ನೀವು ಲಕ್ಷಿ ದೇವಿಯ ಕೃಪೆ ಪಡೆಯಬೇಕು ಎಂದರೇ, ಈ ಚಿಕ್ಕ ಕ್ರಮ ಅನುಸರಿಸಿ ಸಾಕು. ಜೀವನದಲ್ಲಿ ಸದಾ ಹಣ ನಿಮ್ಮದಾಗುತ್ತದೆ.

23

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಹಣದ ಹರಿವು ಮೂಡಿಬರಲಿ ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಷ್ಟಪಟ್ಟು ದುಡಿಯುತ್ತಾರೆ ಹಾಗೂ ಲಕ್ಷ್ಮಿದೇವಿಯ ಪೂಜೆಯನ್ನು ಕೂಡ ಮಾಡುತ್ತಾರೆ. ಯಾಕೆಂದರೆ ಲಕ್ಷ್ಮೀದೇವಿಯನ್ನು ಸಂಪತ್ತಿನ ಅಧಿದೇವತೆ ಎನ್ನುವುದಾಗಿತ್ತು. ಲಕ್ಷ್ಮಿ ನಿಮ್ಮ ಜೀವನದಲ್ಲಿ ಬಂದಿದ್ದಾರೆ ನಿಮ್ಮ ಜೀವನ ಪೂರ್ತಿ ನೀವು ಯಾವುದೇ ಆ’ತಂಕಗಳಿಲ್ಲದೇ ಶ್ರೀಮಂತರಾಗಬಹುದು. ಲಕ್ಷ್ಮಿ ದೇವತೆ ಹಾಗೂ ಕವಡೆ ಇಬ್ಬರೂ ಕೂಡ ಸಮುದ್ರದಿಂದ ಉತ್ಪತ್ತಿಯಾದವರು.

ಹೀಗಾಗಿ ಕವಡೆಯ ಉಪಾಯದಿಂದ ಹೇಗೆ ಸಿರಿವಂತ ಆಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಉಲ್ಲೇಖಿಸಲಾಗಿರುವ ಕೆಲವೊಂದು ಅಂಶಗಳ ಮೂಲಕ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಶುಕ್ರವಾರದ ದಿನದಂದು ಹಳದಿ ಹಾಗೂ ಕೇಸರಿಯನ್ನು ನೀರಿನಲ್ಲಿ ಅದ್ದಿ ಅದರ ಜೊತೆಗೆ ಬಿಳಿಬಣ್ಣದ ಕವಡೆಗಳನ್ನು ಮುಳುಗಿಸಿ. ನಂತರ ಆ ಕವಡೆಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಿಜೋರಿಯಲ್ಲಿ ಇಟ್ಟರೆ ನಿಮ್ಮ ಧನ ವೃದ್ಧಿಯಾಗುತ್ತದೆ.

ಎರಡನೇದಾಗಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ಇರುವ ಮತ್ತೊಂದು ಉಪಾಯವೆಂದರೆ ಹಳದಿ ಬಣ್ಣದ ಕವಡೆಗಳನ್ನು ಲಕ್ಷ್ಮೀದೇವಿಯ ಎದುರು ಇಡಬೇಕು ನಂತರ ಸಂಜೆಯ ಪೂಜಾ ಸಂದರ್ಭದಲ್ಲಿ ಇವುಗಳನ್ನು ವಿಧಿಪೂರ್ವಕ ಪೂಜೆ ನಡೆದ ನಂತರ ಎರಡು ಭಾಗಗಳಲ್ಲಿ ಕೆಂಪು ಬಟ್ಟೆಯಿಂದ ಕಟ್ಟಬೇಕು. ಇದರಲ್ಲಿ ಒಂದನ್ನು ನಿಮ್ಮ ತಿಜೋರಿಯಲ್ಲಿ ಇಡಿ ಇನ್ನೊಂದನ್ನು ನಿಮ್ಮ ಪರ್ಸಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಉನ್ನತ ವಾಗುತ್ತದೆ.

ಕೊನೆಯದಾಗಿ 11 ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ಮುಖ್ಯದ್ವಾರದ ಎದುರು ಕಟ್ಟಿದರು ಖಂಡಿತವಾಗಿ ನಿಮ್ಮ ಮನೆಯಲ್ಲಿ ಯಾವುದೇ ಕೆಟ್ಟ ಆತ್ಮಗಳು ಇರುವುದಿಲ್ಲ ಹಾಗೂ ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿಯಿಂದ ಸಮೃದ್ಧಿಯಾಗಿರುತ್ತದೆ. ಇವುಗಳು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಇರುವಂತಹ ಜ್ಯೋತಿಷ್ಯಕ ಉಪಾಯಗಳು ಎಂಬುದಾಗಿ ತಿಳಿದುಬಂದಿದೆ.