ಧೋನಿ ಫಾರ್ಮ್ ನಲ್ಲಿ ಕೊನೆಗೂ ಸಿದ್ದವಾಯಿತು ಖಡಕ್ ನಾಥ್ ಕೋಳಿಗಳು, ಎಲ್ಲದರ ಬೆಲೆ ಏರಿಕೆಯಾಗುತ್ತಿರುವಾಗ ಧೋನಿ ಫಾರ್ಮ್ ನಲ್ಲಿ ಬೆಲೆ ಎಷ್ಟು ಗೊತ್ತೇ??

44

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ವಿಶ್ವವಿಜೇತ ನಾಯಕ ಆಗಿರುವ ಮಹೇಂದ್ರ ಸಿಂಗ್ ಧೋನಿ ರವರು ಕ್ರಿಕೆಟ್ ಜೀವನದಿಂದ ಹೊರಬಂದಮೇಲೆ ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿಯನ್ನು ಪ್ರಾರಂಭಿಸಿರುವುದು ಕೂಡ ನಮಗೆ ಈಗಾಗಲೇ ತಿಳಿದಿರುವ ವಿಚಾರವಾಗಿದೆ. ಆದರೆ ಇದೇ ಕೃಷಿ ವಿಚಾರದ ಕುರಿತಂತೆ ನಾವು ಹೊಸ ಹಾಗೂ ಲೇಟೆಸ್ಟ್ ಅಪ್ಡೇಟ್ ಒಂದನ್ನು ನಿಮಗೆ ನೀಡಲು ಹೊರಟಿದ್ದೇವೆ. ಹೌದು ಗೆಳೆಯರೆ ಮಹೇಂದ್ರ ಸಿಂಗ್ ಧೋನಿ ಅವರು ಏಪ್ರಿಲ್ ತಿಂಗಳ ಕೊನೆಯಲ್ಲಿ ಮಧ್ಯಪ್ರದೇಶದಿಂದ ಬರೋಬ್ಬರಿ 2000 ಕಡಕ್ ನಾಥ್ ಕೋಳಿ ಮರಿಗಳನ್ನು ತಮ್ಮ ಫಾರಂನಲ್ಲಿ ತಂದಿರಿಸಿದ್ದರು.

ಹಾಗೂ ಅವುಗಳ ಸಾಕಾಣಿಕೆಯನ್ನು ಕೂಡ ಪ್ರಾರಂಭಿಸಿದರು. ಕಡಕ್ ನಾಥ್ ಕೋಳಿ ಗಳು ಸಾಕಷ್ಟು ಅಪರೂಪದ ಕರಿಯ ಕೋಳಿ ಗಳಾಗಿದ್ದು ಇವುಗಳ ಮಾಂಸದಲ್ಲಿ ಅತ್ಯಂತ ಹೆಚ್ಚಿನ ಪೋಷಕಾಂಶ ಹಾಗೂ ಇವುಗಳ ಬೆಲೆ ಕೂಡ ಅತ್ಯಧಿಕವಾಗಿರುತ್ತದೆ. ಧೋನಿ ರವರು ಕಡಕ್ ನಾಥ್ ಕೋಳಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ನೇರವಾಗಿ ತಮ್ಮ ಫಾರ್ಮ್ ಹೌಸ್ ನಿಂದಲೆ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಕಡಕ್ ನಾಥ್ ಕೋಳಿ ಗಳು 800 ಗ್ರಾಂ ನಿಂದ 1ಕೆಜಿವರೆಗೆ ತೂಗುತ್ತದೆ. ಇವುಗಳ ಮೊಟ್ಟೆಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಇವುಗಳು ವಿಶೇಷ ಲಾಗಿರುವುದು ಮಾತ್ರವಲ್ಲದೆ ಇವುಗಳ ಬಣ್ಣವು ಕೂಡ ಬೇರೆ ಕೋಳಿಗಿಂತ ಭಿನ್ನವಾಗಿರುತ್ತದೆ.

ಇವುಗಳು ಅತ್ಯಂತ ವಿಭಿನ್ನ ತಳಿ ಹಾಗೂ ಅತ್ಯಂತ ಕಡಿಮೆ ಕೊಬ್ಬಿನಂಶವನ್ನು ಹಾಗೂ ಹೆಚ್ಚಿನ ಪೋಷಕಾಂಶವನ್ನು ಹೊಂದಿರುವ ಕೋಳಿ ಗಳಾಗಿದ್ದು ಅವುಗಳಿಗೆ ಕೆಜಿಗೆ 800ರಿಂದ 1100 ರೂಪಾಯಿಗಳವರೆಗೆ ಮಾರಾಟವನ್ನೂ ಮಾಡುತ್ತಾರೆ. ಇನ್ನು ಮಹೇಂದ್ರ ಸಿಂಗ್ ದೋನಿ ರವರು ಕಡಕ್ ನಾಥ್ ಕೋಳಿ ತಳಿಗಳನ್ನು ಮಾತ್ರವಲ್ಲದೆ ಹಲವಾರು ವಿವಿಧ ಬಗೆಯ ಅಪರೂಪದ ತಳಿಯ ತರಕಾರಿಗಳನ್ನು ಕೂಡ ತಮ್ಮ ಫಾರಂ ಹೌಸ್ ನಲ್ಲಿ ಬೆಳೆಯುತ್ತಿದ್ದಾರೆ ಹಾಗೂ ಅದನ್ನು ನೇರವಾಗಿ ಮಾರಾಟ ಕೂಡ ಮಾಡುತ್ತಿದ್ದಾರೆ ಎಂಬುದಾಗಿ ಧೋನಿ ಹಿಂದೆಯೇ ತಿಳಿಸಿದ್ದಾರೆ. ಕ್ರಿಕೆಟ್ ನ ನಂತರ ಕೃಷಿ ಜೀವನವನ್ನು ಆಯ್ಕೆಮಾಡಿರುವ ಧೋನಿಯವರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.