ಅಬ್ಬಾ ಕೊನೆಗೂ ಸಿಕ್ತು ಸಿಹಿ ಸುದ್ದು, ಶುರುವಾಗುತ್ತಿದೆ ಮಿನಿ ಬಿಗ್ ಬಾಸ್. ಯಾರಿಗೆಲ್ಲ ಸಿಗುತ್ತಿದೆ ಗೊತ್ತಾ ಚಾನ್ಸ್??
ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಯಾವುದೇ ರಿಯಾಲಿಟಿ ಶೋಗಳು ಪ್ರಸಾರ ಆಗಬಹುದು ಆದರೆ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಅನ್ನು ಸರಿ ತೂಗಿಸುವಂತಹ ಮತ್ತೊಂದು ರಿಯಾಲಿಟಿ ಶೋ ಕಂಡುಬರುವುದು ಕಷ್ಟಸಾಧ್ಯವೇ ಸರಿ ಎಂದು ಹೇಳಬಹುದಾಗಿದೆ.
ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗುವ ಮುನ್ನವೇ ಮಿನಿ ಬಿಗ್ ಬಾಸ್ ಪ್ರಾರಂಭವಾಗಲಿದೆ ಎನ್ನುವ ಸುದ್ದಿಗಳು ಹೊರ ಬಂದಿದ್ದು ಇದು ವೂಟ್ ಸೆಲೆಕ್ಟ್ ದಲ್ಲಿ ಪ್ರಸಾರವಾಗುತ್ತದೆ ಎನ್ನುವುದಾಗಿ ತಿಳಿದುಬಂದಿದೆ. ಮಾಹಿತಿಗಳ ಪ್ರಕಾರ ಮಿನಿ ಬಿಗ್ಬಾಸ್ ಎನ್ನುವುದು 42ದಿನಗಳ ಕಾಲ ಪ್ರಸಾರ ಕಾಣಲಿದೆ ಎಂಬುದಾಗಿ ತಿಳಿದಿದ್ದು ಇದರಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಗಳು ಭಾಗವಹಿಸಲಿದ್ದಾರೆ ಎನ್ನುವ ಸುದ್ದಿಯೂ ಕೂಡ ದೊರೆತಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಶಾರ್ಟ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಫಾಲವರ್ಸ್ ಗಳನ್ನು ಹೊಂದಿರುವ ಸೆನ್ಸೇಷನಲ್ ಕ್ರಿಯೇಟರ್ಸ್ ಗಳಿಗೆ ಈ ಮಿನಿ ಬಿಗ್ ಬಾಸ್ ನಲ್ಲಿ ಅವಕಾಶ ನೀಡಲಾಗುವುದು ಎಂಬುದಾಗಿ ತಿಳಿದುಬಂದಿದೆ.

ಮಿನಿ ಬಿಗ್ ಬಾಸ್ ನಲ್ಲಿ ಗೆಲ್ಲುವ ಹಾಗೂ ಹೆಚ್ಚು ಮನರಂಜನೆಯನ್ನು ನೀಡಿ ಪ್ರೇಕ್ಷಕರ ಮನಗೆಲ್ಲುವ ಇಬ್ಬರು ಸ್ಪರ್ಧಿಯನ್ನು ಆಯ್ಕೆಮಾಡಿ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಕಳುಹಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಕೂಡ ಕಿಚ್ಚ ಅವರೇ ನಿರೂಪಣೆ ಮಾಡಲಿದ್ದು ಈ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹೀಗಿದೆ, ಶಿವಪುತ್ರ ರೂರಲ್ ಅಂಜನ್ ಡ್ರೋನ್ ಪ್ರತಾಪ್ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ ಇವರಿಷ್ಟು ಜನ ಮಾತ್ರವಲ್ಲದೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮಾದರಿಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ ಪ್ರತಿಭೆಗಳನ್ನು ಕೂಡ ಈ ಮಿನಿ ಬಿಗ್ ಬಾಸ್ ನಲ್ಲಿ ಆಯ್ಕೆಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದ್ದು ಮುಂದಿನ ದಿನಗಳಲ್ಲಿ ಯಾರೆಲ್ಲಾ ಆಯ್ಕೆಯಾಗುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.