ಪೃಥ್ವಿ ಷಾ ರವರ ಇತ್ತೀಚಿಗೆ ಖರೀದಿಸಿದ ಹೊಸ ಮನೆಯ ಬೆಲೆ ಎಷ್ಟು ಗೊತ್ತೇ? 22 ವರ್ಷದ ಆಟಗಾರ ಖರೀದಿಸಿದ್ದು ಎಷ್ಟು ಬೆಲೆಯ ಮನೆ ಗೊತ್ತೇ??

20

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಇದುವರೆಗೂ ಹಲವಾರು ಸ್ಟಾರ್ ಆಟಗಾರರನ್ನು ಅಂಡರ್ 19 ಹಾಗೂ ಐಪಿಎಲ್ ಮೂಲಕ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವಲ್ಲಿ ಐಪಿಎಲ್ ಸಾಕಷ್ಟು ಯಶಸ್ಸನ್ನು ಕಂಡುಕೊಂಡಿದೆ ಎಂದರೆ ನಿಜಕ್ಕೂ ಕೂಡ ತಪ್ಪಾಗಲಾರದು. ಅಂತಹ ಪ್ರತಿಭೆಗಳಲ್ಲಿ ಪೃಥ್ವಿ ಶಾ ಕೂಡ ಒಬ್ಬರು. ಅಂಡರ್ 19 ತಂಡದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ಮಿಂಚುವ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಅದರಲ್ಲಿ ವಿಶೇಷವಾಗಿ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿಯೇ ಕ್ರಿಕೆಟ್ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದಿರುವ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ.

2018 ರಲ್ಲಿ ಮೊಹಮ್ಮದ್ ಕೈಫ್ ವಿರಾಟ್ ಕೊಹ್ಲಿ ಉನ್ಮುಕ್ತ್ ಚಾಂದ್ ನಂತರ ಅಂಡರ್-19 ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಗೆದ್ದ ನಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುವವರು ಬರೋಬ್ಬರಿ 7.50 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಅಂಡರ್-19 ತಂಡದಲ್ಲಿ ಮಿಂಚಿದ ಕೂಡಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಅವರಿಗೆ ಸ್ಥಾನ ದೊರೆಯುತ್ತದೆ.

ಆರಂಭಿಕ ದಿನಗಳಲ್ಲಿ ಕೊಂಚಮಟ್ಟಿಗೆ ವಿಫಲ ಪ್ರದರ್ಶನವನ್ನು ನೀಡಿದರು ಕೂಡ ನಂತರದ ದಿನಗಳಲ್ಲಿ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆಯಲು ಯಶಸ್ವಿಯಾಗುತ್ತಾರೆ. ಇನ್ನು 22 ವರ್ಷದವರಾಗಿರುವ ಪೃಥ್ವಿ ಶಾ ಇತ್ತೀಚೆಗಷ್ಟೇ ಮುಂಬೈ ನಲ್ಲಿ ಒಂದು ಮನೆಯನ್ನು ಖರೀದಿಸಿದ್ದು ಅದರ ಬೆಲೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೆ ಮುಂಬೈನ ಪ್ರೀಮಿಯಂ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ ಅನ್ನು ಪೃಥ್ವಿ ಶಾ ಖರೀದಿಸಿದ್ದಾರೆ. ಇದರ ವೆಚ್ಚ ಬರೋಬ್ಬರಿ ಹತ್ತು ಕೋಟಿ ರೂಪಾಯಿ ಆಗಿದ್ದು 2209 ಸ್ಕ್ವೇರ್ ಫೀಟ್ ವಿಸ್ತಾರದಲ್ಲಿ ಅದ್ದೂರಿ ಅಪಾರ್ಟ್ಮೆಂಟ್ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದುಬಾರಿ ಮೊತ್ತದ ಅಪಾರ್ಟ್ಮೆಂಟ್ ಅನ್ನುವ ಖರೀದಿಸಿರುವುದು ನಿಜಕ್ಕೂ ಕೂಡ ಸಾಧನೆ ಅಲ್ಲದೇ ಇನ್ನೇನು ಹೇಳಿ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.