ಬಿಗ್ ನ್ಯೂಸ್: ಪವಿತ್ರ ಹಾಗೂ ನರೇಶ್ ವಿಚಾರದಲ್ಲಿ ಮತ್ತೊಂದು ತಿರುವು, ಎಲ್ಲಾ ಸತ್ಯ ಒಪ್ಪಿಕೊಂಡು ನರೇಶ್ ಹೇಳಿದ್ದೇನು ಗೊತ್ತೇ?

39

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೇ ಹೆಂಡತಿಯ ಮಗ ಆಗಿರುವ ನರೇಶ್ ರವರು ಪವಿತ್ರ ಲೋಕೇಶ್ ರವರನ್ನು ನಾಲ್ಕನೆಯ ಮದುವೆಯಾಗಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ನ್ಯೂಸ್ ಚಾನೆಲ್ಗಳಲ್ಲಿ ಸಾಕಷ್ಟು ದಿನಗಳಿಂದ ಸುದ್ದಿ ಓಡಾಡುತ್ತಿದೆ. ನರೇಶ್ ರವರ ಮೂರನೇ ಹೆಂಡತಿ ಆಗಿರುವ ರಮ್ಯಾ ರಘುಪತಿ ರವರು ನರೇಶ್ ರವರ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದ ಆರೋಪಗಳನ್ನು ಕೂಡ ಮಾಡಿದ್ದರು. ನರೇಶ್ ಒಬ್ಬ ಹೆಣ್ಣುಬಾಕ ಎಂಬರ್ಥದಲ್ಲಿ ಕೂಡ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿವಾಹಿನಿಗಳಲ್ಲಿ ಸದ್ದು ಮಾಡಿತ್ತು.

ಇದಕ್ಕೆ ಉತ್ತರ ನೀಡುವ ಸಲುವಾಗಿ ಸ್ವತಹ ನರೇಶ ರವರ ಬೆಂಗಳೂರಿಗೆ ಬಂದು ಪ್ರೆಸ್ಮೀಟ್ ಅರೇಂಜ್ ಮಾಡಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಇದರಲ್ಲಿ ನರೇಶ್ ರವರು ಮಾತನಾಡುತ್ತಾ ರಮ್ಯ ಹೇಳುತ್ತಿರುವುದು ಶುದ್ಧ ಸುಳ್ಳು ನಾವಿಬ್ಬರೂ ಏಳು ವರ್ಷಗಳಿಂದ ಜೊತೆಯಾಗಿ ಇಲ್ಲ ನನಗೆ ಊಟ ಹಾಕುವ ಕೆಲಸವನ್ನು ಕೂಡ ಆಕೆ ಮಾಡಿಲ್ಲ ಎಂಬುದಾಗಿ ಅಲ್ಲಗೆಳೆದಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಹೆಂಡತಿ ಆಗಿರುವ ರಮ್ಯಾ ವಿರುದ್ಧವೇ ಹಲವಾರು ಆರೋಪಗಳನ್ನು ಕೂಡ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ಸಂಬಂಧವನ್ನು ಹೊಂದಿದ್ದಾರೆ ಹಾಗೂ ಸಾಕಷ್ಟು ಸಾಲವನ್ನು ಕೂಡ ಹೊಂದಿದ್ದಾರೆ ಎಂಬುದಾಗಿ ಕೂಡ ನರೇಶ್ ತಮ್ಮ ಹೆಂಡತಿಯ ಕುರಿತಂತೆ ಆರೋಪ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ತಮ್ಮ ಹಾಗೂ ಪವಿತ್ರ ಲೋಕೇಶ್ ರವರ ಸಂಬಂಧದ ಕುರಿತಂತೆ ಮಾತನಾಡುತ್ತಾ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಸುದ್ದಿಗೆ ಸ್ವತಹ ಅವರೇ ಅಧಿಕೃತವಾಗಿ ತೆರೆ ಎಳೆದಿದ್ದಾರೆ ಎಂದು ಹೇಳಬಹುದಾಗಿದೆ. ಈ ಪ್ರಕರಣದಲ್ಲಿ ಇತ್ತೀಚಿನ ದಿನಗಳಲ್ಲಿ ನೀವು ಕೇಳಿಬರುತ್ತಿರುವ ವಿಚಾರಗಳನ್ನು ಕೂಲಂಕುಷವಾಗಿ ನೋಡಿದಾಗ ನಿಮಗೆ ಮೂಡಿಬರುವ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.