್. ಅವರು ತಮಿಳನ್ನು ಕಲಿಯಲು ಶಿವಕಾರ್ತಿಕೇಯನ್ ರವರ ಸಿನಿಮಾವನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಅವರ ನಟನೆ ಅವರಿಗೆ ತುಂಬಾನೇ ಇಷ್ಟ ಎಂಬುದಾಗಿ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ತಮಿಳಿನಲ್ಲಿ ನಿತಿನ್ ಜೊತೆಗೆ ಕೃತಿ ಶೆಟ್ಟಿ ರವರು ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೃತಿ ಶೆಟ್ಟಿ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಹಂಚಿಕೊಳ್ಳಿ.