ಬಿಗ್ ನ್ಯೂಸ್: ಹೊಸ ಬದಲಾವಣೆ ಬಿಡುಗಡೆ ಮಾಡಿದ RBI: ನಿಮ್ಮ ಬಳಿ ಈ ರೀತಿಯ ನೋಟುಗಳಿದ್ದರೆ, ಜೇಬಿಗೆ ಕತ್ತರಿ ಗ್ಯಾರಂಟಿ. ಯಾವ್ಯಾವು ಗೊತ್ತೇ?

48

ನಮಸ್ಕಾರ ಸ್ನೇಹಿತರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹರಿದ ಹಾಗೂ ಮುದುಡಿದ ನೋಟುಗಳ ಕುರಿತಂತೆ ಇತ್ತೀಚಿಗಷ್ಟೇ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನೋಟುಗಳ ಫಿಟ್ನೆಸ್ ಕುರಿತಂತೆ ಕೆಲವೊಂದು ಸೂಚನೆಗಳನ್ನು ಆರ್ಬಿಐ ಹೊರಡಿಸಿದ್ದು ಅದರ ಅನ್ವಯ ನೋಟುಗಳು ಸರಿಯಿಲ್ಲದಿದ್ದರೆ ಇನ್ನು ಮುಂದೆ ಅವುಗಳ ಚಲಾವಣೆಯನ್ನು ರದ್ದು ಮಾಡಲಾಗುತ್ತದೆ ಎಂಬುದಾಗಿ ಕೇಳಿಬಂದಿದೆ. ಈ ವಿಚಾರವಾಗಿ ಪ್ರತಿಯೊಂದು ಬ್ಯಾಂಕುಗಳಿಗೂ ಕೂಡ ವಿಶೇಷವಾದ ಯಂತ್ರವನ್ನು ಅಳವಡಿಸಲಾಗಿದೆ ಹಾಗೂ ಮೂರು ತಿಂಗಳಿಗೊಮ್ಮೆ ನೋಟುಗಳನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ. ಇನ್ನು ನೋಟುಗಳ ಫಿಟ್ನೆಸ್ ಅನ್ನು ಪರಿಶೀಲಿಸಲು ಕೆಲವೊಂದು ಮಾನದಂಡಗಳನ್ನು ಪರಿಚಯಿಸಲಾಗಿದೆ.

ಪ್ರತಿಯೊಂದು ನೋಟುಗಳು ಈ ನಿಯಮದ ಮೇಲೆ ಇನ್ನು ಮುಂದೆ ಕಾರ್ಯನಿರ್ವಹಿಸಲಿವೆ. ಅವುಗಳೆಂದರೆ ನೋಟುಗಳು ಅತಿ ಕೊಳೆ ಆಗಿರಬಾರದು ಹಾಗೂ ಧೂಳಿನಿಂದ ಆವೃತವಾಗಿರಬಾರದು. ನೋಟುಗಳು ಒಂದು ಕೈಯಿಂದ ಇನ್ನೊಂದು ಕೈಗೆ ಮಾರುಕಟ್ಟೆಯಲ್ಲಿ ಓಡಾಡುತ್ತಲೇ ಇರುತ್ತದೆ ಹೀಗಾಗಿ ಅವುಗಳು ತೆಳುವಾಗಿರುತ್ತವೆ. ಹೀಗಾಗಿ ನೋಟುಗಳು ಅತ್ಯಂತ ತೆಳುವಾಗಿ ಇರಬಾರದು ಖಡಕ್ ಆಗಿದ್ದರೆ ಮಾತ್ರ ಅವುಗಳಿಗೆ ಮಾನ್ಯತೆ ಇರುತ್ತದೆ. ನೋಟಿನ ಅಂಚು ಹಾಗೂ ಮಧ್ಯಭಾಗ ಹರಿದಿರಬಾರದು. ನೋಟುಗಳ ಡಾಗ್ ಇಯರ್ಸ್ ಗಾತ್ರ 100 ಚದರ ಮೀಟರ್ ಗಿಂತ ಹೆಚ್ಚಾಗಿರಬಾರದು. ನೋಟಿನಲ್ಲಿ 8 ಚದರ ಮಿಲಿ ಮೀಟರ್ ಗಿಂತ ಹೆಚ್ಚಿನ ರಂಧ್ರ ಇರಬಾರದು. ನೋಟುಗಳಲ್ಲಿ ಯಾವುದೇ ಗ್ರಾಫಿಕ್ ಬದಲಾವಣೆ ಇರಬಾರದು. ನೋಟುಗಳ ಮೇಲೆ ಕಲೆ ಹಾಗೂ ಇಂಕ್ ಕಲೆಗಳು ಇರಬಾರದು.

ನೋಟುಗಳ ಮೇಲೆ ಏನನ್ನು ಕೂಡ ಬರಬಾರದು ಹಾಗೂ ಏನು ಕೂಡ ತಗಲಿರಬಾರದು. ಬಣ್ಣ ಮುಸುಕಾಗಿ ಇರಬಾರದು ಹಾಗೂ ಹರಿದ ನೋಡಿದ ಮೇಲೆ ಅಂಟು ಅಥವಾ ಟೇಪನ್ನು ಅಂಟಿಸಬಾರದು. ನೋಟುಗಳು ಬಣ್ಣ ಹೋಗಿರಬಾರದು ಹಾಗೂ ಸಾಮಾನ್ಯ ನೋಟಿನ ಭಾರಕ್ಕಿಂತ ಹಗುರವಾಗಿದ್ದ ಅವುಗಳು ಅನರ್ಹ ವಾಗುತ್ತದೆ. ಆರ್ಬಿಐ ಪರಿಚಯಿಸಿರುವ ಹೊಸ ಯಂತ್ರಗಳು ಇನ್ನುಮುಂದೆ ಇಂತಹ ಅನರ್ಹ ನೋಟುಗಳನ್ನು ಗುರುತಿಸಿ ಹೊರಹಾಕಿ ಅರ್ಥವ್ಯವಸ್ಥೆಯಲ್ಲಿ ಉತ್ತಮ ನೋಟುಗಳ ಚಲಾವಣೆಯನ್ನು ನೋಡಿಕೊಳ್ಳುವಂತೆ ಮಾಡಲಿದೆ.