ಸಿಹಿ ಸುದ್ದಿ ಹಂಚಿಕೊಂಡ ದಿವ್ಯ ಉರುಡುಗ: ನನ್ನ ಪಾಲಿಗೆ ಇದು ಮಹತ್ವದ ದಿನ ಎಂದದ್ದು ಯಾಕೆ ಗೊತ್ತೇ??

36

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾದ ಜೋಡಿ ಎಂದರೆ ಅದು ದಿವ್ಯ ಹಾಗೂ ಅರವಿಂದ್. ಇಬ್ಬರೂ ಕೂಡ ಬಿಗ್ ಬಾಸ್ ನಲ್ಲಿ ಪ್ರೀತಿಸುತ್ತಿರುವ ಜೋಡಿಗಳು ಎಂಬುದಾಗಿ ಸುದ್ದಿಯಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇಬ್ಬರು ಖಂಡಿತವಾಗಿ ಮದುವೆಯಾಗುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಂಡಿದ್ದರು. ಇಬ್ಬರು ಕೂಡ ಪರೋಕ್ಷವಾಗಿ ತಾವಿಬ್ಬರೂ ಪ್ರೀತಿಸುತ್ತಿರುವುದನ್ನು ಒಪ್ಪಿಕೊಂಡಿದ್ದರು ನಿಜ ಆದರೆ ಎಲ್ಲಿಯೂ ಕೂಡ ಅಧಿಕೃತವಾಗಿ ಇದರ ಕುರಿತಂತೆ ಮಾತನಾಡಿರಲಿಲ್ಲ.

ಇನ್ನು ಇತ್ತೀಚಿಗಷ್ಟೇ ದಿವ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ಜುಲೈ 13 ದಿನಾಂಕವನ್ನು ತಮ್ಮ ಜೀವನದ ಪ್ರಮುಖ ದಿನ ಎಂಬುದಾಗಿ ಹೇಳಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಆರಂಭದಲ್ಲಿ ಬಿಗ್ಬಾಸ್ ಪ್ರಾರಂಭವಾಗಿ ನಂತರ ಮಧ್ಯಾಂತರ ವಾಗಿ ವಿರಾಮ ತೆಗೆದುಕೊಂಡು ಮತ್ತೆ ಕೂಡ ಪ್ರಾರಂಭವಾಗಿ ಮುಗಿದಿತ್ತು. ಇದರ ನಡುವಲ್ಲಿ ದಿವ್ಯ ಹಾಗೂ ಅರವಿಂದ್ ಇಬ್ಬರೂ ಕೂಡ ಒಂದು ಟಾಸ್ಕ್ ಮೂಲಕ ಪರಸ್ಪರ ಹತ್ತಿರವಾಗುತ್ತಾರೆ. ಈ ಟಾಸ್ಕ್ ಮೂಲಕವೇ ಇಬ್ಬರ ನಡುವೆ ಗಾಢ ಸ್ನೇಹ ಮೂಡಿಬಂದಿತ್ತು ಎಂಬುದಾಗಿ ತಿಳಿದುಬಂದಿದೆ. ಇದರ ಹಿನ್ನೆಲೆಯಲ್ಲಿಯೇ ಈ ಫೋಟೋವನ್ನು ದಿವ್ಯ ಪೋಸ್ಟ್ ಮಾಡಿದ್ದಾರೆ.

ಸ್ನೇಹಿತರೆ ದಿವ್ಯ ಉರುಡುಗ ಅರವಿಂದ್ ರವರ ಜೊತೆಗೆ ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡು ಅರವಿಂದ್ ರವರನ್ನು ಭೇಟಿಯಾಗಿ 500 ದಿನಗಳು ಕಳೆಯುತ್ತಿವೆ ಎಂಬುದಾಗಿ ಪೋಸ್ಟ್ ಮಾಡಿದ್ದಾರೆ. ಅಂದರೆ ಬಿಗ್ ಬಾಸ್ ನಲ್ಲಿ ಅವರಿಗೆ ಪರಿಚಿತರಾಗಿ 500 ದಿನಗಳು ಕಳೆದಿವೆ ಎಂಬರ್ಥ ವಾಗಿ. ಈ ಸಂದರ್ಭದಲ್ಲಿಯೂ ಕೂಡ ಅಭಿಮಾನಿಗಳು ಯಾವಾಗ ಮದುವೆ ಊಟ ಹಾಕಿಸುತ್ತೀರಿ ಎಂಬುದನ್ನು ಕೇಳಲು ಮಾತ್ರ ತಪ್ಪಲಿಲ್ಲ.