ಪವಿತ್ರ ಲೋಕೇಶ್ ಹಾಗೂ ನರೇಶ್ ರವರ ನಡುವೆ ಸಿಗುತ್ತಿದೆ ಸಾಕಷ್ಟು ಟ್ವಿಸ್ಟ್, ಕ್ಷಣಕ್ಕೊಂದು ಅಪ್ಡೇಟ್. ಅಸಲಿಗೆ ಈಗ ಏನಾಗುತ್ತಿದೆ ಗೊತ್ತೇ?

27

ನಮಸ್ಕಾರ ಸ್ನೇಹಿತರೆ ಸಾಕಷ್ಟು ದಿನಗಳಿಂದ ನರೇಶ್ ಹಾಗೂ ಪವಿತ್ರ ಲೋಕೇಶ್ ರವರ ನಡುವಿನ ವಿಚಾರದ ಕುರಿತಂತೆ ದಿನದಿಂದ ದಿನಕ್ಕೆ ಒಂದೊಂದು ವಿಚಾರಗಳು ಈಗ ಹೊರಬರುತ್ತಿದೆ ಹಾಗೂ ನರೇಶ್ ರವರ ವಿರುದ್ಧ ಇತ್ತೀಚಿಗಷ್ಟೇ ಅವರ ಮೂರನೇ ಪತ್ನಿ ಆಗಿರುವ ರಮ್ಯಾ ರಘುಪತಿ ಅವರು ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಅದಕ್ಕೆ ಉತ್ತರವಾಗಿ ಬೆಂಗಳೂರಿಗೆ ಬಂದು ಪ್ರೆಸ್ ಮೀಟ್ ಮಾಡಿ ನಟ ನರೇಶ್ ರವರು ಕೂಡ ಪ್ರತ್ಯುತ್ತರವನ್ನು ನೀಡಿದ್ದರು. ಈಗ ನಟಿ ಪವಿತ್ರಾ ಲೋಕೇಶ್ ಅವರು ಕೂಡ ಮಾಧ್ಯಮದ ಮುಂದೆ ಬಂದು ಉತ್ತರವನ್ನು ನೀಡುವ ಕೆಲಸ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೆ ಪವಿತ್ರಾಲೋಕೇಶ್ ರವರು ಈ ಆರೋಪ-ಪ್ರತ್ಯಾರೋಪ ಗಳಿಗೆ ಪ್ರತಿಕ್ರಿಯಿಸುತ್ತಾ ರಮ್ಯಾ ಅವರಿಗೆ ಪ್ರಚಾರದ ಹುಚ್ಚಿದೆ ಅದಕ್ಕಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ. ಆ ತರಹ ಇದ್ದಿದ್ದರೆ ನರೇಶ್ ರವರು ಇದುವರೆಗೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ನಾನು ಕೂಡ ಹಲವಾರು ಸಿನಿಮಾಗಳಲ್ಲಿ ಹಲವಾರು ಕಲಾವಿದರ ಜೊತೆಗೆ ನಟಿಸಿದ್ದೇನೆ. ಹಾಗಂತ ನಾವು ನಟಿಸಿರುವ ಎಲ್ಲಾ ಕಲಾವಿದರೊಂದಿಗೆ ನಾವು ಸಂಬಂಧವನ್ನು ಹೊಂದಿದ್ದೇವೆ ಎಂದು ಹೇಳುವುದಕ್ಕೆ ಆಗುತ್ತದೆಯೇ ಎಂಬುದಾಗಿ ಹೇಳಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ನರೇಶ್ ರವರೊಂದಿಗೆ ನಟಿಸುವ ಸಂದರ್ಭದಲ್ಲಿ ನನಗೆ ಅವರು ಒಬ್ಬ ಸ್ಟಾರ್ ಮಗ ಎನ್ನುವುದು ಕೂಡ ನನಗೆ ತಿಳಿದಿಲ್ಲ ಎಂಬುದಾಗಿ ಹೇಳಿದ್ದಾರೆ.

ಇನ್ನು ಸುಚೇಂದ್ರಪ್ರಸಾದ್ ರವರ ಜೊತೆಗೆ ನನ್ನ ಮದುವೆ ಆಗಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ ಎಂಬುದು ತಿಳಿದು ಬರುತ್ತದೆ. ನಾವಿಬ್ಬರೂ ಕೇವಲ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಸ್ನೇಹಿತರಾಗಿದ್ದೇವೆ ಹೊರತು ಬೇರೆನಿಲ್ಲ ಎಂಬುದಾಗಿ ಹೇಳಿದ್ದಾರೆ. ಕೊನೆಗೂ ಕೂಡ ಪವಿತ್ರ ಲೋಕೇಶ್ ರವರ ಖುದ್ದಾಗಿ ಬಂದು ಹೀಗೆ ಹೇಳಿರುವುದು ಈ ಪ್ರಕರಣಕ್ಕೆ ಒಂದು ಪ್ರಮುಖ ತಿರುವನ್ನು ನೀಡುವ ಸಾಧ್ಯತೆಯಿದೆ ಎಂಬುದಾಗಿ ಎಲ್ಲರೂ ಲೆಕ್ಕಾಚಾರ ಹಾಕಿದ್ದಾರೆ.