ರೋಹಿತ್ ತಂಡದಿಂದ ಹೊರ ಹೋಗುತ್ತಿದ್ದಂತೆ ಮಯಾಂಕ್ ರವರಿಗೆ ಬುಲಾವ್. ಮತ್ತೊಮ್ಮೆ ಅವಕಾಶ ಪಡೆದ ಮಯಾಂಕ್.
ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಕಳೆದ ವರ್ಷದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಮುಗಿಸುವ ಸಲುವಾಗಿ ಕೊನೆಯ ಒಂದು ಟೆಸ್ಟ್ ಪಂದ್ಯವನ್ನು ಆಡಲು ಇಂಗ್ಲೆಂಡಿಗೆ ಬಂದಿಳಿದಿದ್ದು ಅಭ್ಯಾಸ ಪಂದ್ಯವನ್ನು ಕೂಡ ಚೆನ್ನಾಗಿ ಆಡಿದೆ. ಹೌದು ಗೆಳೆಯರೇ ಆದರೆ ಈಗ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಆಗಿರುವ ರೋಹಿತ್ ಶರ್ಮಾ ರವರಿಗೆ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದ್ದು ಅವರ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ರವರಿಗೆ ಬಿಸಿಸಿಐ ಇಂಗ್ಲೆಂಡಿಗೆ ಬುಲಾವ್ ನೀಡಿದೆ.
ಈಗಾಗಲೇ ಮಯಾಂಕ್ ಅಗರ್ವಾಲ್ ರವರು ಕೂಡ ತಂಡವನ್ನು ಸೇರಿಕೊಳ್ಳುವ ತಯಾರಿಯಲ್ಲಿದ್ದ ಇದೆ ಜುಲೈ 1ರಿಂದ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಅವರು ಕೂಡ ಪಾಸಿಟಿವ್ ಕಂಡುಬಂದಿದ್ದು ಅವರನ್ನು ಕೂಡ ಚಿಕಿತ್ಸೆಗೆ ಒಳಪಡಿಸಲಾಗಿತ್ತು ನಂತರ ಅವರು ಅಭ್ಯಾಸ ಪಂದ್ಯದಲ್ಲಿ ಆಡಿದ್ದರು. ಕಳೆದ ಬಾರಿ ಕೂಡ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಐದು ಪಂದ್ಯಗಳ ಟೆಸ್ಟ್ ಪಂದ್ಯವನ್ನು ಪೂರ್ಣವಾಗಿ ಆಡಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಈಗ ರೋಹಿತ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಮಾಯಾಂಕ್ ಅಗರ್ವಾಲ್ ರವರನ್ನು ಸೇರಿಸಿಕೊಳ್ಳಲಾಗಿದ್ದು ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ 2-1 ಪಂದ್ಯಗಳ ಮುನ್ನಡೆಯಲಿದೆ ಕೊನೆಯ ಟೆಸ್ಟ್ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಳ್ಳುವ ಸನ್ನಾಹದಲ್ಲಿದೆ. ಈ ಟೆಸ್ಟ್ ಪಂದ್ಯವನ್ನು ಯಾರು ಗೆಲ್ಲಲಿದ್ದಾರೆ ಎಂಬ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.