ಭಾರತ ತಂಡ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋಲಲು ನೇರವಾಗಿ ಕಾರಣ ತಿಳಿಸಿದ ರವಿ ಶಾಸ್ತ್ರೀ: ಏನಂತೆ ಗೊತ್ತೇ?

13

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ಮುಗಿದ ನಂತರದಿಂದ ಭಾರತೀಯ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿತ್ತು ಆದರೆ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾತ್ರ ಗೆಲ್ಲುವ ಪಂದ್ಯವನ್ನು ಸೋತು ಕೈಚೆಲ್ಲಿತು. ಟೆಸ್ಟ್ ಪಂದ್ಯ ಪ್ರಾರಂಭವಾಗುವ ಮುನ್ನವೇ ಪ್ರಮುಖ ಆಟಗಾರರು ಸೇರಿದಂತೆ ನಾಯಕ ರೋಹಿತ್ ಶರ್ಮ ಇಂಜುರಿಯ ಹಾಗೂ ಅನಾರೋಗ್ಯದ ಕಾರಣದಿಂದಾಗಿ ತಂಡದಿಂದ ಹೊರ ಹೋಗಿದ್ದರು. ಹೀಗಿದ್ದರೂ ಕೂಡ ಜಸ್ಪ್ರೀತ್ ಬುಮ್ರಾ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿತ್ತು.

ಹೌದು ಗೆಳೆಯರೇ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ರವರ ಶತಕದಾಟ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಘಾ’ತದ ನಡುವೆಯೂ ಕೂಡ ಪಂದ್ಯಾಟದಲ್ಲಿ ಮೇಲುಗೈಯನ್ನು ಸಾಧಿಸುವಂತೆ ಮಾಡಿತ್ತು. ಇದಾದ ನಂತರವೂ ಕೂಡ ಜಸ್ಪ್ರೀತ್ ಬುಮ್ರಾ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಸಂಪೂರ್ಣವಾಗಿ ಇಂಗ್ಲೆಂಡ್ ತಂಡದ ಎದುರು ಸೋತು ಶರಣಾಗಿತ್ತು ಎಂದರೆ ತಪ್ಪಾಗಲಾರದು. ಹೀಗಾಗಿ 3 ಹಾಗೂ 1ರ ಅಂತರದಿಂದ ಸರಣಿಯನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದ ಭಾರತೀಯ ಕ್ರಿಕೆಟ್ ತಂಡ ಈಗ 2 ಹಾಗೂ 2ರ ಸಮ ಬಲದೊಂದಿಗೆ ಸರಣಿಯನ್ನು ಮುಗಿಸಿದೆ. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು.

ಈ ಕುರಿತಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕನೇ ದಿನದ ಆಟದಲ್ಲಿ ಎರಡು ಅವಧಿಗಳ ಕಾಲ ಭಾರತೀಯ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಮಾಡಬೇಕಾಗಿತ್ತು ಆದರೆ ಭಾರತೀಯ ಕ್ರಿಕೆಟ್ ತಂಡ ಈ ಸಂದರ್ಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿತ್ತು. ವಿಕೆಟ್ ಕಳೆದುಕೊಂಡಿದ್ದರು ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬೇಕಾಗಿತ್ತು ಆದರೆ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು ಎಂಬುದಾಗಿ ನೇರವಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರವಿಶಾಸ್ತ್ರಿ ಅವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ.