ಕೊನೆಗೂ ಸ್ಥಾನ ಬದಲಾವಣೆ ಮಾಡಲಿರುವ ಶನಿ ದೇವ, ಇಂದಿನಿಂದ ಶನಿ ದೆಸೆಗೆ ಗುರಿಯಾಗ ಲಿರುವ ರಾಶಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ಇಂದಿನಿಂದ ಮಕರರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಯಾರಿಗೆಲ್ಲಾ ಯಾವ ದೆಸೆ ಪ್ರಾರಂಭವಾಗಲಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಶನಿ ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಂತೆ ಐದು ರಾಶಿಯವರಿಗೆ ಸಾಡೇಸಾತಿ ಹಾಗೂ ದೈಯ್ಯ ಪ್ರಾರಂಭವಾಗಲಿದೆ. ಕೆಲವು ರಾಶಿಯವರಿಗೆ ಶನಿಯ ಮಹದಾಸೆಯಿಂದ ಮುಕ್ತಿ ಕೂಡ ಸಿಗಲಿದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದೆ.
ಮಕರ ರಾಶಿಯಲ್ಲಿ ಶನಿ ಕಾಲಿಟ್ಟಿರುವ ಕಾರಣದಿಂದಾಗಿ ಧನು ರಾಶಿಯವರಿಗೆ ಸಾಡೆಸಾತಿ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಕುಂಬ ಹಾಗೂ ಮಕರ ರಾಶಿಯವರಿಗೆ ಕೂಡ ಸಾಡೇಸಾತಿಯ ಪರಿಣಾಮ ಕಂಡುಬರಲಿದೆ. ಇದೇ ಸಂದರ್ಭದಲ್ಲಿ ಶನಿದೇವ ಮಿಥುನ ಹಾಗೂ ತುಲಾ ರಾಶಿಯವರಿಗೆ ಕೂಡ ಎಡಬಿಡದಂತೆ ಕಾಡಲಿದ್ದಾನೆ. ಈ ಸಂದರ್ಭದಲ್ಲಿ ಕರ್ಕ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ದಯೆ ತೋರಲಿದ್ದಾನೆ ಎಂಬುದಾಗಿ ಕೂಡಾ ತಿಳಿದುಬಂದಿದೆ. ಮೇಲೆ ಹೇಳಿರುವ ರಾಶಿಗಳಲ್ಲಿ ಸಾಡೇಸಾತಿ ಹಾಗೂ ದೈಯ್ಯ ಪರಿಣಾಮ ಹೊಂದಿರುವ ರಾಶಿಗಳು ಆರ್ಥಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಲ್ಲಿ ಕೂಡ ಶನಿದೇವರ ವಕ್ರ ದೃಷ್ಟಿಗೆ ಕಂಡುಬಂದು ಸಾಕಷ್ಟು ನಷ್ಟವನ್ನು ಅನುಭವಿಸಲಿದ್ದಾರೆ ಎಂಬುದಾಗಿ ಅರ್ಥವಾಗಿದೆ.

ಇದಕ್ಕೆ ಪ್ರಮುಖ ಪರಿಹಾರವೆಂದರೆ ಸುಳ್ಳು ಹಾಗೂ ಮೋಸವನ್ನು ಮಾಡದೆ ಇರುವುದು ಹಾಗೂ ವೃದ್ಧ ಹಾಗೂ ಅಶಕ್ತರನ್ನು ಕೀಳಾಗಿ ಕಾಣಬಾರದು. ಶನಿವಾರದ ದಿನದಂದು ಅಶ್ವತ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಬೇಕು. ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು ಕಪ್ಪು ಬಟ್ಟೆ ಎಣ್ಣೆಯನ್ನು ದಾನ ಮಾಡುವ ಮೂಲಕ ಶನಿದೇವರ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.