ಕೊನೆಗೂ ನಿಂತ್ಯಾನಂದ ಜೊತೆ ಮದುವೆಯ ಆಸೆಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯ ಆನಂದ್. ನಿಜಕ್ಕೂ ಹಾಗೆ ಹೇಳಲು ಕಾರಣ ಏನಂತೆ ಗೊತ್ತೇ?

22

ನಮಸ್ಕಾರ ಸ್ನೇಹಿತರೆ ನಟಿ ಪ್ರಿಯಾ ಆನಂದ್ ರವರ ಕುರಿತಂತೆ ನಿಮಗೆಲ್ಲರಿಗೂ ತಿಳಿದಿದೆ. ಪರಭಾಷಾ ನಟಿಯಾಗಿದ್ದರು ಕೂಡ ಕನ್ನಡದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆಗೆ ಇಂಡಸ್ಟ್ರಿ ಹಿಟ್ ರಾಜಕುಮಾರ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಚಿತ್ರದಲ್ಲಿ ಕೂಡ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಈ ಎರಡು ಚಿತ್ರಗಳ ಮೂಲಕ ಪ್ರಿಯಾ ಆನಂದ್ ರವರು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಸಿನಿಮಾಗಳಲ್ಲಿ ಕೂಡ ಪ್ರಿಯಾ ಆನಂದ್ ರವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ಅವರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ಏರ್ಪಟ್ಟಿದೆ. ಹೌದು ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಸ್ವಯಂಘೋಷಿತ ದೇವಮಾನವ ಆಗಿರುವ ನಿತ್ಯಾನಂದ ರವರನ್ನು ಮದುವೆಯಾಗಲು ನಾನು ಸಿದ್ಧಳಾಗಿದ್ದೇನೆ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರ ಹೊರಗೆ ಬಂದಿದ್ದೆ ತಡ ಪ್ರಿಯಾ ಆನಂದ್ ರವರ ಕುರಿತಂತೆ ಸಾಕಷ್ಟು ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಎನ್ನಿಸುವಂತೆ ಕಂಡುಬರುತ್ತಿದೆ.

ಈ ಕುರಿತಂತೆ ನಟಿ ಸ್ವಯಂ ಖುದ್ದಾಗಿ ಸ್ಪಷ್ಟೀಕರಣವನ್ನು ಕೂಡ ನೀಡಿದ್ದಾರೆ ಅದೇನ್ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾ ಆನಂದ್ ನಿತ್ಯಾನಂದ ರವರನ್ನು ಮದುವೆಯಾಗಲು ಸಿದ್ದಳಿದ್ದೇನೆ ಎಂಬ ಹೇಳಿಕೆ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಗಾದ ಹಿನ್ನೆಲೆಯಲ್ಲಿ ಅದರ ಕುರಿತಂತೆ ಮಾತನಾಡಿರುವ ನಟಿ ಸಾಮಾಜಿಕ ಜಾಲತಾಣಗಳಲ್ಲಿ ನಾನು ಅವರಿಗೆ ಸಂಬಂಧಪಟ್ಟಂತಹ ಹಲವಾರು ಮೀಮ್ಸ್ ಹಾಗೂ ಟ್ರೋಲ್ ವಿಡಿಯೋಗಳನ್ನು ನೋಡುತ್ತಿರುತ್ತೇನೆ. ಈ ಹೇಳಿಕೆ ನೀಡಿದ್ದು ನಾನು ಕೇವಲ ತಮಾಷೆಗಾಗಿ ಆದರೆ ಅದನ್ನು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ ಎಂಬುದಾಗಿ ಹೇಳಿದ್ದಾರೆ.