ಜಿಯೋ ಗೆ ಮತ್ತೊಮ್ಮೆ ಠಕ್ಕರ್ ಕೊಟ್ಟ ಏರ್ಟೆಲ್: ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ, 75 ಜಿಬಿ ಡೇಟಾ ಜೊತೆ ಅಮೆಜಾನ್, ಹಾಟ್ ಸ್ಟಾರ್ ಉಚಿತ.
ನಮಸ್ಕಾರ ಸ್ನೇಹಿತರ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯಕ್ಕೆ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಈಗ ಮೊದಲ ಸ್ಥಾನದಲ್ಲಿ ಮಿಂಚುತ್ತಿರುವ ಜಿಯೋ ಸಂಸ್ಥೆಗೆ ಏರ್ಟೆಲ್ ಟಕ್ಕರ್ ಕಾಂಪಿಟೇಷನ್ ನೀಡುವಂತಹ ಯೋಜನೆಯೊಂದನ್ನು ಬಿಡುಗಡೆಮಾಡಿದೆ. ಹಾಗಿದ್ದರೆ ಆ ಯೋಜನೆ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಏರ್ಟೆಲ್ ಗ್ರಾಹಕರು ಫ್ಯಾಮಿಲಿ ಯೋಜನೆ ಅಡಿ ಎರಡನೇ ಸಿಂಗ್ ಖರೀದಿಸಿದರೆ ಅತ್ಯುತ್ತಮ ಲಾಭವಿರುವ ಯೋಜನೆ ನಿಮ್ಮದಾಗಬಹುದಾಗಿದೆ.
ಹೌದು ಗೆಳೆಯರೆ 499 ರೂಪಾಯಿಗಳ ಫ್ಯಾಮಿಲಿ ಪ್ಯಾಕ್ ರಿಚಾರ್ಜ್ ಮಾಡಿಕೊಂಡರೆ ಅನಿಮಿಯತ ಸ್ಥಳೀಯ ಕರೆಗಳು ತಿಂಗಳಿಗೆ 75 ಜಿಬಿ ಉಚಿತ ಇಂಟರ್ನೆಟ್ ಸೇವೆ ಮಾತ್ರವಲ್ಲದೆ 200gb ಇಂಟರ್ನೆಟ್ ಡೇಟಾ ವರೆಗೆ ರೋಲ್ ಓವರ್ ಸಿಗಲಿದೆ. ಇನ್ನು ಪ್ರತಿದಿನ 100 ಉಚಿತ ಮೆಸೇಜುಗಳನ್ನು ಮಾಡುವ ಸೌಲಭ್ಯವು ಕೂಡ ದೊರಕಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮನರಂಜನೆಗಾಗಿ ಡಿಜಿಟಲ್ ಫಾರ್ಮ್ ಗಳನ್ನು ಇಷ್ಟಪಡುತ್ತಾರೆ ಹಾಗೂ ಅವುಗಳನ್ನು ಬಳಸುತ್ತಾರೆ. ಈ ಯೋಜನೆ ಬಳಸುತ್ತಿರುವವರಿಗೆ ಮತ್ತೊಂದು ಉಪಯೋಗವು ಕೂಡ ಇದೆ.

ಅಮೆಜಾನ್ ಪ್ರೈಮ್ ನೆಟ್ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ಗಳ ಆರು ತಿಂಗಳ ಉಚಿತ ಚಂದಾದಾರಿಕೆ ನಿಮಗೆ ದೊರೆಯಲಿದೆ. ಒಂದು ವೇಳೆ ಮನೆಯಲ್ಲಿ ಟಿವಿ ಗಾಗಿ ಜಗಳ ನಡೆಯುತ್ತಿದ್ದರೆ ಮೊಬೈಲ್ ಇರುವವರು ಈ ಜಗಳದಿಂದ ಹೊರಗೊಂದು ತಮಗೆ ಇಷ್ಟವಿರುವ ಕಾರ್ಯಕ್ರಮವನ್ನು ಈ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ವೀಕ್ಷಿಸಬಹುದಾಗಿದೆ. ಖಂಡಿತವಾಗಿ ಇದೊಂದು ಏರ್ಟೆಲ್ ಗ್ರಾಹಕರಿಗೆ ಅತ್ಯಂತ ಲಾಭದಾಯಕ ಯೋಜನೆ ಎಂದರೆ ತಪ್ಪಾಗಲಾರದು.