ಶನಿ ದೇವನ ಹಿಮ್ಮುಖ ಚಲನೆಯ ಸಮಯದಲ್ಲಿ ಗುರು ವಕ್ರ ನಡೆ. ತೆರೆಯಲಿದೆ ಅದೃಷ್ಟದ ಬಾಗಿಲು. ಯಾವ್ಯಾವ ರಾಶಿಯವರಿಗೆ ಗೊತ್ತೇ?

30

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ವಕ್ರ ನಡೆ ಸಂಭವಿಸುತ್ತಿರುವ ಸಂದರ್ಭದಲ್ಲಿಯೇ ಶುಭಕಾರಕ ಆಗಿರುವ ಗುರು ಅಂದರೆ ಬ್ರಹಸ್ಪತಿ ಜುಲೈ 29 ರಿಂದ ರಾಶಿಯಾಗಿರುವ ಮೀನರಾಶಿಯಲ್ಲಿ ವಕ್ರ ನಡೆಯನ್ನು ತೋರಿಸಲಿದ್ದಾನೆ. ಇದರಿಂದಾಗಿ ಲಾಭ ಪಡೆದುಕೊಳ್ಳಲಿರುವ 4 ರಾಶಿಗಳು ಯಾವ್ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ವ್ಯಾಪಾರದಲ್ಲಿ ನಷ್ಟ ಕಡಿಮೆಯಾಗಿ ಲಾಭದ ಹೆಚ್ಚಳ ಕಂಡು ಬರಲಿದೆ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಕೂಡ ಸುಧಾರಣೆಯನ್ನು ಕಾಣಲಿದೆ. ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಹಾಗೂ ಕುಟುಂಬಸ್ಥರ ಆರೋಗ್ಯದಲ್ಲಿ ಕೂಡ ಪ್ರಗತಿ ಕಂಡು ಬರಲಿದೆ.

ಮಿಥುನ ರಾಶಿ; ಈ ಸಂದರ್ಭದಲ್ಲಿ ನಿಮ್ಮ ಭಾಷೆ ಮತ್ತು ನಾಲಿಗೆ ಮೇಲೆ ಹಿಡಿತವನ್ನು ಇಟ್ಟುಕೊಂಡರೆ ಒಳ್ಳೆಯ ಮಾರ್ಗದರ್ಶನದಿಂದ ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡಮಟ್ಟದ ಗೆಲುವನ್ನು ಸಾಧಿಸಲಿದ್ದೀರಿ. ಪ್ರತಿಯೊಂದು ವಿಚಾರದಲ್ಲಿ ಕೂಡ ಸಂಪೂರ್ಣ ಮಟ್ಟದ ಪರಿಶ್ರಮವನ್ನು ವಿನಿಯೋಗಿಸಿ.

ಕರ್ಕ ರಾಶಿ; ಸಂಪತ್ತು ಹೆಚ್ಚಳ ಹಾಗೂ ಸಮಾಜದಲ್ಲಿ ಗೌರವ ಕೀರ್ತಿ ಸನ್ಮಾನಗಳು ಕೂಡ ಹೆಚ್ಚು ಕಂಡು ಬರಲಿವೆ. ಸಾಕಷ್ಟು ದಿನಗಳಿಂದ ನಿಂತುಕೊಂಡಿರುವ ಕೆಲಸ ಪೂರ್ಣಗೊಳ್ಳಲಿದೆ. ಹೊಸ ಇನ್ವೆಸ್ಟ್ಮೆಂಟ್ ನಿಮಗೆ ಲಾಭವನ್ನು ತರಲಿದ್ದು ಕುಟುಂಬದ ಸದಸ್ಯರ ಆರೋಗ್ಯದ ಕುರಿತಂತೆ ನಿಗಾವಹಿಸಿ.

ಕುಂಭ ರಾಶಿ; ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆರ್ಥಿಕವಾಗಿ ನಿಮ್ಮ ಆದಾಯ ಹೆಚ್ಚು ಕಂಡು ಬರಲಿದ್ದು ಇದನ್ನು ನೀವು ಹೂಡಿಕೆಯಲ್ಲಿ ವಿನಿಯೋಗಿಸಿ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಕುಟುಂಬದ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ನೀವು ಸಮರ್ಪಕವಾಗಿ ನಿಭಾಯಿಸಲಿದ್ದೀರಿ. ಇವುಗಳೇ ಲಾಭವನ್ನು ಪಡೆಯಲಿರುವ 4 ರಾಶಿಗಳು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.