ಪದೇ ಪದೇ ಅಪಾಯದಲ್ಲಿ ಸಿಲುಕುತ್ತಿರುವ ಭೂಪತಿ ಹಾಗೂ ನಕ್ಷತ್ರ: ಕಿಡ್ನಾಪ್ ಹಿಂದೆ ಶ್ವೇತಾ, ಕೈವಾಡ ಇಲ್ಲ ಹಾಗಿದ್ದರೆ ಕಾಣದ ಕೈ ಯಾರದ್ದು ಗೊತ್ತೇ?

16

ನಮಸ್ಕಾರ ಸ್ನೇಹಿತರ ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ಸಾಕಷ್ಟು ವಿಚಾರಗಳಿಂದ ಪ್ರೇಕ್ಷಕರ ನೆಚ್ಚಿನ ಧಾರವಾಹಿಯಾಗಿ ಕಾಣಿಸಿಕೊಂಡಿದೆ. ಅದರಲ್ಲೂ ಭೂಪತಿ ಹಾಗೂ ನಕ್ಷತ್ರ ನಡುವಿನ ಕ್ಯೂಟ್ ಜಗಳವನ್ನು ನೋಡುವ ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಚಂದ್ರಶೇಖರ್ ಮಾಡಿರುವ ಪ್ಲಾನ್ ನಿಂದಾಗಿ ಶ್ವೇತಾಳನ್ನು ಮದುವೆ ಆಗಬೇಕಾಗಿದ್ದ ಭೂಪತಿ ಈಗ ನಕ್ಷತ್ರಳನ್ನು ಮದುವೆ ಆಗಿದ್ದಾನೆ. ಇದಕ್ಕಾಗಿಯೇ ನಕ್ಷತ್ರಗಳನ್ನು ಕಂಡರೆ ಶಕುಂತಲಾದೇವಿ ಹಾಗೂ ಭೂಪತಿ ಇಬ್ಬರಿಗೂ ಕೂಡ ಆಗುವುದಿಲ್ಲ.

ಹೇಗಾದರೂ ಮಾಡಿ ಶ್ವೇತಾಳನ್ನು ತನ್ನ ಸೊಸೆಯನ್ನಾಗಿ ಮಾಡಬೇಕು ಎನ್ನುವುದಾಗಿ ಭೂಪತಿಯ ತಾಯಿ ಶಕುಂತಲಾದೇವಿ ಆಸೆ ಪಡುತ್ತಿದ್ದಾಳೆ. ಆದರೆ ಶ್ವೇತಾಳ ನಿಜವಾದ ಕೆಟ್ಟ ಗುಣದ ಕುರಿತಂತೆ ಇನ್ನೂ ಕೂಡ ಆಕೆಗೆ ತಿಳಿದಿಲ್ಲ. ಶ್ವೇತಾ ಕೂಡ ಭೂಪತಿಯ ಎರಡನೇ ಹೆಂಡತಿಯಾಗಿ ಮದುವೆಯಾಗುವುದಕ್ಕೆ ಸಾಕಷ್ಟು ಪ್ಲಾನನ್ನು ರಚಿಸುತ್ತಿದ್ದಾಳೆ. ಇತ್ತ ಶಕುಂತಲದೇವಿ ಕೂಡ ಅದೇ ವಿಚಾರದಲ್ಲಿ ತೊಡಗಿದ್ದಾಳೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರವಾಹಿಗೆ ಹೊಸ ಟ್ವಿಸ್ಟ್ ಬಂದಿದ್ದು ಭೂಪತಿ ಹಾಗೂ ನಕ್ಷತ್ರ ಇಬ್ಬರನ್ನು ಕೂಡ ಆಗಂತುಕ ಕಿಡ್ನಾಪ್ ಮಾಡಿ ಹಾಗೆ ತಂದು ಬಿಟ್ಟು ಬಿಡುತ್ತಿದ್ದಾನೆ.

ಈಗಾಗಲೇ ಮನೋತಜ್ಞರ ಮೊರೆಯನ್ನು ಹೋಗಿರುವ ಭೂಪತಿ ಆತನಿಗಿರುವ ಮನೋ ಸಮಸ್ಯೆ ಕಾರಣದಿಂದಾಗಿ ಆತನಿಗೆ ಅರಿವಿಲ್ಲದಂತೆ ಆತನೇ ನಕ್ಷತ್ರಳನ್ನು ಕಿಡ್ನಾಪ್ ಮಾಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ಪ್ರಭಾವ ಹಾಗೂ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಾಗಿದೆ. ಎಲ್ಲರೂ ಇದರ ಹಿಂದೆ ಶ್ವೇತಾ ಕೈವಾಡ ಇರಬಹುದು ಎಂಬುದಾಗಿ ಈ ಹಿಂದೆ ಯೋಚಿಸಿದ್ದರು ಎಂದು ಹೇಳಬಹುದಾಗಿದೆ. ಈ ಧಾರವಾಹಿಯಲ್ಲಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ