ಕೆಲವೇ ದಿನಗಳಿಗೆ ಹನಿಮೂನ್ ಮುಗಿಸಿ ಬಂದ ನಯನತಾರ ವಿಜ್ಞೇಶ್. ಕಾರಣ ಏನಂತೆ ಗೊತ್ತೇ? ಬಂದ ತಕ್ಷಣ ಮಾಡಿದ್ದೇನು ಗೊತ್ತೇ?

13

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ಈಗಾಗಲೇ ಗೊತ್ತಿರುವ ಹಾಗೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಜ್ಞೇಶ್ ಹಾಗೂ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ಇಬ್ಬರೂ ಕೂಡ ಕೆಲವೇ ಕೆಲವು ದಿನಗಳ ಹಿಂದಷ್ಟೇ ಮದುವೆಯಾಗಿ ಥೈಲ್ಯಾಂಡ್ ಗೆ ಹನಿಮೂನ್ ಸಲುವಾಗಿ ಹೋಗಿದ್ದರು. ಇನ್ನು ಇವರು ತಾಯಿ ಲ್ಯಾಂಡ್ ಗೆ ಹೋಗಿ ಅಲ್ಲಿ ಸುಂದರವಾದ ಸ್ಥಳಗಳಲ್ಲಿ ಭೇಟಿ ನೀಡಿರುವ ಫೋಟೋಗಳು ಕೂಡ ಈಗಾಗಲೇ ಸೋಶಿಯಲ್ ಮೀಡಿಯಾ ಗಳಲ್ಲಿ ಗುಲ್ಲೆಬ್ಬಿಸುತ್ತಿದೆ.

ಆದರೆ ಕೆಲವೇ ಕೆಲವು ದಿನಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್ ದಂಪತಿಗಳು ಇಬ್ಬರೂ ಕೂಡ ಹನಿಮೂನ್ ಮುಗಿಸಿಕೊಂಡು ಈಗಾಗಲೇ ಬಂದುಬಿಟ್ಟಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ. ಇದೇನಪ್ಪ ಇಷ್ಟು ಬೇಗ ಹನಿಮೂನ್ ಮುಗಿಸಿಕೊಂಡು ಬಂದು ಬಿಟ್ಟಿರುವುದಾಗಿ ನೆಟ್ಟಿಗರು ಮೂಗಿನ ಮೇಲೆ ಬೆರಳಿಡು ವುದಕ್ಕೆ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗಲೆಲ್ಲ ಅವರಿಬ್ಬರ ನಡುವೆ ಜಗಳ ನಡೆದಿರಬಹುದು ಎನ್ನುವುದಾಗಿ ಕೆಲವು ಯೋಚಿಸುತ್ತಾರೆ. ಆದರೆ ವಿಷಯ ಅದಲ್ಲ ಗೆಳೆಯರೇ ನಯನತಾರಾ ಅವರು ಈಗಾಗಲೇ ತಮ್ಮ ಸಿನಿಮಾಗಳಿಗೆ ಡೇಟ್ ಗಳನ್ನು ನೀಡಿ ಬಿಟ್ಟಿದ್ದಾರೆ. ಹೀಗಾಗಿ ಆ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣಕ್ಕೆ ನಯನತಾರ ಹಾಜರಾಗ ಬೇಕಾಗಿರುವುದು ಅತ್ಯಗತ್ಯವಾಗಿದೆ ಯಾಕಂದರೆ ಈಗ ಸದ್ಯದ ಮಟ್ಟಿಗೆ ಅತ್ಯಂತ ಬಹುಬೇಡಿಕೆ ನಟಿಯಾಗಿದ್ದಾರೆ.

ಇನ್ನು ಅವರ ಜೊತೆಗೆ ಸಿನಿಮಾ ಮಾಡಬೇಕು ಎಂದು ಹಲವಾರು ನಿರ್ಮಾಪಕ-ನಿರ್ದೇಶಕರು ಕೂಡ ಸರತಿಸಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು ಈಗಾಗಲೇ ಶಾರುಖ್ ಖಾನ್ ನಟನೆಯ ಹಾಗೂ ತಮಿಳು ನಿರ್ದೇಶಕ ಆಗಿರುವ ಆಟ್ಲಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಜವಾನ್ ಸಿನಿಮಾದಲ್ಲಿ ನಯನತಾರಾ ರವರು ನಾಯಕಿಯಾಗಿ ಆಯ್ಕೆಯಾಗಿದ್ದು ಹನಿಮೂನ್ ಮುಗಿಸಿಕೊಂಡು ಬಂದ ನಂತರ ನೇರವಾಗಿ ಚಿತ್ರದ ಚಿತ್ರೀಕರಣಕ್ಕೆ ನಯನತಾರ ಅವರು ಹೋಗಿದ್ದಾರೆ. ಈ ವಿಚಾರವನ್ನು ತಿಳಿದು ನಂತರ ನಯನತಾರಾ ರವರ ಕಾರ್ಯತತ್ಪರತೆಯ ಕುರಿತಂತೆ ಇರುವಂತಹ ಆಸಕ್ತಿ ಹಾಗೂ ಗೌರವವನ್ನು ಎಲ್ಲರೂ ಕೂಡ ಮೆಚ್ಚಿ ಹೊಗಳಿದ್ದಾರೆ.