ಮೊದಲ ಬಾರಿಗೆ ದ್ರಾವಿಡ್ ರವರ ಮೇಲೆ ಕಿಡಿಕಾರಿದ ನೆಟ್ಟಿಗರು, ಶ್ರೇಷ್ಠ ಆಟಗಾರ ಫ್ಲಾಪ್ ಕೋಚ್ ಆಗಿಹೋದರೇ?? ನಡೆಯುತ್ತಿರುವ ಚರ್ಚೆ ಏನು ಗೊತ್ತೇ?

24

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದ ವಾಲ್ ಎಂದೇ ಕ್ರಿಕೆಟ್ನಲ್ಲಿ ಖ್ಯಾತರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಗೌರವಿಸುತ್ತಾರೆ. ಅದಕ್ಕೆ ಅವರ ಅತ್ಯುತ್ತಮ ಆಟ ಹಾಗೂ ವ್ಯಕ್ತಿತ್ವ ಕಾರಣ ಎಂದರೆ ತಪ್ಪಾಗಲಾರದು. ಅವರ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮವಾಗಿ ಪ್ರದರ್ಶನವನ್ನು ಮುಂದಿನ ದಿನಗಳಲ್ಲಿ ನೀಡಬಹುದು ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಆದರೆ ಈಗ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಟೆಸ್ಟ್ ಪಂದ್ಯವನ್ನು ಹಾಗೂ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ಸೋತಿದ್ದು ನಿಜ ಕೂಡ ಎಲ್ಲರ ಅಸಮಧಾನಕ್ಕೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ಆಟಗಾರನಾಗಿ ಯು ಕೂಡ ಇಂಗ್ಲೆಂಡ್ ಪ್ರವಾಸವನ್ನು ಹಲವಾರು ಬಾರಿ ಮಾಡಿರುವ ಕೋಚ್ ರಾಹುಲ್ ದ್ರಾವಿಡ್ ರವರು ಈ ಬಾರಿ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಸರಿಯಾದ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂಬುದಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ರಾಹುಲ್ ದ್ರಾವಿಡ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಯಾಕೆಂದರೆ ಮೊದಲ ಇನಿಂಗ್ಸ್ನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯವನ್ನು ಸಾಧಿಸಿದ್ದ ಭಾರತೀಯ ಕ್ರಿಕೆಟ್ ತಂಡ ಕನಿಷ್ಠಪಕ್ಷ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ ಡ್ರಾ ಆದರೂ ಮಾಡಿಕೊಳ್ಳಬೇಕಾಗಿತ್ತು. ಆದರೆ ಐದನೇ ದಿನ ಮುಗಿಯುವ ಮುನ್ನವೇ ನಿರಾಯಾಸವಾಗಿ 7 ವಿಕೆಟ್ ಗಳ ಗೆಲುವನ್ನು ಇಂಗ್ಲೆಂಡ್ ತಂಡ ಸಾಧಿಸಿದ್ದು ನಿಜಕ್ಕೂ ಕೂಡ ಅತ್ಯಂತ ಹೀನಾಯ ಸೋಲು ಎಂದರೆ ತಪ್ಪಾಗಲಾರದು.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದಿರುವ ಅಸಮಾಧಾನದ ಹೊಗೆಯಲ್ಲಿ ವಿಶ್ವಕಪ್ ನಲ್ಲಿಯೂ ಕೂಡ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದ ಮೇಲೆ ನಮಗೆ ನಂಬಿಕೆ ಇಲ್ಲ ಅವರೊಬ್ಬ ವೇಸ್ಟ್ ಕೋಚ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಾಹುಲ್ ದ್ರಾವಿಡ್ ಅವರು ಇಷ್ಟೊಂದು ದೊಡ್ಡಮಟ್ಟದ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ ಎಂದರೆ ನಂಬಲೇ ಬೇಕಾಗಿದೆ.