ಪ್ರೆಗ್ನನ್ಸಿ ತಿಳಿಸಿದ ಎರಡು ದಿನಗಳ ಬಳಿಕ ಆಲಿಯಾ ಏನು ಮಾಡಿದ್ದಾರೆ ಗೊತ್ತೆ?? ಮಗು ಹುಟ್ಟುವ ಮುನ್ನವೇ ಮಾಡಿದ್ದೇನು ಗೊತ್ತೇ??

34

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಸ್ಟಾರ್ ಜೋಡಿ ಗಳಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಕೂಡ ಮದುವೆಯಾಗಿ ಇನ್ನು ಕೇವಲ ಎರಡು ತಿಂಗಳು ಮಾತ ಕಳೆದಿವೆ. ಅಷ್ಟರಲ್ಲೇ ಇಬ್ಬರೂ ಕೂಡ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸಂತೋಷದ ಸುದ್ದಿಯನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರೂ ಖುಷಿ ಪಡುವಂತೆ ಮಾಡಿದ್ದಾರೆ. ಹೌದು ಗೆಳೆಯರೇ ಇಬ್ಬರ ಭೇಟಿ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆಯುತ್ತದೆ ಹಾಗೂ ಅಲ್ಲಿಂದಲೇ ಇವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಇಬ್ಬರು ಕೂಡ ತಮ್ಮ ಸಿನಿಮಾರಂಗದ ಉತ್ತುಂಗದಲ್ಲಿ ಇರಬೇಕಾದರೆ ಮದುವೆಯಾಗುತ್ತಾರೆ. ಮದುವೆಯಾದ ಎರಡು ತಿಂಗಳಿನಲ್ಲಿ ಈಗ ಆಲಿಯ ತಾವು ತಾಯಿಯಾಗುತ್ತಿರುವ ಕುರಿತಂತೆ ಅಧಿಕೃತ ವಾಗಿ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಸಾಮಾನ್ಯವಾಗಿ ನೀವೆಲ್ಲ ನೋಡಿರುವಂತೆ ಯಾವುದೇ ಸ್ಟಾರ್ ಜೋಡಿಗಳು ತಮ್ಮ ಸಿನಿಮಾರಂಗದಲ್ಲಿ ಬೇಡಿಕೆ ಸಂದರ್ಭದಲ್ಲಿ ಯಾವತ್ತೂ ಕೂಡ ಮದುವೆಯನ್ನಾಗಲಿ ಅಥವಾ ಮಕ್ಕಳನ್ನು ಪಡೆಯುವುದಾಗಲೀ ಮಾಡಿಕೊಳ್ಳಲು ಹೋಗುವುದಿಲ್ಲ. ಆದರೆ ನಿಜಕ್ಕೂ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಈ ನಿರ್ಧಾರಕ್ಕೆ ನಿಜಕ್ಕೂ ತಲೆಬಾಗಲೇ ಬೇಕು.

ಇನ್ನು ಮಗು ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಆಲಿಯಾ ರಣಬೀರ್ ಜೋಡಿ ಈಗ ಮಾಡಿರೋದು ಏನು ಎಂದು ತಿಳಿದರೆ ಖಂಡಿತ ವಾಗಿ ನೀವು ಕೂಡ ಖುಷಿ ಪಡ್ತೀರ. ಹೌದು ಗೆಳೆಯರೇ ಇಬ್ರೂ ಕೂಡ ವಿದೇಶದಲ್ಲಿ ಈಗಾಗಲೇ ಮಗು ಹುಟ್ಟುವ ಮುನ್ನವೇ ಮಗುವಿಗಾಗಿ ಬಟ್ಟೆಗಳನ್ನು ಸೇರಿದಂತೆ ಹಲವಾರು ವಸ್ತುಗಳನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರೂ ಪೋಷಕರಾಗುತ್ತಿರುವ ಸುದ್ದಿಯನ್ನು ಇವರಿಬ್ಬರ ಅಭಿಮಾನಿಗಳು ಸೇರಿದಂತೆ ಇಡೀ ಬಾಲಿವುಡ್ ಚಿತ್ರರಂಗವೇ ಸಂಭ್ರಮಿಸಿದೆ.