ಬಿಗ್ ನ್ಯೂಸ್: ಪುಷ್ಪ 2 ಅಲ್ಲಿ ವಿಜಯ್ ಸೇತುಪತಿ, ಹಾಗಿದ್ದರೇ ಡಾಲಿ ಪಾತ್ರದ ಕಥೆಯೇನು ಗೊತ್ತೇ??

7

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಲ್ಲು ಅರ್ಜುನ್ ನಟನೆಯಲ್ಲಿ ಮೂಡಿಬಂದಿರುವ ಚಿತ್ರ ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಕೂಡ ಬಾಲಿವುಡ್ನಲ್ಲಿ ನೂರು ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಮೂಲಕ ಚಿತ್ರದ ಜನಪ್ರಿಯತೆ ಹಾಗೂ ಅಲ್ಲು ಅರ್ಜುನ್ ರವರ ಮಾರುಕಟ್ಟೆಯ ಬೆಲೆಯ ಮೌಲ್ಯವನ್ನು ಎಲ್ಲರಿಗೂ ತೋರ್ಪಡಿಸುವಂತೆ ಮಾಡಿತ್ತು. ಹೌದು ಗೆಳೆಯರೇ ಪುಷ್ಪ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ ರವರ ಜೊತೆಗೆ ಹಲವಾರು ಜನರು ಪ್ರಮುಖವಾಗಿ ಈ ಚಿತ್ರದ ಮೂಲಕ ಮಿಂಚಿ ಮೆರೆದಿದ್ದರು.

ಆದರೆ ನಿರೀಕ್ಷಿತ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲು ಸಿನಿಮಾದಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ದೇಶಕ ಸುಕುಮಾರ್ ಅವರು ನಿರ್ಧಾರ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೆಲವೊಂದು ಗಾಳಿಸುದ್ದಿಗಳ ಪ್ರಕಾರ ಈಗಾಗಲೇ ರಶ್ಮಿಕ ಮಂದಣ್ಣ ನವರ ಪಾತ್ರವನ್ನು ಕೂಡ ಎರಡನೇ ಭಾಗದಲ್ಲಿ ಬೇಗನೆ ಮುಗಿಸುವ ನಿರ್ಧಾರವನ್ನು ಮಾಡಿದ್ದಾರೆ ಎಂಬುದಾಗಿ ಕೂಡ ಕೇಳಿಬಂದಿತ್ತು. ಮೊದಲ ಭಾಗದಲ್ಲಿ ಡಾಲಿ ಧನಂಜಯ್ ರವರ ಜಾಲಿ ರೆಡ್ಡಿ ಪಾತ್ರ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ ಆದರೆ ಎರಡನೇ ಭಾಗದಲ್ಲಿ ಹೆಚ್ಚಾಗಿ ಹಾಗೂ ಪ್ರಾಮುಖ್ಯತೆಯನ್ನು ಕೂಡ ನೀಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಮೊದಲ ಭಾಗದಲ್ಲಿ ನಡೆಸಬೇಕಾಗಿದ್ದ ವಿಜಯ್ ಸೇತುಪತಿ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೆ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ವಿಜಯ ಸೇತುಪತಿ ರವರು ಕಾಣಿಸಿಕೊಳ್ಳಲಿದ್ದು ಅವರು ಚಿತ್ರದಲ್ಲಿ ವಿಲನ್ ಶೇಡ್ ಹೊಂದಿರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ. ಇದು ಖಂಡಿತವಾಗಿ ಚಿತ್ರಕ್ಕೆ ಮತ್ತಷ್ಟು ಜನಪ್ರಿಯತೆ ಹಾಗೂ ನಿರೀಕ್ಷೆಯನ್ನು ಹೆಚ್ಚು ಮಾಡುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.