ಎಲ್ಲರನ್ನು ಪಕ್ಕಕ್ಕೆ ಸರಿಸಿ, ಟೀಮ್ ಇಂಡಿಯಾಗೆ ಹೊಸ ಆರಂಭಿಕನನ್ನು ಆಯ್ಕೆ ಮಾಡಿದ ವಾಸಿಂ. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಮುಗಿಸಿದ್ದು ಜುಲೈ 7ರಿಂದ ಮೊದಲ ಟಿ-ಟ್ವೆಂಟಿ ಪಂದ್ಯವನ್ನು ಆಡಲಿದೆ. ಒಟ್ಟಾರೆಯಾಗಿ ಟಿ-ಟ್ವೆಂಟಿ ಸರಣಿಯಲ್ಲಿ ಮೂರು ಟಿ-ಟ್ವೆಂಟಿ ಪಂದ್ಯಗಳು ಇರಲಿವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಸುಲಭವಾಗಿ ಗೆಲ್ಲ ಬಹುದಾಗಿತ್ತು ಆದರೆ ಭಾರತೀಯ ಕ್ರಿಕೆಟ್ ತಂಡ ಕೈಗೆ ಬಂದ ತುತ್ತನ್ನು ಕೈಚೆಲ್ಲಿತ್ತು. ಇಷ್ಟಾದರೂ ಕೂಡ ಕೆಲವೊಂದು ಆಟಗಾರರ ಪ್ರದರ್ಶನ ಭಾರತೀಯ ತಂಡದ ಪರವಾಗಿ ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಟಿ20 ಸರಣಿಯಲ್ಲಿ ಈ ಆಟಗಾರನನ್ನು ಆರಂಭಿಕ ಆಟಗಾರ ನನ್ನಾಗಿ ಆಯ್ಕೆಮಾಡಬೇಕು ಎನ್ನುವುದಾಗಿ ಆ ಆಟಗಾರನ ಪರವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಈ ಸರಣಿಯಲ್ಲಿ ಬಹುತೇಕ ಎಲ್ಲಾ ಅನುಭವಿ ಆಟಗಾರರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ರಿಷಬ್ ಪಂತ್ ರವರನ್ನು ಆರಂಭಿಕ ಆಟಗಾರನಾಗಿ ಭಡ್ತಿ ನೀಡುವುದು ಅಗತ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ಟೆಸ್ಟ್ ಬಂದಿದ್ದಲ್ಲಿ ಕೂಡ ಶತಕ ಹಾಗೂ ಅರ್ಧಶತಕದ ಆಟವನ್ನು ಮೊದಲ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಹಾಡಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಧಿಕ ರನ್ ಸ್ಕೋರರ್ ಆಗಿ ಕಾಣಿಸಿಕೊಂಡಿದ್ದಾರೆ.

ಹೀಗಾಗಿ ವೈಟ್ ಬಾಲ್ ಸರಣಿಯಲ್ಲಿ ಕೂಡ ರಿಷಬ್ ಪಂತ್ ರವರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಬೇಕು ಎಂಬುದಾಗಿ ಹೇಳಿದ್ದಾರೆ. ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ರಿಷಬ್ ಪಂತ್ ರವರನ್ನು ಆರಂಭಿಕ ಆಟಗಾರನಾಗಿ ಆಡಿಸಿದರೆ ಖಂಡಿತವಾಗಿ ಅವರು ಪ್ರಬುದ್ಧವಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಸಮಯ ಅನುಸಾರವಾಗಿ ಆಟವಾಡುತ್ತಾರೆ ಎಂಬುದಾಗಿ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ರಿಷಬ್ ಪಂತ್ ಖಂಡಿತವಾಗಿ ವಾಸಿಂ ಜಾಫರ್ ರವರು ಹೇಳಿರುವ ಕ್ರಮಾಂಕದಲ್ಲಿ ಆಟವಾಡಿದರೆ ತಂಡದ ಆರಂಭಿಕ ಬ್ಯಾಟಿಂಗ್ ಕ್ರಮಾಂಕವನ್ನು ಆಧರಿಸಲಿದ್ದಾರೆ ಎಂಬುದು ಬಹುತೇಕ ಎಲ್ಲಾ ನೆಟ್ಟಿಗರ ಅಭಿಪ್ರಾಯವಾಗಿದೆ.