ಭಾರತ ತಂಡದಲ್ಲಿ ಧೋನಿ ರವರ ಸ್ಥಾನವನ್ನು ಪರ್ಫೆಕ್ಟ್ ಆಗಿ ತುಂಬುವ ಪ್ಲೇಯರ್ ಕೊನೆಗೂ ಸಿಕ್ಕೇ ಬಿಟ್ಟ. ಯಾರು ಗೊತ್ತೇ ಆ ಟಾಪ್ ಪ್ಲೇಯರ್??

36

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹೇಂದ್ರ ಸಿಂಗ್ ಧೋನಿ ರವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಒಬ್ಬ ಅತ್ಯಂತ ಯಶಸ್ವಿ ನಾಯಕನಾಗಿ ವಿಕೆಟ್ ಹಿಂದೆ ಚಾಲಾಕಿ ವಿಕೆಟ್ ಕೀಪರ್ ಆಗಿ ಹಾಗೂ ಬ್ಯಾಟಿಂಗ್ನಲ್ಲಿ ಅತ್ಯದ್ಭುತ ಸರ್ವಶ್ರೇಷ್ಠ ಫಿನಿಶರ್ ಆಗಿ ಕ್ರಿಕೆಟ್ ಜಗತ್ತಿನಲ್ಲಿ ಕಾಣಿಸಿಕೊಂಡ ಪ್ರತಿಭೆ ಎಂದರೆ ತಪ್ಪಾಗಲಾರದು. ಮಾಜಿ ಕಪ್ತಾನ ಕಪಿಲ್ ದೇವ್ ಹೇಳುವಂತೆ ಮಹೇಂದ್ರ ಸಿಂಗ್ ಧೋನಿ ರವರಂತಹ ಆಟಗಾರ ಶತಮಾನದಲ್ಲಿ ಒಮ್ಮೆ ಬರುತ್ತಾರೆ ಇಂತಹ ಆಟಗಾರ ಹಿಂದೆ ಬಂದಿಲ್ಲ ಮುಂದೆ ಹುಟ್ಟೋದು ಇಲ್ಲ ಎಂಬುದಾಗಿ ಹೇಳಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ರವರ ನಂತರ ಭಾರತೀಯ ಕ್ರಿಕೆಟ್ ತಂಡ ಅಷ್ಟೊಂದು ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಐಸಿಸಿ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ನೀಡಿಲ್ಲ ಎಂದು ಹೇಳಬಹುದಾಗಿದೆ.

ಇನ್ನು ಮಹೇಂದ್ರ ಸಿಂಗ್ ಧೋನಿ ರವರು ಪ್ರಮುಖವಾಗಿ ತಂಡದ ಆಪದ್ಬಾಂಧವ ರಾಗಿ ಕಾಣಿಸಿಕೊಳ್ಳುತ್ತಾರೆ ಅದಕ್ಕೆ ಅವರನ್ನು ಸರ್ವಶ್ರೇಷ್ಠ ಫಿನಿಶರ್ ಎಂಬುದಾಗಿ ಕರೆಯುತ್ತಾರೆ. ಎಂಎಸ್ ಧೋನಿ ರವರ ನಿವೃತ್ತಿಯ ನಂತರ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಲು ಕೆಎಲ್ ರಾಹುಲ್ ಹಾರ್ದಿಕ್ ಪಾಂಡ್ಯ ಹಾಗೂ ರಿಷಬ್ ಪಂತ್ ರವರು ಕೂಡ ಪ್ರಯತ್ನಪಟ್ಟರು ಸಂಪೂರ್ಣವಾಗಿ ಯಶಸ್ವಿಯಾಗುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಈಗ ಈ ಒಬ್ಬ ಆಟಗಾರ ಧೋನಿ ರವರ ಆಪದ್ಬಾಂಧವ ಜವಾಬ್ದಾರಿಯನ್ನು ನಿರ್ವಹಿಸಲು ಸರ್ವಶಕ್ತ ರಾಗಿದ್ದಾರೆ ಎಂದು ಹೇಳಬಹುದಾಗಿದೆ ಇದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಹೌದು ಗೆಳೆಯರೇ ಅವರಿನ್ಯಾರು ಅಲ್ಲ ದಿನೇಶ್ ಕಾರ್ತಿಕ್.

ಹೌದು ಗೆಳೆಯರೆ ದಿನೇಶ್ ಕಾರ್ತಿಕ್ ರವರು ಈಗಾಗಲೇ ಆರ್ಸಿಬಿ ತಂಡದ ಪರವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕೂಡ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿ ಮತ್ತೊಮ್ಮೆ ತನ್ನ ಮೌಲ್ಯವನ್ನು ಎಲ್ಲರಿಗೂ ತೋರಿಸಿದ್ದಾರೆ. ಖಂಡಿತವಾಗಿಯೂ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಧೋನಿ ರವರ ಈ ವಿಶೇಷ ಜವಾಬ್ದಾರಿಯ ಪರ್ಫೆಕ್ಟ್ ರಿಪ್ಲೇ ಸಾಗಿ ದಿನೇಶ್ ಕಾರ್ತಿಕ್ ರವರು ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.