ವಿರಾಟ್ ಶತಕ ಗಳಿಸದೆ ಇದ್ದರೂ ಪರವಾಗಿಲ್ಲ, ಆದರೆ ಅದೊಂದು ಕೆಲಸ ಮಾಡಿಕೊಡಲಿ ಎಂದ ರಾಹುಲ್, ಕೊಹ್ಲಿ ಗೆ ಹೊಸ ಜವಾಬ್ದಾರಿ. ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ 2019 ರ ನಂತರ ವಿರಾಟ್ ಕೊಹ್ಲಿ ರವರು ಇದುವರೆಗೂ ಯಾವುದೇ ಕ್ರಿಕೆಟ್ ಫಾರ್ಮೆಟ್ ನಲ್ಲಿ ಶತಕವನ್ನು ಬಾರಿಸಿಲ್ಲ. ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ದಾಖಲೆಯನ್ನು ವಿರಾಟ್ ಕೊಹ್ಲಿ ರವರು ಖಂಡಿತವಾಗಿ ಮುರಿಯುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಸಂಪೂರ್ಣವಾಗಿ ಅಧೋಗತಿಗೆ ಇಳಿದಿದೆ ಎಂದರೆ ತಪ್ಪಾಗಲಾರದು. ಐಪಿಎಲ್ ನಲ್ಲಿ ಆದರೂ ಕೂಡ ಪ್ರದರ್ಶನವನ್ನು ನೀಡಿ ಮತ್ತೆ ತಮ್ಮ ಫಾರ್ಮ್ ಗೆ ವಾಪಾಸು ಮರಳಿ ಬರುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು.
ಆದರೆ ಐಪಿಎಲ್ ನಲ್ಲಿ ಕೇವಲ ಕಳಪೆ ಫಾರ್ಮ್ ಮಾತ್ರವಲ್ಲದೇ ಮೂರು ಬಾರಿ ಶೂನ್ಯ ರನ್ನಿಗೆ ಕೂಡ ಔಟಾಗಿದ್ದರು. ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಬಾರಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ವಿರಾಟ್ ಕೊಹ್ಲಿ ಅವರು ಯಾವ ರೀತಿ ಪ್ರದರ್ಶನ ಮಾಡಬಹುದು ಎಂಬುದಾಗಿ ಚಿಂತೆ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ವಿರಾಟ್ ಕೊಹ್ಲಿ ರವರ ಬ್ಯಾಗಿನಿಂದ ಮತ್ತೊಮ್ಮೆ ಯಾವಾಗ ಶತಕವನ್ನು ನಾವು ವೀಕ್ಷಿಸಬಹುದು ಎಂಬ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ವಿರಾಟ್ ಕೊಹ್ಲಿ ರವರಿಂದ ನಿರೀಕ್ಷೆ ಇಲ್ಲ ಎಂಬುದಾಗಿ ಹೇಳಿದ್ದಾರೆ.

ಹೌದು ಗೆಳೆಯರೇ ರಾಹುಲ್ ದ್ರಾವಿಡ್ ಅವರ ಪ್ರಕಾರ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಹೆಚ್ಚು ಪರಿಶ್ರಮವನ್ನು ಪಡುತ್ತಿರುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಅವರು ಶತಕ ಗಳಿಸಿದ ಇದ್ದರೂ ಪರವಾಗಿಲ್ಲ ತಂಡದ ಪರವಾಗಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡರೆ ಸಾಕು ಎನ್ನುವುದಾಗಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡುವ ಸಂಪೂರ್ಣವಾದ ಭರವಸೆ ನಮಗಿದೆ ಎಂಬುದಾಗಿ ಕೂಡ ರಾಹುಲ್ ದ್ರಾವಿಡ್ ರವರು ವಿರಾಟ್ ಕೊಹ್ಲಿ ರವರ ಗುಣಗಾನವನ್ನು ಮಾಡಿದ್ದಾರೆ. ಈಗಾಗಲೆ ನಾಯಕತ್ವ ಜವಾಬ್ದಾರಿಯಿಂದ ಮುಕ್ತರಾಗಿರುವ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅದರಲ್ಲೂ ಕೂಡ ಜುಲೈ 1ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಸಂಪೂರ್ಣ ಕ್ಷಮತೆಯನ್ನು ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುವ ಮೂಲಕ ಸಾಬೀತುಪಡಿಸಲಿ ಎಂಬುದೇ ಎಲ್ಲರ ಆಶಯ.