ಕಿಚ್ಚ ಸುದೀಪ್ ರವರ ವಿರುದ್ಧ ತಿರುಗಿ ಬಿದ್ದಿದ್ದ ಅಹೋರಾತ್ರ ಹಾಗೂ ರೋಹಿತ್ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಕುರಿತಂತೆ ಒಂದು ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದೇನೆಂದರೆ ಅವರು ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅದರ ವಿರುದ್ಧ ಅಹೋರಾತ್ರ ಎನ್ನುವಾತ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯನ್ನು ಮಾಡಿದ್ದ.
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಕುರಿತಂತೆ ಅವಹೇಳನಕಾರಿ ಮಾತುಗಳನ್ನು ಹಾಗೂ ಟೀಕೆಗಳನ್ನು ಕೂಡ ಮಾಡಿದ್ದ ಎಂಬುದಾಗಿ ನಿಮಗೆಲ್ಲ ತಿಳಿದಿದೆ. ಕಳೆದ ಕೆಲವು ವರ್ಷಗಳಿಂದಲೂ ಕೂಡ ಅಹೋರಾತ್ರ ಸೇರಿದಂತೆ ಚರಣ್ ಎನ್ನುವಾತ ಇಬ್ಬರು ಕೂಡ ಪುಂಖಾನುಪುಂಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚ ಸುದೀಪ್ ರವರ ವಿರುದ್ಧ ಟೀಕಾಪ್ರಹಾರವನ್ನು ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಮಿತಿಮೀರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗ ಇಬ್ಬರಿಗೂ ಕೂಡ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಬಾಮಾ ಹರೀಶ್ ರವರು ಬಿಸಿ ಮುಟ್ಟಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ನಿರ್ದೇಶಕ ನಿರ್ಮಾಪಕ ಹಾಗೂ ಸಕಲಕಲಾವಲ್ಲಭ ಬಿರುದಾಂಕಿತರಾಗಿ ರುವ ಕಿಚ್ಚ ಸುದೀಪ್ ರವರ ಘನತೆಗೆ ಚ್ಯುತಿ ತರುವಂತೆ ಅಹೋರಾತ್ರ ಹಾಗೂ ಚರಣ್ ಎಂಬಿಬ್ಬರು ಕೂಡ ಅವಹೇಳನಕಾರಿ ಪೋಸ್ಟ್ ಹಾಗೂ ವಿಡಿಯೋಗಳನ್ನು ಮಾಡುತ್ತಲೇ ಇದ್ದಾರೆ ಇದು ನಟ ಸುದೀಪ್ ರವರ ಚಾರಿತ್ರ್ಯವ’ಧೆ ಮಾಡುವ ಕೆಲಸವಾಗಿದ್ದು ಇದರ ವಿರುದ್ಧ ಕ್ರಮವನ್ನು ಕೈ ತೆಗೆದುಕೊಳ್ಳಬೇಕು ಎಂಬುದಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ದೂರನ್ನು ದಾಖಲಿಸಿದೆ. ಮುಂದಿನ ದಿನಗಳಲ್ಲಿ ದೂರು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.