ಯಾರು ಇಲ್ಲದೆ ಇದ್ದರು, ಇವರು ಇರುತ್ತಾರಂತೆ. ಬೌಲರ್ ಗೆ ವಿಶ್ವಕಪ್ ಟಿಕೆಟ್ ಖಚಿತ ಪಡಿಸಿದ ವಾಸಿಂ ಜಾಫ್ರ್. ಯಾರು ಆಯ್ಕೆಯಾಗಲೇ ಬೇಕಂತೆ ಗೊತ್ತೇ??

25

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಗಾಗಿ ತಯಾರಿ ನಡೆಸುತ್ತಿದ್ದು ವಿದೇಶಿ ಟಿ20 ಸರಣಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಹೀಗಾಗಿ ತಂಡದಲ್ಲಿ ಕೂಡ ಹಲವಾರು ಹೊಸಹೊಸ ಪ್ರಯತ್ನಗಳನ್ನು ಕೂಡ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ನಡೆಸುತ್ತಿದೆ. ಉತ್ತಮ ಪ್ರದರ್ಶನವನ್ನು ನೀಡುವ ಆಟಗಾರರನ್ನು ವಿಶ್ವಕಪ್ ಗಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಇನ್ನು ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದ್ದು ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದು ಸರಣಿಯನ್ನು ಈಗಾಗಲೇ ಗೆದ್ದುಕೊಂಡಿದೆ. ಇನ್ನು ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸರಣಿಯ ಲೆಕ್ಕಾಚಾರದ ಮೇಲೆ ಈ ಒಬ್ಬ ಆಟಗಾರ ಖಂಡಿತವಾಗಿ ವಿಶ್ವಕಪ್ ತಂಡದಲ್ಲಿ ಇರಲೇಬೇಕು ಎನ್ನುವುದಾಗಿ ಮಾಜಿ ಆಟಗಾರ ವಾಸಿಂ ಜಾಫರ್ ಭವಿಷ್ಯ ನುಡಿದಿದ್ದಾರೆ. ಹೌದು ಗೆಳೆಯರೆ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 10 ರನ್ನುಗಳನ್ನು ಮಾತ್ರ ಭುವನೇಶ್ವರ್ ಕುಮಾರ್ ನೀಡಿದ್ದರು. ಎರಡನೇ ಪಂದ್ಯದಲ್ಲಿ ಕೂಡ ಮೂರು ವಿಕೆಟ್ ಗಳನ್ನು ಕಿತ್ತಿದ್ದರು.

ಅಷ್ಟಕ್ಕೂ ಭುವನೇಶ್ವರ್ ಕುಮಾರ್ ಅವರನ್ನು ವಿಶ್ವಕಪ್ ತಂಡದಲ್ಲಿ ಇಟ್ಟುಕೊಳ್ಳಲೇಬೇಕು ಎನ್ನುವುದಕ್ಕೆ ಕಾರಣವೇನಾದರೂ ಇದೆಯಾ ಎಂಬುದಾದರೆ ಅದು ಕೂಡ ಇದೆ. ಅದೇನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದಾದರೂ ಬೌಲರ್ ವಿದೇಶಿ ನೆಲದಲ್ಲಿ 2ಕಡೆಗಳಲ್ಲಿ ಸ್ವಿಂಗ್ ಮಾಡುತ್ತಾರೆ ಎಂದರೆ ಅದು ಕೇವಲ ಭುವನೇಶ್ವರ್ ಕುಮಾರ್ ಮಾತ್ರ ಎಂಬುದಾಗಿ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಗುಣಮಟ್ಟದ ಬ್ಯಾಟ್ಸ್ ಮನ್ ಗಳಿಗೆ ಚಳ್ಳೆಹಣ್ಣು ತಿನ್ನಿಸುವ ಭಾರತೀಯ ಏಕೈಕ ಬೌಲರ್ ಎಂದರೆ ಅದು ಭುವನೇಶ್ವರ್ ಕುಮಾರ್ ಹೀಗಾಗಿ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲೇಬೇಕು ಎಂಬುದಾಗಿ ಹೇಳಿದ್ದಾರೆ.