ಬೇಕಾದಾಗ ವಿಫಲವಾಗಿ ತಂಡದಲ್ಲಿ ಸ್ಥಾನ ಪಡೆಯದ ಮನೀಶ್ ಪಾಂಡೆರವರಂತೇ ಆಗಲಿದ್ದಾರೆ ಮತ್ತೊಬ್ಬ ಆಟಗಾರ. ಯಾರು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆ ಈ ಹಿಂದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಭವಿಷ್ಯದ ಸ್ಟಾರ್ ಕ್ರಿಕೆಟರ್ ಎಂದೇ ಗುರುತಿಸಿಕೊಂಡಿದ್ದಾರೆ ಮನೀಶ್ ಪಾಂಡೆ ಅವರ ಕುರಿತಂತೆ ತಿಳಿದಿರಬಹುದು. ಒಂದು ಕಾಲದಲ್ಲಿ ಮನೀಶ್ ಪಾಂಡೆ ನೀಡಿದ ಪ್ರದರ್ಶನ ಅವರನ್ನು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯನನ್ನಾಗಿ ಮಾಡುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು.
ಆದರೆ ತಮಗೆ ಸಿಕ್ಕ ಅವಕಾಶಗಳನ್ನು ಮನೀಶ್ ಪಾಂಡೆ ಸಂಪೂರ್ಣವಾಗಿ ವ್ಯರ್ಥಗೊಳಿಸಿದ್ದು ಮಾತ್ರವಲ್ಲದೆ ಸದ್ಯದ ಮಟ್ಟಿಗೆ ಹೇಳುವುದಾದರೆ ಮನೀಶ್ ಪಾಂಡೆ ಅವರು ಭಾರತೀಯ ಕ್ರಿಕೆಟ್ ತಂಡದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂದರೆ ತಪ್ಪಾಗಲಾರದು. ಎಷ್ಟರಮಟ್ಟಿಗೆ ಎಂದರೆ ದ್ವಿತೀಯ ದರ್ಜೆಯ ತಂಡವನ್ನು ಸಿದ್ಧಪಡಿಸುವಾಗ ಕೂಡ ಮನೀಶ್ ಪಾಂಡೆ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಈಗ ಇದೆ ತಿಥಿಗೆ ಭಾರತೀಯ ಕ್ರಿಕೆಟ್ ತಂಡದ ಸದ್ಯದ ಆಟಗಾರ ಒಬ್ಬ ಸೇರಿಕೊಳ್ಳಲಿದ್ದಾರೆ ಎಂಬುದಾಗಿ ಎಲ್ಲರೂ ಶಂಕಿಸಿದ್ದಾರೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಶ್ರೇಯಸ್ ಅಯ್ಯರ್ ಅವರ ಕುರಿತಂತೆ. ಶ್ರೇಯಸ್ ಅಯ್ಯರ್ ರವರು ಇತ್ತೀಚಿನ ದಿನಗಳಲ್ಲಿ ಸಿಕ್ಕ ಅವಕಾಶವನ್ನು ಮನೀಶ್ ಪಾಂಡೆ ಅವರಂತೆ ಸಿಕ್ಕಾಪಟ್ಟೆ ಹಾಳುಮಾಡುತ್ತಿದ್ದಾರೆ. ಮೊನ್ನೆ ನಡೆದ ಪಂದ್ಯದಲ್ಲಿ ಕೂಡ ಸೂರ್ಯ ಕುಮಾರ್ ಯಾದವ್ ಶತಕವನ್ನು ಸಿಡಿಸಿದರು ಆದರೆ ಶ್ರೇಯಸ್ ಅಯ್ಯರ್ ರವರು ಕೇವಲ 23 ಎಸೆತಗಳಲ್ಲಿ 28 ರನ್ ಗಳನ್ನು ಬಾರಿಸಿದ್ದರು.

ಮೊನ್ನೆ ಕೊನೆಯ ಪಂದ್ಯವನ್ನು ಸೋತಿದ್ದಕ್ಕೆ ಕೂಡ ಶ್ರೇಯಸ್ ಅಯ್ಯರ್ ಅವರ ನಿಧಾನಗತಿಯ ಬ್ಯಾಟಿಂಗೇ ಕಾರಣ ಎಂಬುದಾಗಿ ತಿಳಿದು ಬರುತ್ತಿದೆ. ಈಗಾಗಲೇ ಟಿ-ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಕೂಡ ಶ್ರೇಯಸ್ ಅಯ್ಯರ್ ಹಲವರಿಗೆ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ. ಒಂದರಿಂದ ಆರನೇ ಕ್ರಮಾಂಕದ ವರೆಗೂ ಕೂಡ ಎಲ್ಲ ಸ್ಥಾನಗಳು ತುಂಬಿದ್ದಾವೆ ಹಾಗೂ ಸಾಕಷ್ಟು ಸ್ಪರ್ಧೆಗಳಿಂದ ಕೂಡಿದೆ. ಮನೀಶ್ ಪಾಂಡೆ ಕೂಡ ಶ್ರೇಯಸ್ ಅಯ್ಯರ್ ಅವರ ಹಾಗೆ ಮೊದಲಿಗೆ ತಂಡದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದರು ಆದರೆ ಬರಬರುತ್ತಾ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ತಂಡದಿಂದ ಹೊರಬಿದ್ದಿದ್ದರು. ಶ್ರೇಯಸ್ ಅಯ್ಯರ್ ಅವರ ವಿಚಾರದಲ್ಲಿ ಕೂಡ ಇದೆ ಆಗಲಿದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು.