ಕೇವಲ ಮುಂದಿನ ಮೂರು ವರ್ಷದಲ್ಲಿ ತನ್ನ ಮನೆ ಏನಾಗುತ್ತದೆ ಎಂದು ಭವಿಷ್ಯ ನುಡಿದ ರಶ್ಮಿಕಾ. ಏನಾಗುತ್ತದೆ ಅಂತೇ ಗೊತ್ತೇ?

30

ನಮಸ್ಕಾರ ಸ್ನೇಹಿತರೆ ಭಾರತೀಯ ಚಿತ್ರರಂಗದ ಬಾಲಿವುಡ್ ಕಾಲಿವುಡ್ ಟಾಲಿವುಡ್ ಸ್ಯಾಂಡಲ್ವುಡ್ ಯಾವುದೇ ಚಿತ್ರರಂಗ ವಿರಲಿ ಅಲ್ಲಿ ನಾಯಕ ನಟಿಯ ಮೊದಲ ಆಯ್ಕೆಯಾಗಿ ಕೊಡಗಿನ ಕುಮಾರಿ ಆಗಿರುವ ರಶ್ಮಿಕ ಮಂದಣ್ಣ ನವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ರಶ್ಮಿಕ ಮಂದಣ್ಣ ನವರ ಕೈಯಲ್ಲಿ ಹಲವಾರು ಸಿನಿಮಾಗಳ ಆಫರ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ಇನ್ನು ಸದ್ಯಕ್ಕೆ ಕೇವಲ ಸಿನಿಮಾ ಮೂಲಕ ಮಾತ್ರವಲ್ಲದೆ ಜಾಹೀರಾತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಪ್ರಮೋಷನ್ ಮೂಲಕವೂ ಕೂಡ ರಶ್ಮಿಕಾ ಮಂದಣ್ಣ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದ ಚಿನ್ನದ ಕುದುರೆ ಎಂದರೆ ರಶ್ಮಿಕ ಮಂದಣ್ಣ ಎನ್ನುವ ಉತ್ತರವನ್ನು ನೀಡಬಹುದಾಗಿದೆ. ಇನ್ನು ರಶ್ಮಿಕ ಮಂದಣ್ಣ ಪ್ರಾಣಿಪ್ರೇಮಿ ಕೂಡ ಆಗಿದ್ದು ಔರಾ ಎನ್ನುವ ನಾಯಿಯನ್ನು ಕೂಡ ಮನೆಯಲ್ಲಿ ಹೊಂದಿದ್ದಾರೆ. ರಶ್ಮಿಕ ಮಂದಣ್ಣ ಅವರಿಗೆ ಈ ನಾಯಿ ಎಂದರೆ ಎಷ್ಟರಮಟ್ಟಿಗೆ ಪಂಚಪ್ರಾಣ ಎಂದರೆ ಅವರ ಬಹುತೇಕ ಎಲ್ಲ ಫೋಟೋಗಳಲ್ಲಿ ಕೂಡ ಅದು ಕೂಡ ಇರುತ್ತದೆ. ಅದಕ್ಕಾಗಿ ಕೂಡ ಫ್ಲೈಟ್ ಟಿಕೆಟ್ ಅನ್ನು ನಿರ್ಮಾಪಕರು ಬುಕ್ ಮಾಡಬೇಕು ಎನ್ನುವ ಸುದ್ದಿಗಳು ಕೂಡ ಗಾಳಿಸುದ್ದಿಯ ಹಾಗೆ ಹರಡಿದ್ದವು. ಕೊನೆಗೆ ರಶ್ಮಿಕ ಮಂದಣ್ಣ ರವರೇ ಇದರ ಕುರಿತಂತೆ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದರು.

ಇತ್ತೀಚಿಗಷ್ಟೇ ಸ್ನೋ ಎನ್ನುವ ಬೆಕ್ಕಿನ ಮರಿಯನ್ನು ಕೂಡ ತಂದು ಸಾಕಲು ಆರಂಭಿಸಿದ್ದಾರೆ. ಇವೆರಡೂ ಒಟ್ಟಿಗೆ ಇರುವಂತಹ ಫೋಟೋವನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಲಕ್ಷಾಂತರ ಮಂದಿ ಲೈಕ್ಸ್ ನೀಡಿದ್ದಾರೆ. ಇನ್ನು ಮೂರು ವರ್ಷದಲ್ಲಿ ನನ್ನ ಮನೆ ಎನ್ನುವುದು ಕಾಡು ಆಗುತ್ತದೆ ಎನ್ನುವುದಾಗಿ ಇನ್ನಷ್ಟು ಸಾಕು ಪ್ರಾಣಿಗಳನ್ನು ತಂದು ಸಾಕಿಕೊಳ್ಳುತ್ತೇನೆ ಎಂಬುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ರಶ್ಮಿಕ ಮಂದಣ್ಣ ರವರ ಪ್ರಾಣಿ ಪ್ರೇಮದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.