ಗುರು ಗ್ರಹದ ಹಿಮ್ಮುಖ ಚಲನೆ ಇದೇ ತಿಂಗಳಿನಲ್ಲಿ, ಇದರಿಂದ ಗುರು ದೆಸೆ ಪಡೆದು, ಹಣಗಳಿಸುವ ಮೂರು ರಾಶಿಗಳು ಯಾವ್ಯಾವು ಗೊತ್ತೇ?

783

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಬದಲಾವಣೆ ಆಯಾಯ ರಾಶಿಯವರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇಂದಿನ ಲೇಖನಿಯಲ್ಲಿ ಶುಭಕಾರಕ ಗುರುಗ್ರಹದ ಹಿಮ್ಮುಖ ಚಲನೆಯಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳ ಕುರಿತಂತೆ ತಿಳಿಯೋಣ ಬನ್ನಿ.

ಕರ್ಕ ರಾಶಿ; ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ದೂರ ಪ್ರಯಾಣ ಮಾಡುವ ಸೌಭಾಗ್ಯ ದೊರೆಯಲಿದೆ. ಕರ್ಕರಾಶಿಯ ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಅರ್ಧಕ್ಕೆ ನಿಂತುಕೊಂಡಿರುವ ಕೆಲಸಗಳು ಮತ್ತೆ ಪ್ರಾರಂಭವಾಗಲಿವೆ. ಒಟ್ಟಾರೆಯಾಗಿ ಕರ್ಕ ರಾಶಿಯವರು ಗುರುವಿನ ಹಿಮ್ಮುಖ ಚಲನೆಯ ಸಂದರ್ಭದಲ್ಲಿ ಪ್ರಗತಿಯನ್ನು ಪಡೆಯುವುದಂತೂ ನಿಶ್ಚಿತ.

ಮಿಥುನ ರಾಶಿ; ಗುರುವಿನ ಹಿಮ್ಮುಖ ಚಲನೆಯ ಕಾರಣದಿಂದಾಗಿ ಮಿಥುನ ರಾಶಿಯವರಿಗೆ ಅದರಲ್ಲೂ ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಇರುವ ಜನರಿಗೆ ನಿಶ್ಚಿತ ಮಟ್ಟದ ಲಾಭ ದೊರಕಲಿದೆ ಹಾಗೂ ಆದಾಯದಲ್ಲಿ ಹೆಚ್ಚಳ ಕಂಡು ಬರಲಿದೆ. ವ್ಯಾಪಾರಿಗಳ ಕಾರ್ಯವ್ಯಾಪ್ತಿ ಹೆಚ್ಚಾಗಲಿದ್ದು ಉದ್ಯೋಗದಲ್ಲಿರುವವರು ಸಂಬಳವೂ ಕೂಡ ಅಧಿಕಗೊಳ್ಳಲಿದೆ. ಒಟ್ಟಾರೆಯಾಗಿ ಈ ಸಮಯ ಎನ್ನುವುದು ಮಿಥುನ ರಾಶಿಯವರಿಗೆ ಜೀವನದಲ್ಲಿ ಉನ್ನತಿಯನ್ನು ಕಾಣಲು ಅತ್ಯುತ್ತಮ ಸಮಯ ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿರುವುದು ನಿಮ್ಮ ಕರ್ತವ್ಯವಾಗಿದೆ.

ವೃಷಭ ರಾಶಿ; ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕಂಡು ಬರಲಿದೆ ಹಾಗೂ ಈಗಾಗಲೇ ಕೆಲಸವನ್ನು ಹುಡುಕುತ್ತಿರುವವರಿಗೆ ಅವರ ಮನಸ್ಸಿಗೆ ಇಷ್ಟವಾಗುವಂತಹ ಕೆಲಸ ದೊರೆಯಲಿದೆ. ಒಂದಕ್ಕಿಂತ ಹೆಚ್ಚು ಆದಾಯದ ಮೂಲ ಇರುವ ಕಾರಣದಿಂದಾಗಿ ಅನಿರೀಕ್ಷಿತವಾಗಿ ಹಲವಾರು ಕಡೆಗಳಿಂದ ಹಣದ ಹರಿವು ಮೂಡಿಬರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಸಮಯ ಶ್ರೀಘ್ರದಲ್ಲಿ ಕಂಡುಬರುವುದು. ಈ ಮೂರು ರಾಶಿಗಳೇ ಗುರುವಿನ ಹಿಮ್ಮುಖ ಚಲನೆಯಿಂದ ಲಾಭವನ್ನು ಪಡೆಯುವ ರಾಶಿಗಳು.