ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನರೇಶ್ ಪತ್ನಿ ರಮ್ಯಾ ಸಂಬಂಧಿಕರಾ?? ಅದು ಹೇಗೆ ಗೊತ್ತೇ??

24

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಒಂದೇ ಒಂದು ವಿಚಾರ ಏನೆಂದರೆ ಅದು ತೆಲುಗು ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ಮತ್ತು ಕನ್ನಡದ ನಟಿಯಾಗಿರುವ ಪವಿತ್ರ ಲೋಕೇಶ್ ರವರ ಟ್ರೈಯಾಂಗುಲರ್ ವಿಚಾರ. ಮೊದಲಿಗೆ ನರೇಶ್ ರವರ ಮೂರನೇ ಪತ್ನಿಯಾಗಿರುವ ರಮ್ಯಾ ರಘುಪತಿ ಅವರು ನರೇಶ ರವರ ವಿರುದ್ಧ ಸಾಕಷ್ಟು ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ನಂತರ ನಿನ್ನೆಯಷ್ಟೇ ಮೈಸೂರಿಗೆ ಹೋಗಿ ಹೋಟೆಲ್ ಎದುರು ರಂಪಾರಾಮಾಯಣ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

ಇದಾದ ನಂತರ ನರೇಶ್ ರವರು ಕೂಡ ರಮ್ಯಾ ವಿರುದ್ಧ ನನ್ನ ಆಸ್ತಿಯನ್ನು ತೋರಿಸಿ ಅದು ತನ್ನದೇ ಆಸ್ತಿ ಎಂದು ಹೇಳಿ ಸಾಕಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರಂತೆ. ಇಷ್ಟು ಮಾತ್ರವಲ್ಲದೆ ಹಲವಾರು ಕಡೆಗಳಲ್ಲಿ ಸಾಲವನ್ನು ಕೂಡ ನನ್ನ ಹೆಸರಿನಲ್ಲಿ ಮಾಡಿದ್ದಾಳೆ ಎಂಬುದಾಗಿ ಹೇಳಿರುವುದು ಕೇಳಿಬಂದಿದೆ. ಎಲ್ಲಾ ಆರೋಪ-ಪ್ರತ್ಯಾರೋಪಗಳು ಎಷ್ಟರಮಟ್ಟಿಗೆ ನಿಜ ಎನ್ನುವುದು ಇನ್ನೂ ಕೂಡ ತಿಳಿದುಬಂದಿಲ್ಲ.

ರಮ್ಯಾ ರಘುಪತಿ ರವರು ಮಾಜಿ ಸಚಿವರು ರಘುವೀರ ರವರ ಸಹೋದರನ ಮಗಳು ಆಗಿದ್ದಾರೆ. ಇಷ್ಟು ಮಾತ್ರವಲ್ಲದೆ ಆಕೆ ಪ್ರತಿಷ್ಠಿತ ಕುಟುಂಬದಿಂದ ಬಂದಿದ್ದು ಕನ್ನಡ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಯ ಸಹೋದರಿ ಕೂಡ ಆಗಿದ್ದಾರಂತೆ. ಹೌದು ಗೆಳೆಯರು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಕಂಪನ್ನು ಹರಡುವಂತೆ ಮಾಡಿದ ಪ್ರಶಾಂತ್ ನೀಲ್ ರವರ ಸಹೋದರಿ ಎಂಬುದಾಗಿ ಕೂಡ ತಿಳಿದುಬಂದಿದೆ. ಸಂಬಂಧದಲ್ಲಿ ಪ್ರಶಾಂತ್ ನೀಲ್ ರಮ್ಯಾರವರಿಗೆ ಅಣ್ಣ ಆಗಬೇಕು ಎಂಬುದಾಗಿ ತಿಳಿದುಬಂದಿದೆ ಇದರ ಕುರಿತಂತೆ ಅಧಿಕೃತ ವಿಚಾರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ನರೇಶ್ ಹಾಗೂ ರಮ್ಯಾ ವಿಚಾರದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.