ಉಡುಪಿಯ ಮೂಲದ ಮಿಸ್ ಇಂಡಿಯಾ ವಿಜೇತೆ ಸಿನಿ ಶೆಟ್ಟಿ ರವರ ಕುರಿತು ನಿಮಗೆ ತಿಳಿಯದ ವಿಷಯಗಳೇನು ಗೊತ್ತೇ??

20

ನಮಸ್ಕಾರ ಸ್ನೇಹಿತರೆ ಎಲ್ಲಿ ನೋಡಿದರೂ ಕೂಡ ಈಗ ಉಡುಪಿ ಮೂಲದ ಸಿನಿ ಶೆಟ್ಟಿ ಅವರು ಈ ಬಾರಿಯ ಮಿಸ್ ಇಂಡಿಯಾ ಆಗಿರೋದು ಚರ್ಚೆ ನಡೆಯುತ್ತಿದೆ. ಎಲ್ಲಿ ನೋಡಿದರೂ ಕೂಡ ಕರಾವಳಿ ಮೂಲದ ಹುಡುಗಿಯ ವಿಚಾರ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಮುಂಬೈನಲ್ಲಿ ನಡೆದಿರುವ ಫೆಮಿನಾ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ರವರು ಈಗ ಎಲ್ಲಿ ನೋಡಿದರೂ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ.

ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೇಹಾ ದುಪಿಯಾ ಕೃತಿ ಸನೋನ್ ಮನೀಶ್ ಪಾಲ್ ಮಲೈಕ ಅರೋರ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷದ ವಿನ್ನರ್ ಆಗಿದ್ದ ಮಾನಸ ವಾರಣಾಸಿ ರವರು ಈ ಬಾರಿಯ ಮಿಸ್ ಇಂಡಿಯಾ ಕಿರೀಟವನ್ನು ಸಿನಿ ಶೆಟ್ಟಿಯವರಿಗೆ ತೊಡಿಸಿರುತ್ತಾರೆ. ಇನ್ನು ಉಡುಪಿ ಮೂಲದ 21 ವರ್ಷದ ಬೆಡಗಿ ಆಗಿರುವ ಸಿನಿ ಶೆಟ್ಟಿ ಅವರ ಕುರಿತಂತೆ ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೂ ಇದೆ. ಅವರ ಕುರಿತಂತೆ ನಿಮಗೆ ಗೊತ್ತಿರದ ಕೆಲವೊಂದು ಕುತೂಹಲಕರ ಮಾಹಿತಿಯನ್ನು ನಿಮಗೆ ಹೇಳುತ್ತೇವೆ. ಕರ್ನಾಟಕದಲ್ಲಿ ಶಿಕ್ಷಣವನ್ನು ನಡೆಸುತ್ತಿರುವವರು ಅಕೌಂಟಿಂಗ್ ಹಾಗೂ ಫೈನಾನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತವಾಗಿ ಇವರು ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ ಕೋರ್ಸನ್ನು ಮಾಡುತ್ತಿದ್ದಾರೆ. 4ನೇ ವಯಸ್ಸಿನಿಂದಲೂ ಕೂಡ ನೃತ್ಯಾಭ್ಯಾಸದ ಕುರಿತಂತೆ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಇವರು 14ನೇ ವಯಸ್ಸಿನಲ್ಲಿ ಇರಬೇಕಾದರೆ ಭರತನಾಟ್ಯಂ ಹಾಗೂ ಇನ್ನಿತರ ವಿಭಿನ್ನ ನೃತ್ಯ ಪ್ರಕಾರಗಳ ಪ್ರವೀಣೆ ಆಗಿದ್ದರು. ಇನ್ನು ಸಿನಿ ಶೆಟ್ಟಿ ಅವರ ಶಿಕ್ಷಣ ಹಾಗೂ ಶಿಕ್ಷಣದ ಚಟುವಟಿಕೆಗಳಿಗೆ ಪ್ರತಿಯೊಂದು ವಿಧದಲ್ಲಿಯೂ ಕೂಡ ಕುಟುಂಬ ಬೆಂಬಲಾತ್ಮಕವಾಗಿ ನಿಂತಿದೆ ಎಂದರೆ ತಪ್ಪಾಗಲಾರದು.