ಒಂದೇ ಬಾರಿಗೆ ನಾಲ್ಕು ಹುಡುಗರೊಂದಿಗೆ ಮದುವೆಯಾಗಲು ಓಡಿ ಹೋದ ಯುವತಿ, ಕೊನೆಗೆ ನಾಲ್ವರಲ್ಲಿ ಹೇಗೆ ಆಯ್ಕೆ ಮಾಡಿದ್ದಾಳೆ ಗೊತ್ತೇ?

21

ನಮಸ್ಕಾರ ಸ್ನೇಹಿತರೇ ಉತ್ತರ ಪ್ರದೇಶದಲ್ಲಿ ನಡೆದಿರುವ ಒಂದು ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೇ ಅಂಬೇಡ್ಕರ್ ನಗರ ಮೂಲದ ಯುವತಿ ನಾಲ್ಕು ಯುವಕರೊಂದಿಗೆ ಮನೆಬಿಟ್ಟು ಓಡಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಆ ಯುವಕರು ಹುಡುಗಿಯನ್ನು ತಮ್ಮ ದೂರದ ಸಂಬಂಧಿ ಎನ್ನುವುದಾಗಿ ಮುಚ್ಚಿಟ್ಟಿದ್ದರು. ನಂತರ ತಿಳಿದುಬಂದಾಗ ಮನೆಯವರು ಯುವಕರ ಮೇಲೆ ಪೊಲೀಸ್ ದೂರು ನೀಡಿದ್ದು ನಂತರ ಪಂಚಾಯಿತಿಯಲ್ಲಿ ನಡೆದಿರುವ ಘಟನೆಯಲ್ಲಿ ಹುಡುಗಿ ಯಾರನ್ನಾದರೂ ಮದುವೆ ಮಾಡುವ ತೀರ್ಮಾನ ಮೂಡಿಬಂದಿತ್ತು.

ಹುಡುಗಿ ಕೂಡ ಈ ಸಂದರ್ಭದಲ್ಲಿ ಯಾರನ್ನು ಮದುವೆಯಾಗುವ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಗೊಂದಲದಲ್ಲಿ ಬಿದ್ದಂತಿತ್ತು. ಇನ್ನು ರಾಜಿ ಪಂಚಾಯತಿಯಲ್ಲಿ ಮುಖ್ಯಸ್ಥರು ಹುಡುಗರ ಬಳಿ ಕೂಡ ಯಾರು ಈ ಹುಡುಗಿಯನ್ನು ಮದುವೆ ಆಗುತ್ತೀರಿ ಎಂದು ಕೇಳಿದಾಗ ಯಾರು ಕೂಡ ಮದುವೆಯಾಗಲು ಒಪ್ಪಲು ತಯಾರಿರಲಿಲ್ಲ. ಈ ಕುರಿತಂತೆ ಸಾಕಷ್ಟು ಯೋಚಿಸಿದ ನಂತರ ಯಾರೂ ಮದುವೆ ಆಗಬೇಕು ಎನ್ನುವುದರ ಕುರಿತಂತೆ ಚೀಟಿ ಹಾಕುವ ಮೂಲಕ ನಿರ್ಧರಿಸಿದ ಕುರಿತಂತೆ ಯೋಚಿಸುತ್ತಾರೆ. ಇದಾದ ನಂತರ ಮರುದಿನವೇ ಪಂಚಾಯತಿಯ ಮುಖ್ಯಸ್ಥರು ಎಲ್ಲಾ ಹುಡುಗರ ಹೆಸರನ್ನು ಚೀಟಿಯಲ್ಲಿ ಬರೆದು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕುತ್ತಾರೆ.

ನಂತರ ಒಂದು ಚಿಕ್ಕ ಮಗುವಿನ ಕೈಯಲ್ಲಿ ಚೀಟಿಯನ್ನು ಎತ್ತಿಸುತ್ತಾರೆ. ಚೀಟಿಯಲ್ಲಿದ್ದ ಹುಡುಗನ ಜೊತೆಗೆ ಆ ಹುಡುಗಿಯ ಮದುವೆಯನ್ನು ಮೂರುದಿನಗಳ ಒಳಗಡೆ ಗಾಗಿ ಮಾಡಿ ಮುಗಿಸುತ್ತಾರೆ. ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸೆನ್ಸೇಷನಲ್ ಸುದ್ದಿಯಾಗಿದ್ದು ಎಲ್ಲರೂ ಈ ಸುದ್ದಿಯನ್ನು ನೋಡಿ ಹಾಸ್ಯಾಸ್ಪದವಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.