ಉಳಿದಿರುವ ನಾಲ್ಕೇ ದಿನ, ಆಮೇಲೆ ನಿಮ್ಮ ಅದೃಷ್ಟ ಶುರು. ಶನಿ ಮಹಾತ್ಮನ ಕೃಪೆ ಈ ಬಾರಿ ಯಾರಿಗೆಲ್ಲ ಸಿಗಲಿದೆ ಗೊತ್ತೇ??

982

ನಮಸ್ಕಾರ ಸ್ನೇಹಿತರೆ ಜ್ಯೋತಿಷಶಾಸ್ತ್ರದಲ್ಲಿ ಇನ್ನು ಕೇವಲ ನಾಲ್ಕು ದಿನಗಳಲ್ಲಿ ಮಕರ ರಾಶಿಗೆ ಶನಿ ಪ್ರವೇಶ ಮಾಡಲಿದ್ದಾನೆ. ಶನಿಯಿಂದ ಕೇವಲ ಕೆಟ್ಟ ಪರಿಣಾಮಗಳು ಮಾತ್ರವಲ್ಲದೆ ಕೆಲವು ರಾಶಿಯವರಿಗೆ ಒಳ್ಳೆಯ ಪರಿಣಾಮಗಳು ಕೂಡ ಉಂಟಾಗುತ್ತದೆ. ಹಾಗಿದ್ದರೆ ಶನಿಯ ಮಕರ ರಾಶಿಯ ಪ್ರವೇಶದಿಂದಾಗಿ ಒಳ್ಳೆಯ ಲಾಭವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ವೃಷಭ ರಾಶಿ; ಮಕರ ರಾಶಿಯಲ್ಲಿ ಶನಿಯ ಪ್ರವೇಶದಿಂದ ವೃಷಭ ರಾಶಿಯವರಿಗೆ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಸಿಗಲಿದ್ದು ಈಗಾಗಲೇ ಉದ್ಯೋಗದಲ್ಲಿರುವವರಿಗೆ ಭಡ್ತಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ ವ್ಯಾಪಾರದಲ್ಲಿ ಕೂಡ ಉತ್ತಮ ಲಾಭ ಸಿಗಲಿದ್ದು ಹೊಸ ವ್ಯಾಪಾರ ಮಾಡುವವರಿಗೆ ಪ್ರಶಸ್ತವಾದ ಸಮಯ.

ಧನು ರಾಶಿ; ಹಠಾತ್ತನೆ ಅನಿರೀಕ್ಷಿತ ಮೂಲಗಳಿಂದ ಧನ ಲಾಭವಾಗಲಿದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ದೊಡ್ಡಮಟ್ಟದ ಲಾಭಾಂಶ ಸಿಗಲಿದೆ. ಪಾಲುದಾರಿಕೆಯ ವ್ಯಾಪಾರ ಖಂಡಿತವಾಗಿ ಗೆಲುವನ್ನು ತರಲಿದೆ.

ಮೀನ ರಾಶಿ; ಉದ್ಯೋಗ ವ್ಯಾಪಾರ ಸೇರಿದಂತೆ ಹಲವಾರು ಮೂಲಗಳಿಂದ ಧನಲಾಭವಾಗುವುದು. ಈ ಸಂದರ್ಭದಲ್ಲಿ ಸಿಗುವ ಹಣವನ್ನು ಹೂಡಿಕೆಗಳಲ್ಲಿ ಉಪಯೋಗಿಸಿದರೆ ಮುಂದಿನ ದಿನಗಳಲ್ಲಿ ಹೂಡಿಕೆಯ ಹಣ ದ್ವಿಗುಣವಾಗುವ ಸಂಭವವಿದೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕಂಡು ಬರುವುದು.

ಮಿಥುನ ರಾಶಿ; ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಆದಾಯದ ಹೆಚ್ಚಳ ಸತತವಾಗಿ ಕಂಡುಬರಲಿದೆ ಆದರೆ ಖರ್ಚುವೆಚ್ಚಗಳಲ್ಲಿ ಸ್ವಲ್ಪಮಟ್ಟಿಗೆ ನಿಯಂತ್ರಣವನ್ನು ತಂದು ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಕೊಂಚ ಮಟ್ಟಿಗೆ ಗಮನ ಇರಲಿ.

ತುಲಾ ರಾಶಿ; ಈ ಸಂದರ್ಭದಲ್ಲಿ ತುಲಾ ರಾಶಿಯವರು ಆರೋಗ್ಯದ ಕುರಿತಂತೆ ಕೊಂಚ ಹೆಚ್ಚಿನ ಗಮನವನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರು ಕೊಂಚ ಹೆಚ್ಚಿನ ಶ್ರಮವನ್ನು ವಹಿಸಿದರೆ ಗೆಲುವು ಸಿದ್ಧ ಹಸ್ತ.

ಕುಂಭ ರಾಶಿ; ದೂರ ಪ್ರಯಾಣದ ಅವಕಾಶ ಸಿಗಲಿದ್ದು ಕೊಂಚಮಟ್ಟಿಗೆ ಜಾಗೃತರಾಗಿರಿ. ಅನಗತ್ಯವಾಗಿ ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ ಖರ್ಚು ನೋಡಿಕೊಂಡು ಮಾಡಿ. ಪರಿಶ್ರಮಕ್ಕೆ ತಕ್ಕ ಫಲ ಖಂಡಿತವಾಗಿ ಸಿಗುತ್ತದೆ. ಇವರೇ ಶನಿಯ ಮಕರ ರಾಶಿಯ ಪ್ರವೇಶದಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳು.