ಪೋಷಕರೇ ಹಣದ ಮಹತ್ವ ನಿಮಗೆ ತಿಳಿದಿದೆ, ಆದರೆ ನಿಮ್ಮ ಮಕ್ಕಳಿಗೆ ತಿಳಿದಿದೆಯೇ?? ಯಾವಾಗ ತಿಳಿಸಬೇಕು ಹಾಗೂ ಹೇಗೆ ಗೊತ್ತೇ?

20

ನಮಸ್ಕಾರ ಸ್ನೇಹಿತರೆ ಮಕ್ಕಳು ಚಿಕ್ಕವಯಸ್ಸಿನಿಂದಲೂ ಕೂಡ ತಂದೆತಾಯಿಯರ ಮುದ್ದು ಪೋಷಣೆಯಲ್ಲಿ ಬೆಳೆಯುತ್ತಾರೆ. ಆ ಸಂದರ್ಭದಲ್ಲಿ ಪ್ರತಿಯೊಬ್ಬ ಪೋಷಕರು ಕೂಡ ಮಕ್ಕಳಿಗೆ ಯಾವುದೇ ಕಷ್ಟ ಅರಿವು ಆಗಬಾರದು ಎನ್ನುವ ಕಾರಣಕ್ಕಾಗಿ ಅವರನ್ನು ಸಕಲ ಸುಖ ಸಂತೋಷಗಳಿಂದ ಸಾಕುತ್ತಾರೆ. ಆದರೆ ನಂತರ ದಿನಗಳಲ್ಲಿ ಅವರು ಬೆಳೆದು ದೊಡ್ಡವರಾದ ಮೇಲೆ ಒಮ್ಮೆಲೆ ಹಣದ ಕಷ್ಟ ಅರಿವಾದಾಗ ಅದನ್ನು ಎದುರಿಸುವ ಶಕ್ತಿ ಅವರಲ್ಲಿ ಇರುವುದಿಲ್ಲ.

ಹೀಗಾಗಿ ಚಿಕ್ಕವರಿಂದ ಬೇಕಾದರೆ ಅವರಿಗೆ ಹಣದ ಮಹತ್ವದ ಅರಿವನ್ನು ಮೂಡಿಸಲು ಪೋಷಕರು ಪ್ರಯತ್ನಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಅವರು ಆರ್ಥಿಕಸ್ಥಿತಿ ದುರ್ಬಲವಾಗಿದ್ದರೂ ಕೂಡ ಅವರನ್ನು ಎದುರಿಸುವ ಶಕ್ತಿಯನ್ನು ಪಡೆದಿರುತ್ತಾರೆ. ಹೀಗಾಗಿ ಮಕ್ಕಳಿಗೆ ಹಣದ ಮೌಲ್ಯವನ್ನು ಪೋಷಕರು ಯಾವ ರೀತಿಯಲ್ಲಿ ಹೇಗೆ ತಿಳಿಸಬೇಕು ಎನ್ನುವುದರ ಕುರಿತಂತೆ ನಿಮಗೆ ಹೇಳುತ್ತೇನೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಮೊದಲಿಗೆ ಮಕ್ಕಳಿಗೆ ಇಂದು ಅವರು ಇಷ್ಟೊಂದು ಸುಖವಾಗಿ ಬೆಳೆಯುತ್ತಿದ್ದಾರೆ ಎಂದರೆ ಪೋಷಕರಾಗಿ ಅವರಿಗೋಸ್ಕರ ಯಾವೆಲ್ಲ ಕಷ್ಟಗಳನ್ನು ಕೊಟ್ಟಿದ್ದೀರಿ ಹಾಗೂ ಏನೆಲ್ಲ ತ್ಯಾಗ ಮಾಡಿ ಅವರ ಸುಖ ಹಾಗೂ ಶಿಕ್ಷಣಕ್ಕಾಗಿ ನೀವು ತ್ಯಾಗವನ್ನು ಮಾಡಿದ್ದೀರಿ ಅನ್ನುವುದರ ಸಂಪೂರ್ಣ ಅರಿವನ್ನು ಮಕ್ಕಳಿಗೆ ಮೂಡಿಸಿದರೆ ಅವರು ಖರ್ಚು ಮಾಡುವ ಹಾಗೂ ಮಾಡಬೇಕೆಂದಿರುವ ಖರ್ಚನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಹಣದ ಮೌಲ್ಯದ ಅರಿವಾಗುತ್ತದೆ.

ಎರಡನೇದಾಗಿ ಮಕ್ಕಳ ಹೆಸರಿನಲ್ಲಿ ಒಂದು ಖಾತೆಯನ್ನು ಮಾಡಿ ಅದರಲ್ಲಿರುವ ಹಣವನ್ನು ಬಳಸಿ ಅವರ ಶಿಕ್ಷಣ ಹಾಗೂ ಇನ್ನಿತರ ಖರ್ಚುಗಳಿಗಾಗಿ ಉಪಯೋಗಿಸಿ ಇದಕ್ಕಾಗಿ ಒಂದು ಡೈರಿಯನ್ನು ಕೂಡ ಮಾಡಿಡಿ. ಇದರಿಂದಾಗಿ ಮಕ್ಕಳಿಗೆ ತಾವು ಎಷ್ಟು ಖರ್ಚನ್ನು ಮಾಡಿದ್ದೇವೆ ಎಂಬ ಅರಿವು ಮೂಡಿ ಬರುತ್ತದೆ.

ಕೊನೆದಾಗಿ ಮಕ್ಕಳಿಗಾಗಿ ಸಾಲಸೋಲ ಮಾಡಿ ಪೋಷಕರು ಖರ್ಚುಮಾಡಿ ಅವರ ಶಿಕ್ಷಣಕ್ಕಾಗಿ ಹಾಗೂ ಒಳ್ಳೆಯ ಭವಿಷ್ಯಕ್ಕಾಗಿ ಹೋರಾಡುತ್ತಾರೆ. ಒಂದು ವೇಳೆ ಸಾಲ ಕೊಟ್ಟವರು ಮನೆಯ ಬಳಿ ಬಂದಾಗ ಮಕ್ಕಳಿಗೆ ತಿಳಿಯದಂತೆ ಮಾಡುತ್ತೇವೆ ಆದರೆ ಹಾಗೆ ಮಾಡಬಾರದು. ಮಕ್ಕಳಿಗೂ ಕೂಡ ತಂದೆ ಮಹತ್ವ ತಾಯಿ ಮಾಡಿರುವ ಸಾಲದ ಕುರಿತಂತೆ ತಿಳಿದಾಗ ಅದನ್ನು ತೀರಿಸುವ ಹಾಗೂ ಉತ್ತಮವಾಗಿ ದುಡಿಯುವ ಛಲ ಮೂಡಿಬರುತ್ತದೆ. ಇದರಿಂದ ಅವರಿಗೆ ಹಣದ ಮೌಲ್ಯದ ಅರ್ಥವು ಕೂಡ ಆಗುತ್ತದೆ. ಈ ನಿಯಮಗಳನ್ನು ಪ್ರತಿಯೊಬ್ಬ ಪೋಷಕರು ಕೂಡ ಪಾಲಿಸಬೇಕು.