ಮತ್ತೊಂದು ಮನೆಯನ್ನು ಖರೀದಿಸಿದ ನಯನತಾರ. ಅದು ರಜನಿ ಮನೆ ಪಕ್ಕದಲ್ಲಿ. ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತದೆ. ಎಷ್ಟು ಅಂತೇ ಗೊತ್ತೇ??

36

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದ ಅನಭಿಷಕ್ತ ರಾಣಿ ಲೇಡಿ ಸೂಪರ್ ಸ್ಟಾರ್ ಎಂದು ಬಿರುದಾಂಕಿತರಾಗಿ ರುವ ನಟಿ ನಯನತಾರಾ ರವರು ಇತ್ತೀಚಿಗಷ್ಟೇ ತಮ್ಮ ಬಹುಕಾಲದ ಗೆಳೆಯ ಆಗಿರುವ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ರವರನ್ನು ಮಹಾಬಲಿಪುರಂನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಮದುವೆಯಾಗುವುದರ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರು ಇತ್ತೀಚಿಗಷ್ಟೇ ಥಾಯ್ಲೆಂಡ್ ದೇಶಕ್ಕೆ ಹನಿಮೂನ್ ಗಾಗಿ ಕೂಡ ತೆರಳಿದ್ದರು. ಇದಕ್ಕೂ ಮುನ್ನ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಊಟೋಪಚಾರವನ್ನು ನೀಡುವ ಮೂಲಕವೂ ಕೂಡ ಎಲ್ಲರ ಮನಸ್ಸನ್ನು ಗೆದ್ದಿದ್ದರು.

ಇನ್ನು ಈಗ ಸದ್ಯಕ್ಕೆ ನಯನತಾರ ಸುದ್ದಿಯಾಗುತ್ತಿರುವುದು ಅವರ ಹೊಸ ಮನೆಯ ಖರೀದಿ ವಿಚಾರಕ್ಕಾಗಿ. ಹೌದು ಗೆಳೆಯರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ನಯನತಾರಾ ಅತ್ಯಂತ ಹೆಚ್ಚು ಬಹುಬೇಡಿಕೆಯ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈಗ ವಿಘ್ನೇಶ್ ರವರ ಜೊತೆಗೆ ಮದುವೆಯಾದ ನಂತರ ರಜನಿಕಾಂತ್ ರವರು ನೆಲೆಸುವ ಪೊಯೇಸ್ ಗಾರ್ಡನ್ ನಲ್ಲಿ ಎರಡು ಮನೆಗಳನ್ನು ಖರೀದಿಸಿರುವ ಸುದ್ದಿ ಕೇಳಿಬರುತ್ತಿದೆ.

ಇಲ್ಲಿ ರಜನಿಕಾಂತ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ನೆಲೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 4 ಬೆಡ್ರೂಮ್ ಗಳ ಮನೆಯನ್ನು ಖರೀದಿಸಿರುವ ನಯನತಾರಾ ಬಂದು ಮನೆಗೆ 26 ಕೋಟಿ ರೂಪಾಯಿಯಂತೆ ಒಟ್ಟಾರೆಯಾಗಿ 52 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈಜುಕೊಳ ಜಿಮ್ನಾಷಿಯಂ ಸೇರಿದಂತೆ ಹಲವಾರು ಐಷಾರಾಮಿ ಸೌಕರ್ಯಗಳು ಕೂಡ ಈ ಮನೆಯಲ್ಲಿವೆ. ಇನ್ನು ಈ ಮನೆ 1500 ಚದರ ಅಡಿ ಪ್ರದೇಶದ ವಿಸ್ತೀರ್ಣದಲ್ಲಿ ಇದೆ ಎಂಬುದಾಗಿ ತಿಳಿದುಬಂದಿದೆ. ಮದುವೆ ಮೂಲಕ ಸುದ್ದಿಯಾಗಿದ್ದ ನಯನತಾರಾ ಈಗ ಮನೆ ಖರೀದಿಯ ಮೂಲಕ ಸುದ್ದಿಯಾಗುತ್ತಿದ್ದಾರೆ.