ತನ್ನ ಜೀವನದ ಅತಿ ಕೆಟ್ಟ ಸಿನೆಮಾವನ್ನು ಬಹಿರಂಗ ಪಡಿಸಿದ ಪೂಜಾ ಹೆಗ್ಡೆ. ಇದರಿಂದ ಪೂಜಾ ಹೆಗ್ಡೆ ರವರಿಗೆ ಏನೆಲ್ಲಾ ಆಯಿತು ಗೊತ್ತೇ?

23

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಹುಭಾಷಾ ತಾರೆಯಾಗಿ ಮಂಗಳೂರು ಮೂಲದ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಿಂದ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು ಕೂಡ ದಕ್ಷಿಣ ಭಾರತ ಚಿತ್ರರಂಗದ ನಟಿಯಾಗಿ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ಪೂಜಾ ಅವರೇ ಮೊದಲ ಆಯ್ಕೆಯಾಗಿ ನಿರ್ಮಾಪಕರು ನಿರ್ದೇಶಕರಿಗೆ ಕಾಣಿಸಿಕೊಳ್ಳುತ್ತಾರೆ.

ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ ಜೀವನದಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಪೂಜಾ ಹೊಂದಿದ್ದಾರೆ. ಈ ವರ್ಷ ಬಿಡುಗಡೆ ಆಗಿರುವ ತಲಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಎದುರಾಗಿ ಬಿಡುಗಡೆಯಾಗಿದ್ದರೂ ಕೂಡ ತಮಿಳುನಾಡು ಹಾಗೂ ವಿದೇಶಗಳಲ್ಲಿ ಸಕತ್ತಾಗಿಯೇ ಬಾಕ್ಸಾಫೀಸ್ ಕಮಾಯಿ ಮಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಚಿತ್ರದ ಕಲೆಕ್ಷನ್ ಹಾಗೂ ಪ್ರಚಾರಕ್ಕೆ ಪೂಜಾ ಹೆಗ್ಡೆ ರವರ ಹೆಸರು ಕೂಡ ಮೂಲ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ತಮ್ಮ ಸಿನಿಮಾ ಕರಿಯರ್ ನ ಅತ್ಯಂತ ಕಳಪೆ ಸಿನಿಮಾದ ಕುರಿತಂತೆ ಪೂಜಾ ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಪೂಜಾ ಹೆಗ್ಡೆ ರವರ ಸಿನಿಮಾ ಜೀವನದ ಅತ್ಯಂತ ಕಳಪೆ ಸಿನಿಮಾ ಯಾವುದು ಎಂಬುದನ್ನು ನೋಡುವುದಾದರೆ ಅದು ಬಾಲಿವುಡ್ ಚಿತ್ರರಂಗದ ಮೊಹೆಂಜೋದಾರೋ ಸಿನಿಮಾ ಆಗಿದೆ. ಪೂಜಾ ರವರ ಪಾದಾರ್ಪಣ ಸಿನಿಮಾ ಆಗಿರುವ ಮೊಹೆಂಜೋದಾರೋ 2016 ರಲ್ಲಿ ಬಿಡುಗಡೆಯಾಗಿದ್ದು ಇದರಲ್ಲಿ ನಾಯಕನಾಗಿ ಹೃತಿಕ್ ರೋಷನ್ ರವರು ಕಾಣಿಸಿಕೊಂಡಿದ್ದರು. ಇದಾದ ನಂತರ ಒಂದು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿ ಪೂಜಾ ಅವರಿಗೆ ಅವಕಾಶ ಸಿಗಲಿಲ್ಲ. ನಂತರ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಿದ ಮೇಲೆ ಅವರ ಜನಪ್ರಿಯತೆ ಮತ್ತೆ ಮರುಕಳಿಸಿ ಬರುತ್ತದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.