ಪವಿತ್ರ ಲೋಕೇಶ್ ರವರು ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಕೊಟ್ಟಿದ್ದೆ, ನರೇಶ್ ಮೂರನೇ ಪತ್ನಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಮಾಧ್ಯಮಗಳಲ್ಲಿ ಸುದ್ದಿ ಹಾಗೂ ಸದ್ದು ಮಾಡುತ್ತಿರುವ ಒಂದೇ ಒಂದು ವಿಚಾರ ಎಂದರೆ ಅದು ತೆಲುಗು ನಟ ನರೇಶ್ ಹಾಗೂ ಕನ್ನಡ ಚಿತ್ರರಂಗದ ನಟಿ ಆಗಿರುವ ಪವಿತ್ರ ಲೋಕೇಶ್ ರವರ ಮದುವೆ ವಿಚಾರಗಳ ಕುರಿತಂತೆ ನಡೆಯುತ್ತಿರುವ ಸತ್ಯಾಸತ್ಯತೆಗಳ ಚರ್ಚೆ. ಹೌದು ಗೆಳೆಯರೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದ ದಿನದಿಂದಲೂ ಕೂಡ ಇದರ ಕುರಿತಂತೆ ಯಾವುದು ಸತ್ಯ ಯಾವುದು ಸುಳ್ಳು ಎಂದು ಹೇಳಲು ಅಧಿಕೃತ ವ್ಯಕ್ತಿಗಳೇ ಇದುವರೆಗೂ ಕೂಡ ಮುಂದೆ ಬಂದಿಲ್ಲ ಎನ್ನುವುದೇ ವಿಪರ್ಯಾಸ ಎಂದು ಹೇಳಬಹುದಾಗಿದೆ.
ಇನ್ನು ಈ ವಿಚಾರದ ಕುರಿತಂತೆ ನರೇಶ್ ರವರ ಮೂರನೇ ಹೆಂಡತಿಯಾಗಿರುವ ಕನ್ನಡಮೂಲದ ರಮ್ಯಾ ರಘುಪತಿ ರವರು ಕೂಡ ಈ ಕುರಿತಂತೆ ಕೆಲವೊಂದು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಮನೆಗೆ ಪವಿತ್ರ ಲೋಕೇಶ್ ರವರು ಬಂದಿದ್ದಾಗ ತಾನು ಬೆಳ್ಳಿತಟ್ಟೆಯಲ್ಲಿ ಆಕೆಗೆ ಊಟ ಹಾಕಿದ್ದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಅವರು ನೆನಪಿಸಿಕೊಳ್ಳುತ್ತಾರೆ. ಅವರಿಬ್ಬರಿಗೂ ಈಗ ಮದುವೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ರಮ್ಯಾ ಕೂಡ ಸಿದ್ಧರಿಲ್ಲ ಎಂಬುದಾಗಿ ತಿಳಿದುಬಂದಿದೆ. ರಮ್ಯ ಹೇಳುವಂತೆ ನಟ ನರೇಶ್ ಒಬ್ಬ ದೊಡ್ಡ ಸುಳ್ಳು ಬುರುಕ ಎಂಬುದಾಗಿ ಕೂಡ ಹೇಳುತ್ತಾರೆ.

ಕೇವಲ ಇಷ್ಟು ಮಾತ್ರವಲ್ಲದೆ ನಾನು ಈಗಲೂ ಕೂಡ ಅವರ ಹೆಂಡತಿ ಯಾಗಿದ್ದೇನೆ ಇತ್ತೀಚೆಗಷ್ಟೇ ಅವರು ನನಗೆ ವಿವಾಹ ವಿಚ್ಛೇದನದ ಡಿವೋರ್ಸ್ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ ನಾನು ಕಾನೂನಾತ್ಮಕವಾಗಿ ಇದರ ಕುರಿತಂತೆ ಹೋರಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ನಾನು ಮೊದಲಿನಿಂದಲೂ ಕೂಡ ಇರುವ ಮನೆಯಲ್ಲೇ ಇದ್ದೇನೆ ಆದರೆ ಅವರೇ ಬಿಟ್ಟು ಹೋಗಿದ್ದಾರೆ ಎಂಬುದಾಗಿ ಕೂಡ ಗಂಡನ ಕುರಿತಂತೆ ಮಾತನಾಡಿದ್ದಾರೆ. ರಮ್ಯಾ ರವರಿಗೆ 9 ವರ್ಷದ ಮಗ ಕೂಡ ಇದ್ದಾನೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.